ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ತೊರೆಯಲು ರಂದೀಪ್ ಸಿಂಗ್ ಸುರ್ಜೆವಾಲಾ ಇಚ್ಛೆ?: ಕೇಳಿಬರುತ್ತಿದೆ ಹೀಗೊಂದು ವದಂತಿ!

ಕರ್ನಾಟಕ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ರಂದೀಪ್ ಸಿಂಗ್ ಸುರ್ಜೆವಾಲಾ ಮುಂದುವರಿಯುವುದು ಸಂಶಯವಾಗಿದೆ. 
ರಂದೀಪ್ ಸಿಂಗ್ ಸುರ್ಜೆವಾಲಾ
ರಂದೀಪ್ ಸಿಂಗ್ ಸುರ್ಜೆವಾಲಾ

ಬೆಂಗಳೂರು: ಕರ್ನಾಟಕ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ರಂದೀಪ್ ಸಿಂಗ್ ಸುರ್ಜೆವಾಲಾ ಮುಂದುವರಿಯುವುದು ಸಂಶಯವಾಗಿದೆ. 

ವೈಯಕ್ತಿಕ ಕಾರಣಗಳಿಂದ ತಮ್ಮ ತವರು ರಾಜ್ಯ ಹರ್ಯಾಣದ ಕಾಂಗ್ರೆಸ್ ಉಸ್ತುವಾರಿ ಕೊಡಿ ಎಂದು ಹೈಕಮಾಂಡ್ ಬಳಿ ರಂದೀಪ್ ಸುರ್ಜೆವಾಲಾ ಕೇಳಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಬೆಂಗಳೂರಿಗೆ ಬಂದು ಹೋಗುವುದು ಕಷ್ಟವಾಗಿದ್ದು ದೆಹಲಿಗೆ ಸಮೀಪದ ರಾಜ್ಯದಲ್ಲಿಯೇ ತಮಗೆ ಉಸ್ತುವಾರಿ ಕೊಡಿ ಎಂದು ರಂದೀಪ್ ಕೇಳುತ್ತಿದ್ದಾರೆ ಎಂಬ ಸುದ್ದಿಗಳು ಬರುತ್ತಿದ್ದು ಆದರೆ ಇದು ದೃಢಪಟ್ಟಿಲ್ಲ, ಕೇವಲ ವದಂತಿಯಷ್ಟೆ.

ಅನಾರೋಗ್ಯ ಕಾರಣದಿಂದ ದೀರ್ಘ ಪ್ರಯಾಣ ದೃಷ್ಟಿಯಿಂದ ಕರ್ನಾಟಕ ಉಸ್ತುವಾರಿ ಬೇಡ ಎಂದು ರಂದೀಪ್ ಕೇಳುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು ಈ ಬಗ್ಗೆ ಅವರಿಂದಲಾಗಲಿ, ಕಾಂಗ್ರೆಸ್ ಹೈಕಮಾಂಡ್ ನಿಂದಾಗಲಿ ಮಾಹಿತಿ ಬಂದಿಲ್ಲ. ರಾಹುಲ್ ಗಾಂಧಿಯವರಿಗೆ ಆಪ್ತರಾಗಿರುವ ಸುರ್ಜೆವಾಲಾ ಎಐಸಿಸಿಯ ಮಾಧ್ಯಮ ವಿಭಾಗದ ಉಸ್ತುವಾರಿಯನ್ನು ಕಳೆದ 5 ವರ್ಷಗಳಿಂದ ಹೊತ್ತುಕೊಂಡಿದ್ದಾರೆ.

ಹರ್ಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ರಾಜ್ಯದಲ್ಲಿ ರಾಜಕೀಯವಾಗಿ ಭದ್ರ ನೆಲೆ ಕಂಡುಕೊಳ್ಳುವ ಇಂಗಿತವನ್ನು ಸುರ್ಜೆವಾಲಾ ಹೊಂದಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರೊಬ್ಬರೇ ಹೇಳುತ್ತಾರೆ. 10 ತಿಂಗಳ ಹಿಂದೆ ಕರ್ನಾಟಕ ರಾಜ್ಯ ಉಸ್ತುವಾರಿ ನೇಮಕಗೊಂಡ ಸುರ್ಜೆವಾಲಾ ಅವರಿಗಿಂತ ಮೊದಲು ಕೆ ಸಿ ವೇಣುಗೋಪಾಲ್ ಉಸ್ತುವಾರಿ ವಹಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com