ನಾಯಕತ್ವ ಬದಲಾವಣೆ ವಿಚಾರ: ಸಿಎಂ ಯಡಿಯೂರಪ್ಪಗೆ ಸಿಕ್ಕ 'ಶ್ರೀ' ರಕ್ಷೆ; ಮತ್ತಷ್ಬು ''ಕಾವಿ'' ಗಳ ಬೆಂಬಲ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಗೊಂದಲಗಳು ಮುಂದುವರೆದಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಠಾಧೀಶರ ಬೆಂಬಲ ಹೆಚ್ಚಾಗುತ್ತಿದೆ. ಪಕ್ಷಬೇಧ ಬಿಟ್ಟು ಲಿಂಗಾಯತ ಸಮುದಾಯದ ನಾಯಕರು ಯಡಿಯೂರಪ್ಪ ಅವರ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 
ತುಮಕೂರಿನ ಗುಬ್ಬಿಯಲ್ಲಿ ಯಡಿಯೂರಪ್ಪ ಪರ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಲಿಂಗಾಯತ ಶ್ರೀಗಳು
ತುಮಕೂರಿನ ಗುಬ್ಬಿಯಲ್ಲಿ ಯಡಿಯೂರಪ್ಪ ಪರ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಲಿಂಗಾಯತ ಶ್ರೀಗಳು

ತುಮಕೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಗೊಂದಲಗಳು ಮುಂದುವರೆದಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಠಾಧೀಶರ ಬೆಂಬಲ ಹೆಚ್ಚಾಗುತ್ತಿದೆ. ಪಕ್ಷಬೇಧ ಬಿಟ್ಟು ಲಿಂಗಾಯತ ಸಮುದಾಯದ ನಾಯಕರು ಯಡಿಯೂರಪ್ಪ ಅವರ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಯಡಿಯೂರಪ್ಪ ಅವರು ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ಸಾದ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ವಿಚಾರದ ತೀವ್ರ ಸಂಚಲನ ಮೂಡಿಸಿದೆ. 

ನಾಯಕತ್ವ ಬದಲಾವಣೆಯ ವದಂತಿ ಬಿರುಸುಗೊಂಡ ಬೆನ್ನಲ್ಲೇ, ಯಡಿಯೂರಪ್ಪ ಪರ ‘ಒಗ್ಗೂಡುತ್ತಿರುವ’ ವಿವಿಧ ಸಮುದಾಯಗಳ ಮಠಾಧೀಶರು, ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಆರಂಭಿಸಿದ್ದಾರೆ. ಇದರಂತೆ ನಿನ್ನೆಯಷ್ಟೇ ಗುಬ್ಬಿಯಲ್ಲಿ ಹಲವಾರು ಶ್ರೀಗಳು ಸಭೆ ಸೇರಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೇ ಆದರೆ, ಬಿಜೆಪಿ ನಾಮಾವಶೇಷ ಆಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ತುಮಕೂರು ಜಿಲ್ಲೆಯ ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮಿಜಿಗಳು, ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ, ಯಡಿಯೂರಪ್ಪ ಒಬ್ಬರೇ ಅಲ್ಲ ಬೇರೆ ಯಾವುದೇ ಪಕ್ಷದ ನಾಯಕರಾದರೂ ಉತ್ತಮರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮಕ್ಕಳು, ಕುಟುಂಬದವರು ಅಧಿಕಾರದಲ್ಲಿದ್ದವರ ಹತ್ತಿರಕ್ಕೆ ಹೋಗಬಾರದು ಎಂದು ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಸ್ವಾಮಿಜಿ ಪರೋಕ್ಷ ಹೇಳಿಕೆ ನೀಡಿದ್ದಾರೆ.

ರಾಜ್ಯದ ಆಡಳಿತ ನಡೆಸುವಾಗ ರಾಜ್ಯದ ಉನ್ನತ ಅಧಿಕಾರ ಹಿಡಿದಾಗ ಅವರ ಮಕ್ಕಳು ಮತ್ತು ಕುಟುಂಬ ಸೇವೆ ಮಾಡಲು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವಿಚಾರ ಬಹಳ ಮುಖ್ಯ. ಅದನ್ನ ದೇಶ ಹಾಗೂ ರಾಜ್ಯದ ಜನರು ಗಮನಿಸುತ್ತಾರೆ. ಮಕ್ಕಳು ತಮಗೆ ತಾವೇ ಸ್ವಯಂ ಪ್ರತಿಬಂಧನೆ ಹಾಕಿಕೊಳ್ಳಬೇಕು. ಅಧಿಕಾರದಲ್ಲಿದ್ದವರ ಮಕ್ಕಳನ್ನ ಬೇರೆಯವರು ಎದುರುಗಡೆ ಹೊಗಳಬಹುದು. ಆದರೆ ಇಡೀ ದೇಶದ ಜನ ಶೇ.90‌ ಭಾಗದ ಜನ ಆಡಳಿಯ ಯಂತ್ರದ ವ್ಯವಸ್ಥೆಯನ್ನ ಗಮನಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರು ಯಾವ ತಪ್ಪು ಮಾಡಿದ್ದಾರೆಂಬುದು ನಮಗೆ ಗೊತ್ತಿಲ್ಲ. ಒಂದು ವೇಳೆ ಮಾಡಿದ್ದರು, ಕೆಲವು ಪರಿಸ್ಥಿತಿಗಳಿಂದ ಮಾಡಿರಬಹುದು. ಅವರನ್ನು ಕ್ಷಮಿಸಬೇಕು. ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಪ್ರಸ್ತುತ ಎದ್ದಿರುವ ಗೊಂದಲಗಳಿಗೆ ಹೈಕಮಾಂಡ್ ಅಂತ್ಯ ಹಾಡಬೇಕು. ಇಲ್ಲದಿದ್ದರೆ, ಇದು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 

ದೊಡ್ಡಗುಣಿ ಮಠದ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿಗಳು ಮಾತನಾಡಿ, ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವವನ್ನು ಚಾಚುತಪ್ಪದೇ ಪಾಲಿಸಿದ ಯಡಿಯೂರಪ್ಪ ಅವರು ಯುವಕರ ರೀತಿ ಚುರುಕಿನ ಕೆಲಸ ಮಾಡಿದ್ದಾರೆ. ಅವರ ಹುಮ್ಮಸ್ಸು ಗಮನಿಸಿದರೆ ವಯಸ್ಸಿನ ಮಾನದಂಡ ಸಲ್ಲದು. ರೈತಪರ ಕೆಲಸಗಳಿಗೆ ಎತ್ತಿದ ಕೈ ಎನಿಸಿಕೊಂಡ ಅವರು ಗುಬ್ಬಿ ತಾಲ್ಲೂಕಿಗೆ ಹೇಮೆ ಹರಿಸುವ ನೀರು ಕೇರೆಗಳ ಯೋಜನೆ ಇಂದಿಗೂ ಸಾಕ್ಷಿಯಾಗಿದೆ. ಜನಮನ ಗೆದ್ದ ಅವರಿಂದ ಅಧಿಕಾರಿ ಕಿತ್ತುಕೊಳ್ಳುವುದು ಸೂಕ್ತವಲ್ಲ. ಅವರನ್ನು ಕೆಳಗಿಳಿಸಿದ್ದಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ಮೊರಾರ್ಜಿ ದೇಸಾಯಿ ಅವರು 85 ನೇ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದರು. ಯಡಿಯೂರಪ್ಪ ಅವರು ಜನಸಾಮಾನ್ಯರ ನಾಯಕರಾಗಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿ, ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com