ರಾಜ್ಯದ ನೂತನ ಸಿಎಂ ಬಗ್ಗೆ ಬಿಜೆಪಿ ಹೈ ಕಮಾಂಡ್ ನಿರ್ಧರಿಸಲಿದೆ: ಕೆ.ಎಸ್.ಈಶ್ವರಪ್ಪ

ಪಕ್ಷ ಮತ್ತು ಪಕ್ಷದ ನಿರ್ಧಾರವೇ ಮುಖ್ಯ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಇಡೀ ಕರ್ನಾಟಕ ಒಪ್ಪಿಕೊಂಡಿದೆ. ರಾಷ್ಟ್ರೀಯ ನಾಯಕರು ನೀಡಿದ ನಿರ್ದೇಶನದಂತೆ ಯಡಿಯೂರಪ್ಪ ಅವರು ನಡೆದುಕೊಳ್ಳಲಿದ್ದಾರೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಹೇಳಿದ್ದಾರೆ. 
ಮುರುಗಾ ಮಠದಲ್ಲಿ ಕೆ.ಎಸ್.ಈಶ್ವರಪ್ಪ
ಮುರುಗಾ ಮಠದಲ್ಲಿ ಕೆ.ಎಸ್.ಈಶ್ವರಪ್ಪ

ಚಿತ್ರದುರ್ಗ: ಪಕ್ಷ ಮತ್ತು ಪಕ್ಷದ ನಿರ್ಧಾರವೇ ಮುಖ್ಯ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಇಡೀ ಕರ್ನಾಟಕ ಒಪ್ಪಿಕೊಂಡಿದೆ. ರಾಷ್ಟ್ರೀಯ ನಾಯಕರು ನೀಡಿದ ನಿರ್ದೇಶನದಂತೆ ಯಡಿಯೂರಪ್ಪ ಅವರು ನಡೆದುಕೊಳ್ಳಲಿದ್ದಾರೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಹೇಳಿದ್ದಾರೆ. 

ಮುರುಗಾಮಠಕ್ಕೆ ಬೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ವೇಳೆ ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಅವರ ಹೇಳಿಕೆಯನ್ನು ಬದಿಗೊತ್ತಿ ಮಾತನಾಡಿದ ಅವರು, ಮುಂದಿನ ಸಿಎಂ ಕುರಿತು ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ. 

ಬಳಿಕ ಕುರುಬ ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಆಗ್ರಹಗಳಿಗೆ ಉತ್ತರಿಸಿದ ಅವರು, ಇದು ಅಭಿಮಾನಿಗಳು, ಬೆಂಬಲಿಗರ ಆಗ್ರಹವಾಗಿದೆ. ಆದರೆ, ಅಂತಿಮವಾಗಿ ಈ ಕುರಿತು ಕೇಂದ್ರೀಯ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com