ಉಪ ಮುಖ್ಯಮಂತ್ರಿಯಾಗಬೇಕೆಂದು ಹರಕೆ ಹೊತ್ತಿದ್ದರೇ ಶ್ರೀರಾಮುಲು? 

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಮತ್ತು ಉಪ ಮುಖ್ಯಮಂತ್ರಿಗಳಾಗಿ ಗೋವಿಂದ ಕಾರಜೋಳ, ಆರ್ ಅಶೋಕ್ ಮತ್ತು ಬಿ ಶ್ರೀರಾಮುಲುಗೆ ಹುದ್ದೆ ಸಿಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ಅವರ ಹೆಸರಿನಲ್ಲಿ ದೇವಸ್ಥಾನದಲ್ಲಿ ಚೀಟಿಯಲ್ಲಿ ಬರೆದದ್ದು ವೈರಲ್ ಆಗುತ್ತಿದೆ.
ಶ್ರೀರಾಮುಲು ಅವರು ಬರೆದಿದ್ದರು ಎನ್ನಲಾಗುತ್ತಿರುವ ದೇವಸ್ಥಾನದ ಹರಕೆ ಹುಂಡಿಗೆ ಹಾಕಿರುವ ಚೀಟಿ
ಶ್ರೀರಾಮುಲು ಅವರು ಬರೆದಿದ್ದರು ಎನ್ನಲಾಗುತ್ತಿರುವ ದೇವಸ್ಥಾನದ ಹರಕೆ ಹುಂಡಿಗೆ ಹಾಕಿರುವ ಚೀಟಿ

ಯಾದಗಿರಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಮತ್ತು ಉಪ ಮುಖ್ಯಮಂತ್ರಿಗಳಾಗಿ ಗೋವಿಂದ ಕಾರಜೋಳ, ಆರ್ ಅಶೋಕ್ ಮತ್ತು ಬಿ ಶ್ರೀರಾಮುಲುಗೆ ಹುದ್ದೆ ಸಿಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ಅವರ ಹೆಸರಿನಲ್ಲಿ ದೇವಸ್ಥಾನದಲ್ಲಿ ಚೀಟಿಯಲ್ಲಿ ಬರೆದದ್ದು ವೈರಲ್ ಆಗುತ್ತಿದೆ.

ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೆ ಇವರ ಮೂವರ ಹೆಸರುಗಳನ್ನು ಘೋಷಣೆ ಮಾಡಲಾಗಿದ್ದು ಇಂದು ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಮಾತ್ರ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಲಿಂಗಾಯಿತ, ಒಕ್ಕಲಿಗ, ದಲಿತ ಮತ್ತು ವಾಲ್ಮೀಕಿ ಸಮುದಾಯದವರಿಗೆ ಮಣೆ ಹಾಕಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಯಾದಗಿರಿಯ ಗಡೆ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀರಾಮುಲು ಅವರೇ ಬರೆದಿದ್ದರು ಎನ್ನಲಾಗುತ್ತಿರುವ ಮನದ ಬಯಕೆಯ ಚೀಟಿ ಇದೀಗ ವೈರಲ್ ಆಗುತ್ತಿದೆ. ಶ್ರೀರಾಮುಲು ಅವರ ಸ್ವಹಸ್ತಾಕ್ಷರದಲ್ಲಿ ಬರೆದು ಚೀಟಿಯನ್ನು ದೇವಿಯ ಗುಡಿಗೆ ಹಾಕಿ ಹರಕೆ ಹೊತ್ತುಕೊಂಡಿದ್ದರೇ ಎಂಬ ಮಾತುಗಳು ಸುತ್ತಮುತ್ತಲಿನ ಜನರಲ್ಲಿ ಕೇಳಿಬರುತ್ತಿದೆ. ಹಾಗಾದರೆ ಶ್ರೀರಾಮುಲು ಅವರು ಅಂದುಕೊಂಡಂತೆ ಅವರಿಗೆ ಉಪ ಮುಖ್ಯಮಂತ್ರಿ ಪದವಿ ಒಲಿಯಿತೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com