ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು?

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಚಿಕ್ಕಮಗಳೂರು ಬಿಜೆಪಿ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಮ್ಮ ಫೇಸ್ ಬುಕ್ ನಲ್ಲಿ ವಿಜಯನಗರ ಸಾಮ್ರಾಜ್ಯದ ಕಥೆಯೊಂದನ್ನು ಶೇರ್ ಮಾಡಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಚಿಕ್ಕಮಗಳೂರು ಬಿಜೆಪಿ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಮ್ಮ ಫೇಸ್ ಬುಕ್ ನಲ್ಲಿ ವಿಜಯನಗರ ಸಾಮ್ರಾಜ್ಯದ ಕಥೆಯೊಂದನ್ನು ಶೇರ್ ಮಾಡಿದ್ದಾರೆ.

ನಿನ್ನೆ ರಾತ್ರಿ ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರದ ಏಳುಬೀಳುಗಳ ಕಥೆಯನ್ನು ಓದುತ್ತಿದ್ದೆ. ಆಗ ನನ್ನ ನೆನಪಿನಂಗಳದಲ್ಲಿ ವಿ.ನಾಗರಾಜ್ ಅವರು ಹೇಳಿದ "ಅಳಿಯ ರಾಮರಾಯ"ರ ಕಥೆ ನೆನಪಾಯಿತು‌. 

ಭಟ್ಟಂಗಿಗಳನ್ನು ನೇಮಿಸಿಕೊಂಡು ಹೇಗೆ ರಾಮರಾಯ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡ ಎಂಬುದನ್ನು ವಿಸ್ತೃತವಾಗಿ ವಿವರಿಸಿರುವ ಕಥೆಯಲ್ಲಿ, 'ಅನುಮಾನಂ ಪೆದ್ದ ರೋಗಂ'. ರಾಮರಾಯನ ದೊಡ್ಡ ಸಮಸ್ಯೆಯಿದು. ಎಲ್ಲರ ಮೇಲೆಯೂ ಅನುಮಾನ ಪಡುತ್ತಿದ್ದ ಎಂದು ಯಾರನ್ನು ಉದ್ದೇಶಿಸಿ ಉಲ್ಲೇಖಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಆಯಕಟ್ಟಿನಲ್ಲಿದ್ದ
ಸಾಮ್ರಾಜ್ಯ ನಿಷ್ಠರನ್ನು ಒಬ್ಬೊಬ್ಬರಾಗಿ ಹೊರನೂಕಿ, ಆ ಜಾಗದಲ್ಲಿ ತನ್ನ ಹೊಗಳು ಭಟ್ಟರನ್ನು ನೇಮಕ ಮಾಡಲು ತೊಡಗಿದ ಪರಿಣಾಮವಿದು ಎಂಬುದನ್ನು ಸಿ.ಟಿ. ರವಿ ಸೂಚ್ಯವಾಗಿ ಹೇಳಿದ್ದಾರೆ. ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಎಂಬ ಪ್ರಶ್ನೆಯು ಯಾರನ್ನು ಉದ್ದೇಶಿಸಿ, ಯಾವ ಸಾಮ್ರಾಜ್ಯವನ್ನು ಉದ್ದೇಶಿಸಿ ಹೇಳಿದ್ದಾಗಿದೆ ಎಂಬ ಬಗ್ಗೆ ಭಾರಿ ಕುತೂಹಲ ವ್ಯಕ್ತವಾಗಿದೆ.

ಹದಿಮೂರನೆಯ ಶತಮಾನದಲ್ಲಿ ಭಾರತದ ದಕ್ಷಿಣ ಭಾಗ ಇತಿಹಾಸದಲ್ಲಿ ಕಂಡು ಕೇಳರಿಯದ ಭಯಾನಕ ದಾಳಿಯನ್ನು ಎದುರಿಸಬೇಕಾಯಿತು. ಮಲ್ಲಿಕಾ ಫರ್ ಎಂಬ ಅನಾಗರೀಕ ದಾಳಿಕೋರನ ನೇತೃತ್ವದಲ್ಲಿ ಖಿಲ್ಜಿಯ ಸೈನ್ಯ ದಕ್ಷಿಣದ ನಾಲ್ಕು ಪ್ರಮುಖ ಸಾಮ್ರಾಜ್ಯಗಳನ್ನು ಇತಿಹಾಸ ಪುಟದಿಂದ ಅಳಿಸಿ ಹಾಕಿತ್ತು. ದೇವಗಿರಿಯ ಯಾದವರು, ವಾರಂಗಲ್ಲಿನ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು ಹಾಗೂ ಮಧುರೆಯ ಪಾಂಡ್ಯರು ಆಳುತ್ತಿದ್ದ ಸಮೃದ್ಧ ರಾಜ್ಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಇತಿಹಾಸಕ್ಕೆ ತಳ್ಳಲ್ಪಟ್ಟರು. ಕನ್ನಡ ನಾಡಿನ ಹೆಮ್ಮೆಯ ಅರಸು ಮನೆತನ ಹೊಯ್ಸಳರ ರಾಜಧಾನಿ ದ್ವಾರಸಮುದ್ರ ಅನಾಗರೀಕರ ದಾಳಿಗೆ ತುತ್ತಾಗಿ ಹಳೆಬೀಡಾಯಿತು.

ಇತಿಹಾಸದಿಂದ ಪಾಠ ಕಲಿಯಬೇಕಾದ ನಾವು ಎಷ್ಟು ಕಲಿತಿದ್ದೇವೆ? ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಮರೆಯಲಾಗದ ಮಹಾಸಾಮ್ರಾಜ್ಯದ ಪತನ ನಮಗೆ ಪಾಠ ಕಲಿಸಲಾರದೆ? ಎಂದು ರವಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com