'ಸಿದ್ದರಾಮಯ್ಯ ಸೋಲಿಸಲು, ಸಮ್ಮಿಶ್ರ ಸರ್ಕಾರ ಕೆಡವಲು ಮುಹೂರ್ತ ಇಟ್ಟಿದ್ದು ಇಲ್ಲೇ: ಈಗ ಹೊಸ ಮುಹೂರ್ತ ಇಡಲಾಗಿದೆ'
ನಾವು ಎಲ್ಲ ವಿಚಾರದಲ್ಲೂ ಮುಹೂರ್ತವಿಟ್ಟಿದ್ದು ಶ್ರೀನಿವಾಸ್ ಪ್ರಸಾದ್ ಮನೆಯಲ್ಲೇ, ಈಗಲೂ ಮುಹೂರ್ತ ಇಟ್ಟಾಗಿದೆ, ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೊಸ ಬಾಂಬ್ ಹಾಕಿದ್ದಾರೆ.
Published: 03rd June 2021 08:44 AM | Last Updated: 03rd June 2021 12:22 PM | A+A A-

ಎಚ್.ವಿಶ್ವನಾಥ್
ಮೈಸೂರು: ನಾವು ಎಲ್ಲ ವಿಚಾರದಲ್ಲೂ ಮುಹೂರ್ತವಿಟ್ಟಿದ್ದು ಶ್ರೀನಿವಾಸ್ ಪ್ರಸಾದ್ ಮನೆಯಲ್ಲೇ, ಈಗಲೂ ಮುಹೂರ್ತ ಇಟ್ಟಾಗಿದೆ, ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೊಸ ಬಾಂಬ್ ಹಾಕಿದ್ದಾರೆ.
ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿಶ್ವನಾಥ್, ''ಸಿದ್ದರಾಮಯ್ಯ ಸೋಲಿಗೆ ನಾವು ಇಲ್ಲಿಯೇ ಮುಹೂರ್ತ ಇಟ್ಟಿದ್ದು, ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತವಿಟ್ಟಿದ್ದು. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲಿಯೇ'' ಎಂದು ವಿಶ್ವನಾಥ್ ಹೇಳಿದ್ದಾರೆ.
ನಮ್ಮ ಹಲವು ಮುಹೂರ್ತಕ್ಕೆ , ಆ ನಂತರದ ಎಲ್ಲಾ ಬೆಳವಣಿಗೆಗಳಿಗೂ ಶ್ರೀನಿವಾಸ್ ಪ್ರಸಾದ್ ಮನೆ ಸಾಕ್ಷಿಯಾಗಿದೆ ಎಂದು ಹೇಳಿದ ವಿಶ್ವನಾಥ್, ನಾವು ಈಗಲೂ ಮನೆಯಲ್ಲೇ ಹೊಸದಾಗಿ ಮುಹೂರ್ತ ಇಟ್ಟಿದ್ದೇವೆ. ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಬಗ್ಗೆ ಪ್ರಸಾದ್ ಜೊತೆ ಮಾತನಾಡಿದ್ದೇವೆ. ಆದರೆ ಯಾವ ಮುಹೂರ್ತ ಎಂದು ಸದ್ಯಕ್ಕೆ ಹೇಳಲ್ಲ'' ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.