ಆಡಳಿತ ಯಂತ್ರದಲ್ಲಿ ಮಿತಿಮೀರಿರುವ ಅಹಂ, ಪ್ರತಿಷ್ಠೆ; ಅಧಿಕಾರಿಗಳನ್ನು ನಿಯಂತ್ರಿಸಲು ಸರ್ಕಾರ ವಿಫಲ; ಜನರ ಬದುಕು ಮೂರಾಬಟ್ಟೆ!

ಮೈಸೂರಿನ ಇಬ್ಬರು ಉನ್ನತ ಅಧಿಕಾರಿಗಳ ಅಸಹಕಾರ, ವೈಮಸ್ಸು ತಾರಕಕ್ಕೇರುವರೆಗೂ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳದಿರುವುದು ಅವರ ನಿಷ್ಕ್ರಿಯತೆಗೆ ನಿದರ್ಶನವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ಶಿಲ್ಪಾ ನಾಗ್ ಮತ್ತು ರೋಹಿಣಿ ಸಿಂಧೂರಿ
ಶಿಲ್ಪಾ ನಾಗ್ ಮತ್ತು ರೋಹಿಣಿ ಸಿಂಧೂರಿ

ಬೆಂಗಳೂರು: ಮೈಸೂರಿನ ಇಬ್ಬರು ಉನ್ನತ ಅಧಿಕಾರಿಗಳ ಅಸಹಕಾರ, ವೈಮಸ್ಸು ತಾರಕಕ್ಕೇರುವರೆಗೂ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳದಿರುವುದು ಅವರ ನಿಷ್ಕ್ರಿಯತೆಗೆ ನಿದರ್ಶನವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಕಾರದಲ್ಲೂ ಕಚ್ಚಾಟ, ಅಧಿಕಾರಿಗಳಲ್ಲೂ ಕಿತ್ತಾಟ, ಜನಸಾಮಾನ್ಯರಿಗೆ ಪರದಾಟ. ಸಂಕಷ್ಟದ ನಡುವೆ ಈ ಪ್ರತಿಷ್ಠೆಯ ಆಟಗಳನ್ನ ಸಹಿಸಲಾಗದು, ಸರ್ಕಾರ ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಕರೋನಾ ಪಿಡುಗಿನ ನಡುವೆಯೂ ಆಡಳಿತ ಯಂತ್ರದಲ್ಲಿ ಪ್ರತಿಷ್ಠೆ, ಅಹಂ ಮಿತಿ ಮೀರಿದ ಕಾರಣ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದಲ್ಲಿ ಸಾಮರಸ್ಯವಿಲ್ಲ, ಸಚಿವರಲ್ಲಿ ಸಮನ್ವಯತೆ ಇಲ್ಲ, ಅಧಿಕಾರಿಗಳಲ್ಲೂ ಸಮನ್ವಯತೆ ಇಲ್ಲ. ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ಸೋತಿರುವ ಪರಿಣಾಮ ಜನರ ಬದುಕು ಮೂರಾಬಟ್ಟೆಯಾಗಿದೆ ಎಂದು ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com