ಸದಾಶಿವನಗರ ಗೆಸ್ಟ್ ಹೌಸ್ ವಿಚಾರಕ್ಕೆ ನಿಖಿಲ್ -ಜಮೀರ್ ಜಟಾಪಟಿ: ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ಸದಾಶಿವನಗರದಲ್ಲಿರುವ ಗೆಸ್ಟ್‌ ಹೌಸ್‌ ತೆರವುಗೊಳಿಸುವ ವಿಚಾರದಲ್ಲಿ ಜಮೀರ್‌ ಮತ್ತು ನಿಖಿಲ್‌ ಕುಮಾರಸ್ವಾಮಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ.
ಜಮೀರ್ ಅಹ್ಮದ್ ಮತ್ತು ನಿಖಿಲ್ ಕುಮಾರಸ್ವಾಮಿ
ಜಮೀರ್ ಅಹ್ಮದ್ ಮತ್ತು ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಸುಪರ್ದಿಯಲ್ಲಿರುವ ಹಾಗೂ ಮಾಜಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಸೇರಿರುವ ಗೆಸ್ಟ್‌ಹೌಸ್‌ನಲ್ಲಿ ಹೈಡ್ರಾಮಾ ನಡೆದಿದೆ.

ಗೆಸ್ಟ್‌ ಹೌಸ್‌ ತೆರವುಗೊಳಿಸುವ ವಿಚಾರದಲ್ಲಿ ಜಮೀರ್‌ ಮತ್ತು ನಿಖಿಲ್‌ ಕುಮಾರಸ್ವಾಮಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ.

ಎಚ್‌ಡಿಕೆ ಅವರು ಗೆಸ್ಟ್‌ ಹೌಸ್‌ಗೆ ಹೋಗುವುದನ್ನು ಬಿಟ್ಟಿದ್ದರೂ ಅವರ ಪುತ್ರ ನಿಖಿಲ್‌ ಮತ್ತು ಸ್ನೇಹಿತರು ಆಗಾಗ ವಾಸ್ತವ್ಯ ಹೂಡುತ್ತಿದ್ದರು. ಸಿನಿಮಾಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ಇಡಲಾಗಿತ್ತು ಎನ್ನಲಾಗಿದೆ. ಈ ನಡುವೆ ಜಮೀರ್‌ ಕಡೆಯವರು ಕೆಲ ದಿನಗಳ ಹಿಂದೆ ಗೆಸ್ಟ್‌ಹೌಸ್‌ಗೆ ಪ್ರತ್ಯೇಕ ಬೀಗ ಹಾಕಿದ್ದರು.

ಸದಾಶಿವನಗರದ ಗೆಸ್ಟ್​ಹೌಸ್ ತೆರವು ಮಾಡಿದ್ದರೂ ಕುಮಾರಸ್ವಾಮಿಗೆ ಸೇರಿದ ಅಗತ್ಯ ವಸ್ತುಗಳು ಅಲ್ಲಿದ್ದವು. ಗೆಸ್ಟ್​​ಹೌಸ್ ಕೀಲಿ ಶಾಸಕ ಜಮೀರ್ ಅಹ್ಮದ್​ ಬಳಿಯಿತ್ತು. ಜಮೀರ್​ಗೆ ಭೋಜೇಗೌಡ ಕರೆ ಮಾಡಿ ಟೈಮ್​ ಕೇಳಿದ್ದರು. ಎಸ್.ಎಲ್.ಭೋಜೇಗೌಡ ಅದಕ್ಕೆ 2 ದಿನ ಕಾಲಾವಕಾಶ ಕೇಳಿದ್ದರು ಎಂದು ಹೇಳಲಾಗಿದೆ.

ಸದಾಶಿವ ನಗರದ ಗೆಸ್ಟ್​​ಹೌಸ್​​ಗೆ ನಿಖಿಲ್ ಕುಮಾರಸ್ವಾಮಿ ಗನ್​ಮ್ಯಾನ್​ಗಳು ಪ್ರವೇಶ ಮಾಡಿದ್ದಾರೆ. ಗನ್​ಮ್ಯಾನ್​ಗಳು ಬೀಗ ಮುರಿದು ಒಳನುಗ್ಗಿದ್ದಾರೆ. ಗೆಸ್ಟ್​ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ದೂರು ಸಲ್ಲಿಸಲಾಗಿದೆ.

ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಆಪ್ತ ವಲಯದಲ್ಲಿದ್ದ ಜಮೀರ್‌ ಅಹ್ಮದ್‌ ಅವರು ಸದಾಶಿವ ನಗರದ ತಮ್ಮ ಅತಿಥಿ ಗೃಹವನ್ನು ಬಿಟ್ಟು ಕೊಟ್ಟಿದ್ದರು. ಉಭಯರ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿದಾಗ ಜಮೀರ್‌ ಗೆಸ್ಟ್‌ಹೌಸ್‌ನಿಂದ ಕುಮಾರಸ್ವಾಮಿ ದೂರವಿದ್ದರು. ಆದರೆ, ಅದು ಎಚ್‌ಡಿಕೆ ಸುಪರ್ದಿಯಲ್ಲೇ ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com