ಯಡಿಯೂರಪ್ಪ ಬೆನ್ನಿಗೆ ನಿಂತ ಮಠಾಧೀಶರು; ಸಿದ್ದವಾಯ್ತು ಶಾಸಕರ ದೂರಿನ ಪಟ್ಟಿ; ಅರುಣ್ ಸಿಂಗ್ ಭೇಟಿ ಕಣ್ಣೊರೆಸುವ ತಂತ್ರ?

ಅಖಿಲ ಭಾರತ ಲಿಂಗಾಯತ-ವೀರಶೈವ ವೇದಿಕೆ ಸೋಮವಾರ ಹೇಳಿಕೆ ನೀಡಿ, ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲು ಬಿಡಬೇಕೆಂದು ಆಗ್ರಹಿಸಿದೆ.

Published: 16th June 2021 08:54 AM  |   Last Updated: 16th June 2021 12:22 PM   |  A+A-


Yediyurappa

ಯಡಿಯೂರಪ್ಪ

Posted By : Shilpa D
Source : The New Indian Express

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ವೇಳೆ ಅಖಿಲ ಭಾರತ ಲಿಂಗಾಯತ-ವೀರಶೈವ ವೇದಿಕೆ ಸೋಮವಾರ ಹೇಳಿಕೆ ನೀಡಿ, ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲು ಬಿಡಬೇಕೆಂದು ಆಗ್ರಹಿಸಿದೆ.

ಕಳೆದ ವಾರವಷ್ಟೆ ಬೆಕ್ಕಿನ ಕಲ್ ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿ ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಹಾಗೂ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಸ್ವಾಮೀಜಿಗಳು ಸಿಎಂ ಪರವಾಗಿ ನಿಂತಿದ್ದಾರೆ. 

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಳೆದ ವಾರ ಲಿಂಗಾಯತ ಸ್ವಾಮೀಜಿಗಳ ಜೊತೆ ಸರಣಿ ಸಭೆ ನಡೆಸಿ ಸಮಾಲೋಚಿಸಿದ್ದರು. ಅದಾದರ ನಂತರ 17 ಮಠಾಧೀಶರು ತಮ್ಮ ಬೆಂಬಲ ಸೂಚಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಬಂದ ನಂತರ ವಿಜಯೇಂದ್ರ ಮಠಾಧೀಶರ ಬಳಿ ತೆರಳಿದ್ದರು, ಅರುಣಿ ಸಿಂಗ್ ಭೇಟಿಯ ವೇಳೆ ಮಠಾಧೀಶರು ಸಿಎಂ ಗೆ ಬೆಂಬಲ ಸೂಚಿಸಬೇಕು ಎಂಬುದು ಇದರ ಉದ್ದೇಶವಿರಬೇಕು,. 

ಆದರೆ ಬಿಜೆಪಿ ರಾಜ್ಯ ಘಟಕದ ಶಾಸಕರು ಮತ್ತು ಪದಾಧಿಕಾರಿಗಳು ಸಿಂಗ್ ಅವರ ಭೇಟಿಯ ಬಗ್ಗೆ ಯಾವುದೇ ವಿಶ್ವಾಸವನ್ನು ಹೊಂದಿಲ್ಲ. ಯಾವುದೇ ಗುಂಪು ಸಭೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಕೇಂದ್ರ ನಾಯಕತ್ವ ಮೌಖಿಕ ಸೂಚನೆಗಳನ್ನು ನೀಡಿದೆ. ಆದರೆ ಪಕ್ಷದ ಶಾಸಕರು ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಕುಂದುಕೊರತೆ ತಿಳಿಸಬಹುದು ಎಂದು ಸೂಚಿಸಿದೆ, ಇದೆಲ್ಲಾ ಕಣ್ಣೊರೆಸುವ ತಂತ್ರವಾಗಿದೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

ಯಡಿಯೂರಪ್ಪ ಪರವಾಗಿ ಅಥವಾ ವಿರೋಧವಾಗಿ ಯಾವುದೇ ಸಮರ್ಥನೆ ನೀಡುವುದನ್ನು ತಪ್ಪಿಸಲು ಈ ಕೆಲಸ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ, ಅರುಣ್ ಸಿಂಗ್ ರಾಜ್ಯ ಭೇಟಿ ವ್ಯರ್ಥ, ಅದರಿಂದ ಯಾವುದೇ ಪ್ರಯೋಜನವೂ ಇಲ್ಲ, ಹೀಗಿದ್ದರೂ ಶಾಸಕರು ಕೇಂದ್ರ ನಾಯಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲಿದ್ದಾರೆ,

ನಮಗೆ ಸರ್ಕಾರ ಮತ್ತು ಮುಖ್ಯಮಂತ್ರಿಯವರ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರುಗಳಿವೆ, ಆದರೆ ಅದನ್ನು ಸಾರ್ವಜನಿಕವಾಗಿ ಚರ್ಚಿಸಲಾಗುವುದಿಲ್ಲ. ಯಾವುದೇ  ಸಮಸ್ಯೆ ಇದ್ದರೂ, ನಾವು ಅರುಣ್ ಸಿಂಗ್ ಅವರಿಗೆ ತಿಳಿಸುತ್ತೇವೆ, ಇದಕ್ಕೆ ಸರಿಯಾಗಿ ಪರಿಹರ ಸಿಗಲಿದೆ ಎಂದು ಭಾವಿಸುತ್ತೇವೆ, ಒಂದು ವೇಳೆ ಅದು ವಿಫಲವಾದರೆ ಮುಂದಿನ ಕ್ರಮವು ಅನುಸರಿಸಲಾಗುತ್ತದೆ ಎಂದು ಮತ್ತೊಬ್ಬ ಬಿಜೆಪಿ ಶಾಸಕ ಹೇಳಿದ್ದಾರೆ.

ಬುಧವಾರದಿಂದ ಪ್ರಾರಂಭವಾಗುವ ಅರುಣ್ ಸಿಂಗ್ ಮೂರು ದಿನಗಳ ಭೇಟಿಯಲ್ಲಿ ಸಿಂಗ್ ಅವರು ಕ್ಯಾಬಿನೆಟ್ ಮಂತ್ರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲಿದ್ದು, ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಉತ್ಸುಕರಾಗಿದ್ದಾರೆ ಮತ್ತು ಯಡಿಯೂರಪ್ಪ ಅವರಿಗೆ  ನಿರ್ದೇಶನಗಳನ್ನು ನೀಡಲಿದ್ದಾರೆ ಎಂಬ ಭರವಸೆಯಿದೆ.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp