'ಮೈತ್ರಿಕೂಟದಲ್ಲಿದ್ದೂ ಮಿತ್ರ ಪಕ್ಷದ ಮೇಲಿನ ದ್ವೇಷ, ಅಸೂಯೆಯಿಂದ ಶಾಸಕರನ್ನು ಓಡಿಹೋಗುವಂತೆ ಮಾಡಿದ್ದರ ಫಲವಿದು'

ಬಿಜೆಪಿ ಆಡಳಿತದಿಂದ ಈಗ ಜನರಿಗೆ ವೈರಾಗ್ಯ ಬಂದಿದೆ. ಈ ವೈರಾಗ್ಯದ ಹಿಂದಿನ ಶಕ್ತಿಯಾಗಿರುವ ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಲಿದೆಯೇ? 
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಆಡಳಿತದಿಂದ ಈಗ ಜನರಿಗೆ ವೈರಾಗ್ಯ ಬಂದಿದೆ. ಈ ವೈರಾಗ್ಯದ ಹಿಂದಿನ ಶಕ್ತಿಯಾಗಿರುವ ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಲಿದೆಯೇ? ತಾನು ಮಾಡಿದ ತಪ್ಪಿನಿಂದ ಉಂಟಾದ ಅನಾಹುತದ ಬಗ್ಗೆ ಕಾಂಗ್ರೆಸ್ ಗೆ ಈಗ ಪಶ್ಚಾತ್ತಾಪ ಮೂಡಿದಂತಿದೆ. ಆದರೆ ಈ ಅನಾಹುತ ಹೊಣೆಗಾರ ಕಾಂಗ್ರೆಸ್ ಎಂಬುದನ್ನು ಮಾತ್ರ ಅದರ ನಾಯಕರು ಎಂದಿಗೂ ಮರೆಯಬಾರದು ಮಾಜಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುರುವಾರ ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರ, ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿಯ ದುರಾಡಳಿತ ಕಂಡು ಜನರಿಗೆ ವೈರಾಗ್ಯ ಬಂದಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ‌. ಈ ದುರಾಡಳಿತ ಬರಲು, ಅದರಿಂದ ಜನರಿಗೆ ವೈರಾಗ್ಯ ಮೂಡಲು ಕಾರಣರಾರು? ಇದೇ ಕಾಂಗ್ರೆಸ್ ಅಲ್ಲವೇ? ಮೈತ್ರಿಕೂಟದಲ್ಲಿದ್ದೂ ಮಿತ್ರ ಪಕ್ಷದ ಮೇಲಿನ ದ್ವೇಷ, ಅಸೂಯೆಯಿಂದ ಶಾಸಕರನ್ನು ಓಡಿಹೋಗುವಂತೆ ಮಾಡಿದ್ದರ ಫಲವಿದು ಟೀಕಿಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ‘ರಾಕ್ಷಸ ಸರ್ಕಾರ‘ವನ್ನು ಜನರ ಹಿತಕ್ಕಾಗಿ, ಅಭಿವೃದ್ಧಿಗಾಗಿ ಕೆಡವಿದ "ಸಮಾಜ ಸುಧಾರಕರು" ಇರುವ ಪಕ್ಷ ಬಿಜೆಪಿ. ಈಗ ನಾಯಕತ್ವವಿಲ್ಲದ ಅಪಾಯಕಾರಿ ಸರ್ಕಾರದ ಬಗ್ಗೆ ಆ ಸಮಾಜ ಸುಧಾರಕರು ಸುಮ್ಮನಿರುವುದಾದರೂ ಹೇಗೆ. ಈ ಸಮಾಜ ಸುಧಾರಕರ ದಿವ್ಯ ಮೌನ ನನಗೆ ಆಶ್ಚರ್ಯ ತರಿಸುತ್ತಿದೆ. ಆತಂಕ ಉಂಟು ಮಾಡಿದೆ ಎಂದಿದ್ದಾರೆ.

ದೇಶದ ಅಭಿವೃದ್ಧಿಗಾಗಿ ಸಮರ್ಥ ನಾಯಕತ್ವ ಪ್ರತಿಪಾದಿಸುವ ಬಿಜೆಪಿ, ನಾಯಕತ್ವವೇ ಇಲ್ಲದ ಈ ಸರ್ಕಾರವನ್ನು ಅದು ಹೇಗೆ ಸಹಿಸಿಕೊಂಡಿದೆ. ನಾಯಕತ್ವ ಸರಿ ಇಲ್ಲ ಎಂದು ಶಾಸಕರೇ ಹೇಳುತ್ತಿರುವಾಗ ನಾಯಕತ್ವ ಬದಲಿಸಲು ಏಕೆ ಇಷ್ಟು ತಿಣುಕಾಡುತ್ತಿದೆ. ಹಾಗೊಂದು ನಾಯಕತ್ವವೇ ಇಲ್ಲದ ಮೇಲೆ ಬಿಜೆಪಿ ಸರ್ಕಾರ ವಿಸರ್ಜಿಸಿ, ಅಧಿಕಾರದಿಂದ ದೂರ ಉಳಿಯಬಾರದೇಕೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಾವಿಕನಿಲ್ಲದ ನಾವೆ, ಯಜಮಾನನಿಲ್ಲದ ಮನೆ, ನಾಯಕನಿಲ್ಲದ ಸರ್ಕಾರ ಇದು ಅಪಾಯಕಾರಿ. ಅದೂ ಸಾಂಕ್ರಾಮಿಕ ಕಾಲದಲ್ಲಿ ಮತ್ತಷ್ಟು ಅಪಾಯಕಾರಿ. ಈಗಿನ ಸರ್ಕಾರದ ನಾಯಕತ್ವ ಸರಿ ಇಲ್ಲ ಎಂದು ಬಿಜೆಪಿ ಶಾಸಕರೇ ಬಂಡೆದಿದ್ದಾರಂತೆ. ಇರುವವರನ್ನು ಬದಲಿಸಲು ನಾಯಕರ್ಯಾರೂ ಇಲ್ಲವಂತೆ. ಹಾಗಾಗಿ ಈ ಸರ್ಕಾರ ಜನರ ಪಾಲಿಗೆ ಅಪಾಯಕಾರಿಯಾಗಿದೆ ಎಂದರ್ಥ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com