ಬೆಡ್ ಬ್ಲಾಕಿಂಗ್ ದಂಧೆ: 'ಮೆಡಿಕಲ್ ಟೆರರಿಸಂ' ಎಂಬ ಹೊಸ ಟೈಟಲ್ ಸೃಷ್ಟಿಸಿದ್ದ ಭ್ರಷ್ಟ ಬಿಜೆಪಿ ಈಗೇಕೆ ಮೌನ? ಕಾಂಗ್ರೆಸ್

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಖಾತೆಗೆ ಸೋಂಕಿತರಿಂದ ಹಣ ಜಮೆಯಾಗಿರುವ ಬಗ್ಗೆ ಸಿಸಿಬಿ ದೋಷರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮುಗಿ ಬಿದಿದ್ದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಖಾತೆಗೆ ಸೋಂಕಿತರಿಂದ ಹಣ ಜಮೆಯಾಗಿರುವ ಬಗ್ಗೆ ಸಿಸಿಬಿ ದೋಷರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮುಗಿ ಬಿದಿದ್ದೆ.

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಖಾತೆಗೆ ಸೋಂಕಿತರಿಂದ ಹಣ ಜಮೆಯಾಗಿದ್ದು ಪತ್ತೆಯಾಗಿದೆ, ಇದರಲ್ಲಿ ಸತೀಶ್ ರೆಡ್ಡಿಯ ಪಾತ್ರದ ಬಗ್ಗೆ ತನಿಖೆ ಇಲ್ಲವೇಕೆ? ಸರ್ಕಾರ ರಕ್ಷಣೆಗೆ ನಿಂತಿದ್ದೇಕೆ? ಎಂದು ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ 'ಮೆಡಿಕಲ್ ಟೆರರಿಸಂ' ಎಂಬ ಹೊಸ ಟೈಟಲ್ ಸೃಷ್ಟಿಸಿದ್ದ ಭ್ರಷ್ಟ ಬಿಜೆಪಿ ಈಗೇಕೆ ಮೌನವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ತಜ್ಞರ ಸಮಿತಿ ಮೂರನೇ ಅಲೆಯ ಎಚ್ಚರಿಕೆ ನೀಡಿದ್ದಾರೆ, ಸರ್ಕಾರ ಮೂರನೇ ಸುತ್ತಿನ ಜಂಗಿ ಕುಸ್ತಿಯಲ್ಲಿ ನಿರತವಾಗಿದೆ! ತಜ್ಞರು ಮಕ್ಕಳಿಗೆ ಬಹುವಾಗಿ ಕಾಡುವ ಮುನ್ಸೂಚನೆ ನೀಡಿದ್ದಾರೆ, ಸರ್ಕಾರ ಕೂಡಲೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಾರ್ಯಕ್ರಮ ಕೈಗೊಳ್ಳಬೇಕಿದೆ. ಅಗತ್ಯ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾಡುವುದೇ.? ಎಂದು ಕಾಂಗ್ರೆಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com