ಹೆಚ್.ವಿಶ್ವನಾಥ್'ಗೆ ಸಚಿವ ಸ್ಥಾನ ನೀಡುವಂತೆ ರಾಜ್ಯಾದ್ಯಂತ ಪ್ರತಿಭಟನೆಗೆ ಬೆಂಬಲಿಗರು ಮುಂದು!

ಎಂಎಲ್'ಸಿ ಎ.ಹೆಚ್.ವಿಶ್ವನಾಥ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ವಿಶ್ವನಾಥ್ ಅವರ ಬೆಂಬಲಿಗರು ಮುಂದಾಗಿದ್ದಾರೆ. 
ವಿಶ್ವನಾಥ್
ವಿಶ್ವನಾಥ್

ಮೈಸೂರು: ಎಂಎಲ್'ಸಿ ಎ.ಹೆಚ್.ವಿಶ್ವನಾಥ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ವಿಶ್ವನಾಥ್ ಅವರ ಬೆಂಬಲಿಗರು ಮುಂದಾಗಿದ್ದಾರೆ. 

ವಿಶ್ವನಾಥ್ ಅವರ ತ್ಯಾಗದಿಂದಾಗಿ ರೇಣುಕಾಚಾರ್ಯ ಹಾಗೂ ಎಸ್ಆರ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಯಲ್ಲಿ ಸ್ಥಾನ ಬಂದಿದೆ ಎಂಬುದನ್ನು ನೆನೆಯಬೇಕಿದೆ. ವಿಶ್ವನಾಥ್ ಅವರು ಇಲ್ಲದಿದ್ದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಥವಾ ಯಡಿಯೂರಪ್ಪ ಅವರ ಕೈಗೆ ಅಧಿಕಾರ ಬರುತ್ತಿರಲಿಲ್ಲ. ಹೀಗಾಗಿ ಶೀಘ್ರಗತಿಯಲ್ಲಿ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗರು ಆಗ್ರಹಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ವಿಶ್ವನಾಥ್ ವಿರುದ್ಧ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಅವರು, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ ಕೃಷ್ಣ, ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೀಗ ಯಡಿಯೂರಪ್ಪ ಸೇರಿದಂತೆ ಯಾರನ್ನು ಬಿಟ್ಟಿಲ್ಲ, ಎಲ್ಲರ ಬಗ್ಗೆಯೂ‌ ಹಗುರವಾಗಿ ಮಾತನಾಡಿದ್ದಾರೆ. ವಿಶ್ವನಾಥ್ ಹಿರಿಯರು. ಅವರ ಬಾಯಲ್ಲಿ ಅಂತಹ ಶಬ್ಧ ಬರಬಾರದು.‌ ಅವರ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಹೇಳಿದ್ದರು. 

ಎಚ್ ವಿಶ್ವನಾಥ್ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂಬ ಹೇಳಿಕೆಯನ್ನು ನೀಡುವುದರ ಜೊತೆಗೆ ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಸಿಎಂ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com