ದಕ್ಷಿಣದ ಇತರೆ ರಾಜ್ಯಗಳಂತೆ ಕರ್ನಾಟಕವೂ 2023ರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುತ್ತದೆ: ಕುಮಾರಸ್ವಾಮಿ

ದಕ್ಷಿಣ ಭಾರತದ ಇತರ ರಾಜ್ಯಗಳಂತೆ ಕರ್ನಾಟಕವೂ 2023 ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುತ್ತದೆ ಮತ್ತು ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡುತ್ತದೆ ಎಂದು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಚೆನ್ನಪಟ್ಟಣ: ದಕ್ಷಿಣ ಭಾರತದ ಇತರ ರಾಜ್ಯಗಳಂತೆ ಕರ್ನಾಟಕವೂ 2023 ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುತ್ತದೆ ಮತ್ತು ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡುತ್ತದೆ ಎಂದು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ. ಏಕೆಂದರೆ ರಾಷ್ಟ್ರೀಯ ಪಕ್ಷಗಳು ದೆಹಲಿಯಲ್ಲಿನ ಹೈಕಮಾಂಡ್ ಆದೇಶದ ಹೊರತಾಗಿ ಇಲ್ಲಿ ಆಡಳಿತ ನಡೆಸಲು ಬಯಸಲಾರೆವು ಎಂದರು.

ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ರಾಜ್ಯಪಾಲ ವಾಜುಭಾಯ್ ವಾಲಾ ಮತ್ತು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದಿದ್ದು ಕೋವಿಡ್ ಪರಿಸ್ಥಿತಿ, ಸರ್ಕಾರದಲ್ಲಿ ಭ್ರಷ್ಟಾಚಾರ ಆಡಳಿತದಲ್ಲಿ ಇತರರ ಹಸ್ತಕ್ಷೇಪ ಮತ್ತು ಕನ್ನಡಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಸಡ್ಡೆ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ.

"ದೇಶಾದ್ಯಂತ ಜನರು ಪ್ರಾದೇಶಿಕ ಪಕ್ಷಗಳಿಂದ ಆಕರ್ಷಿತರಾಗಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಕರ್ನಾಟಕವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಲಾಗಿದೆ" ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

2023 ರ ವಿಧಾನಸಭಾ ಚುನಾವಣೆಯ ವೇಳೆ  ಕರ್ನಾಟಕ ಕೂಡ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುತ್ತದೆ ಎಂದು ಅವರು ಹೇಳಿದರು. "ಇದನ್ನು ಸಾಧಿಸುವ ಉದ್ದೇಶದಿಂದ, ನಾವು (ಜೆಡಿಎಸ್) ಜನರ ನಂಬಿಕೆಯನ್ನು ಗೆಲ್ಲಲು ಬಯಸುತ್ತೇವೆ ಮತ್ತು ಆಡಳಿತವನ್ನು ಹೈಕಮಾಂಡ್ (ರಾಷ್ಟ್ರೀಯ ಪಕ್ಷಗಳ) ನಡೆಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಂತಹಾ ವಾತಾವರಣ ಸೃಷ್ಟಿಸಲು ನಾವು ಬಯಸುತ್ತೇವೆ, ಕರ್ನಾಟಕವನ್ನು ದೆಹಲಿಯೊಂದ ಆಳುತ್ತಿಲ್ಲ ಎಂದು ಖಚಿತಪಡಿಸುತ್ತೇವೆ" ಎಂದು ಅವರು ಹೇಳಿದರು.

ಕರ್ನಾಟಕವನ್ನು ಹೊರತುಪಡಿಸಿ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳನ್ನು ಬಿಜೆಪಿ ಅಥವಾ ಕಾಂಗ್ರೆಸ್ ನಂತಹ ಪ್ರಮುಖ ರಾಷ್ಟ್ರೀಯ ಪಕ್ಷಗಳು ಆಳುವುದಿಲ್ಲ. ಕೇರಳದಲ್ಲಿ ಎಡಪಂಥೀಯ ಸರ್ಕಾರವಿದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಕ್ರಮವಾಗಿ ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಆಳುತ್ತವೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನೇತೃತ್ವದ ಜೆಡಿಎಸ್ ಕರ್ನಾಟಕದ ಏಕೈಕ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷವಾಗಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ ಆಳುತ್ತಿದೆ.

ಏತನ್ಮಧ್ಯೆ, ವಿಶೇಷ ವಿಧಾನಸಭೆ ಅಧಿವೇಶನವನ್ನು ಕೋರಿದ ಕುಮಾರಸ್ವಾಮಿ ರಾಜ್ಯದಲ್ಲಿ  ಬಿಜೆಪಿಯ "ಡಬಲ್ ಸ್ಟ್ಯಾಂಡರ್ಡ್" ಗಳನ್ನು ಪ್ರಶ್ನಿಸಿದರು, ನೆರೆಯ ಮಹಾರಾಷ್ಟ್ರದಲ್ಲಿ ಎರಡು ದಿನಗಳ ಕಾಲ ವಿಧಾನಸಭೆ ಅಧಿವೇಶನವನ್ನು ಕರೆಯಲಾಗಿದೆ ಎಂದು ಸೂಚಿಸಿದರು ಅಲ್ಲದೆ ಈ ಅಧಿವೇಶನಕ್ಕೆ ಅಲ್ಲಿನ ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿತ್ತು ಎಂದರು, "ಕೋವಿಡ್ ಕ್ರಾಮಿಕ ಸಮಯದಲ್ಲಿ, ಸರ್ಕಾರವು ಜನರ ಜೀವನದೊಂದಿಗೆ ಆಟವಾಡಿದೆ. ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಹಲವಾರು ನ್ಯೂನತೆಗಳಿವೆ. ಸರ್ಕಾರವು ಅಧಿವೇಶನವನ್ನು ಕರೆದು ಶಾಸಕರೊಂದಿಗೆ ಕನಿಷ್ಠ ಎರಡು-ಮೂರು ದಿನಗಳವರೆಗೆ ಚರ್ಚಿಸಿ ಅವರ ಸಲಹೆ  ಪಡೆದುಕೊಳ್ಳಬೇಕು" ಎಂದು ಅವರು ಹೇಳಿದರು.

ತೆರಿಗೆದಾರರಿಂದ ಬಂದಿರುವ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಕೆಲವು ನ್ಯೂನತೆಗಳಿವೆ ಎಂದು ಹೇಳಿಕೊಂಡ ಅವರು, ಈ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆಗಳನ್ನು ನಡೆಸಬೇಕಾಗಿದೆ, ಕೋವಿಡ್ ಮತ್ತು ಲಾಕ್‌ಡೌನ್ ಪೀಡಿತರಿಗೆ ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.

ಕನ್ನಡ ಭಾಷೆ ಮತ್ತು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ದಬ್ಬಾಳಿಕೆ ನಡೆದಿದ್ದು  ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ, "ಕನ್ನಡಕ್ಕೆ ಸಂಬಂಧಿಸಿದಂತೆ ಹಲವಾರು ಅವಹೇಳನಕಾರಿ ಘಟನೆಗಳು ನಡೆದಿವೆ, ಕನ್ನಡ ಭಾಷೆಯ ಬಗ್ಗೆ ಕೇಂದ್ರ ಸರ್ಕಾರದ ನಿಲುವು (ಅನುಕೂಲಕರವಾಗಿಲ್ಲ) ತಮಿಳುನಾಡು ಮೆಕೆಡಾಟು ವಿಷಯದ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ, ರಾಜ್ಯ ಸರ್ಕಾರವು ಈ ಎಲ್ಲ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಇವುಗಳನ್ನು ಚರ್ಚಿಸಬೇಕಾಗಿದೆ, ಆದ್ದರಿಂದ ಅಧಿವೇಶನವನ್ನು ಕರೆಯಬೇಕಾಗಿದೆ. "ವಿಧಾನಸಭೆ ಅಧಿವೇಶನವನ್ನು ಶೀಘ್ರದಲ್ಲೇ ಕರೆಯದಿದ್ದಲ್ಲಿ ತಮ್ಮ ಪಕ್ಷವು ಪ್ರತಿಭಟನೆ ಪ್ರಾರಂಭಿಸುತ್ತದೆ ಎಂದು ಜೆಡಿ(ಎಸ್) ಮುಖಂಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಅವರು ತಮ್ಮ ಪತ್ರದಲ್ಲಿ ಬಿಜೆಪಿ ಎಂಎಲ್‌ಸಿ 20,000 ಕೋಟಿ ರೂ. ಗಳ ಭದ್ರಾ ಮೇಲ್ದಂಡೆಯೋಜನೆ ಅನುಷ್ಠಾನದಲ್ಲಿ ಅಕ್ರಮಗಳ ಆರೋಪವಿದೆ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರಿಗೆ ಯೋಜನೆಯಲ್ಲಿ ಶೇ.10 ರಷ್ಟು ಕಿಕ್‌ಬ್ಯಾಕ್ ದೊರೆತಿದೆ ಎಂಬ ಆರೋಪವಿದೆ ಎಂದರು.

ಅಬಕಾರಿ ಸಚಿವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮತ್ತು ಬ್ಯಾಂಕಿಂಗ್ ಉದ್ಯೋಗಗಳಲ್ಲಿ ಕನ್ನಡದ ಬಗ್ಗೆ ತಾರತಮ್ಯ, ಅಂತರ್ಜಾಲದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಮಾಡಿದ ಅವಮಾನ, ಇತರ ವಿಷಯಗಳ ಬಗ್ಗೆಯೂ ಅವರು ರಾಜ್ಯಪಾಲರಿಗೆ ಮತ್ತು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com