ಜನರ ಮೇಲೆ ಭಯದಿಂದ ಸಿಎಂ ಯಡಿಯೂರಪ್ಪ ಚಾಮರಾಜನಗರ ಜಿಲ್ಲೆಗೆ ಬರುತ್ತಿಲ್ಲ: ಡಿ ಕೆ ಶಿವಕುಮಾರ್

ಸಿಎಂ ಯಡಿಯೂರಪ್ಪನವರಿಗೆ ಅವರ ಕುರ್ಚಿ ಬಹಳ ಮುಖ್ಯವಾಗಿದೆ. ಜನರಲ್ಲ, ಬರೀ ಚಾಮರಾಜನಗರ ಜಿಲ್ಲೆಗೆ ಮಾತ್ರ ಅವರಿಗೆ ಬರಲು ಭಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆ‌ ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ರಂಗಸ್ವಾಮಿ ಅವರ ನಿವಾಸಕ್ಕೆ ಭೇಟಿ ಪರಿಹಾರ ಚೆಕ್ ವಿತರಿಸಿದರು.
ಚಾಮರಾಜನಗರ ಜಿಲ್ಲೆ‌ ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ರಂಗಸ್ವಾಮಿ ಅವರ ನಿವಾಸಕ್ಕೆ ಭೇಟಿ ಪರಿಹಾರ ಚೆಕ್ ವಿತರಿಸಿದರು.

ಚಾಮರಾಜನಗರ: ಸಿಎಂ ಯಡಿಯೂರಪ್ಪನವರಿಗೆ ಅವರ ಕುರ್ಚಿ ಬಹಳ ಮುಖ್ಯವಾಗಿದೆ. ಜನರಲ್ಲ, ಬರೀ ಚಾಮರಾಜನಗರ ಜಿಲ್ಲೆಗೆ ಮಾತ್ರ ಅವರಿಗೆ ಬರಲು ಭಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಇಂದು ಇಡೀ ರಾಜ್ಯದ ಜನತೆ ರಾಜ್ಯಸರ್ಕಾರದ ಬಗ್ಗೆ ಆಕ್ರೋಶ, ಅಸಹನೆ ಹೊಂದಿದ್ದಾರೆ. ಎಲ್ಲಿ ರೊಚ್ಚಿಗೆದ್ದುಬಿಡುತ್ತಾರೋ, ಎಲ್ಲಿ ಹೊಡೆದುಬಿಡುತ್ತಾರೋ ಎಂಬ ಭಯದಲ್ಲಿದ್ದಾರೆ. ಜಿಲ್ಲೆಯ ಹೆಣ್ಣುಮಕ್ಕಳು ಕೂಡ ಸಿಎಂ ಬಗ್ಗೆ ಸಿಟ್ಟಿನಿಂದ ಮಾತನಾಡುತ್ತಿದ್ದಾರೆ.

ಇಲ್ಲಿನ ಜನರ ಆಕ್ರೋಶದ ಬಗ್ಗೆ ಗುಪ್ತಚರ ಇಲಾಖೆಯವರು ಸಿಎಂಗೆ ಮಾಹಿತಿ ಕೊಟ್ಟಿದ್ದಾರೆ. ನೀವು ಬರಲು ಹೋಗಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಭಯದಿಂದ ಯಡಿಯೂರಪ್ಪನವರು ಚಾಮರಾಜನಗರ ಜಿಲ್ಲೆಗೆ ಬರುತ್ತಿಲ್ಲ, ಆದರೆ ಅಧಿಕಾರದಲ್ಲಿರುವವರು ಜನರು ಬೈದರೆ ಬೈಸಿಕೊಳ್ಳಬೇಕು. ಇಲ್ಲಿಗೆ ಬಂದು ಜನರ ಕಷ್ಟ-ಸುಖ ಕೇಳಬೇಕು ಎಂದಿದ್ದಾರೆ.

ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿ ಕೆಪಿಸಿಸಿ ವತಿಯಿಂದ 1 ಲಕ್ಷ ರೂಪಾಯಿ ಚೆಕ್ ವಿತರಿಸಿ ಮಾತನಾಡಿದ ಅವರು, ಜೀವ ಇದ್ದರೆ ಜೀವನ, ಹೀಗಾಗಿ ಜನರಿಗೆ ಹೊಸ ಬದುಕನ್ನು ಆರಂಭ ಮಾಡಲು ಜಿಲ್ಲೆಗೆ ಬಂದು ನೆರವು ನೀಡಬೇಕು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಚಾಮರಾಜನಗರ ಜಿಲ್ಲೆ‌ ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ರಂಗಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮೃತರ ಪತ್ನಿ ಪುಷ್ಪಾ ರಂಗಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ 1 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ದ್ರುವನಾರಾಯಣ್, ಶಾಸಕ ನರೇಂದ್ರ, ಮಾಜಿ ಶಾಸಕರಾದ ಎ.ಆರ್ ಕೃಷ್ಣಮೂರ್ತಿ, ಬಾಲರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com