ಕಾಸರಗೋಡು ಗ್ರಾಮಗಳಿಗೆ ಮಲಯಾಳಂ ಹೆಸರು: ಕೇರಳ ಸರ್ಕಾರದ ನಡೆಗೆ ರಾಜ್ಯ ನಾಯಕರ ವಿರೋಧ

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕನ್ನಡದ ಊರುಗಳ ಹೆಸರು ಬದಲಾವಣೆಗೆ ಅಲ್ಲಿನ ಸರ್ಕಾರ ಮೂಂದಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗತೊಡಗಿವೆ.
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕನ್ನಡದ ಊರುಗಳ ಹೆಸರು ಬದಲಾವಣೆಗೆ ಅಲ್ಲಿನ ಸರ್ಕಾರ ಮೂಂದಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗತೊಡಗಿವೆ.

ಈ ಕುರಿತು ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು, ಕನ್ನಡಿಗರ ಪರಂಪರಾಗತ ಭಾವನೆಗಳನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕರ್ನಾಟಕ ಮತ್ತು ಕೇರಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ಕೇರಳದ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಬೇಕು. ಕೇರಳ ಮುಖ್ಯಮಂತ್ರಿಗಳ ಜೊತೆ ಇಂತಹ ಕನ್ನಡ ವಿರೋಧಿ ಕೆಲಸವನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರೂ ಕೇರಳದ ನಿರ್ಧಾರ ವಿರೋಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಕಾಸರಗೋಡು ಕರ್ನಾಟಕದೊಂದಿಗೂ ಬೆಸೆದುಕೊಂಡ ಪ್ರದೇಶ.ಅಲ್ಲಿನ ಜನರೊಂದಿಗೆ ಕರ್ನಾಟಕ ಮತ್ತು ಕನ್ನಡಿಗರು ಸಾಂಸ್ಕೃತಿಕ ಒಡನಾಟ ಹೊಂದಿದ್ದಾರೆ. ಕಾಸರಗೋಡು ಭಾಷಾ ಸಾಮರಸ್ಯದ, ಸೌಹಾರ್ದತೆಯ ಪ್ರತೀಕವಾಗಿ ಉಳಿದುಕೊಂಡಿದೆ. ಕಾಸರಗೋಡಿನಲ್ಲಿ ಕನ್ನಡ ಮತ್ತು ಮಲಯಾಳಿ ಭಾಷಿಕರು ಸಮಾನ ಸಂಖ್ಯೆಯಲ್ಲಿದ್ದರೂ, ಪರಸ್ಪರರೂ ಪೂರಕವಾಗಿ, ಪ್ರೇರಕವಾಗಿ ಬದುಕುತ್ತಿದ್ದಾರೆ.ಈ ಭಾಗದಲ್ಲಿ ಭಾಷಾ ಸಾಮರಸ್ಯದ, ಸೌಹಾರ್ದತೆಯ ಪ್ರತೀಕವಾಗಿ ಉಳಿದುಕೊಂಡಿದೆ. ಅಲ್ಲಿನವರಿಗೆ ಭಾಷೆಯ ವಿಚಾರದಲ್ಲಿ ಎಂದಿಗೂ ಕಲಹ ಬಂದಿಲ್ಲ. ಇದನ್ನು ನಾವು ಭವಿಷ್ಯದಲ್ಲೂ ಕಾಪಾಡಿಕೊಂಡು ಹೋಗಬೇಕಾದ ಅಗತ್ಯವಿದೆ. 

ಮಂಜೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಈಗಿನ ಕನ್ನಡ ಹೆಸರನ್ನು ಮಲಯಾಳಿಗೆ ರೂಪಾಂತರಿಸಲು ಮುಂದಾಗಿರುವ ಅಲ್ಲಿನ ಸರ್ಕಾರ, ಗ್ರಾಮಗಳ ಅರ್ಥವನ್ನು ಹಾಗೆಯೇ ಉಳಿಸಿಕೊಂಡು ಹೋಗುತ್ತಿದ್ದಂತೆ ಕಾಣುತ್ತಿದೆ. ಗ್ರಾಮದ ಹೆಸರಿನ ಅರ್ಥವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿರುವ ಕೇರಳ ಸರ್ಕಾರ ಅವುಗಳ ಮೂಲ ಕನ್ನಡದ ಹೆಸರನ್ನೂ ಹಾಗೆಯೇ ಕಾಪಾಡಬೇಕು. ಜನರ ಭಾವನೆಗಳೊಂದಿಗೆ ರಾಜಕಾರಣ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಭಾಷಾ ಭಾವೈಕ್ಯತೆ ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಕೇರಳ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮೈಸೂರು ಮತ್ತು ಕೊಡಗಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರೂ ಕೇರಳ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ, 

ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರು ಬದಲಾವಣೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಇದಕ್ಕೆ ತಕ್ಷಣ ತನ್ನ ವಿರೋಧ ವ್ಯಕ್ತಪಡಿಸಬೇಕು ಮತ್ತು ಕೇರಳ ಸಿಎಂ ಜೊತೆ ಮಾತನಾಡಿ ಇಂತಹ ಕನ್ನಡ ವಿರೋಧಿ ಕೆಲಸವನ್ನು ತಡೆಯಬೇಕು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.

ಇದೇ ವೇಳೆ ಯಾವ ಊರುಗಳ ಹೆಸರು ಯಾವ ರೀತಿಯ ಬದಲಾಗಿದೆ ಎಂಬುದನ್ನು ಹೇಳಿದ್ದಾರೆ. 

ಮಧೂರ-ಮಧೂರಂ, ಮಲ್ಲ-ಮಲ್ಲಂ, ಕಾರಡ್ಕ-ಕಾಡಗಂ, ಬೇಡಡ್ಕ-ಬೇಡಗಂ, ಕುಂಬಳೆ-ಕುಂಬ್ಲಾ, ಪಿಲಿಕುಂಜೆ-ಪಿಲಿಕುನ್ನು, ಆನೆಬಾಗಿಲು-ಆನವಾದುಕ್ಕಲ್, ಹೊಸದುರ್ಗ-ಪುದಿಯಕೋಟ, ಸಸಿಹಿತ್ಲು-ತೈವಳಪ್ಪು, ಮಹಾಸತಿಗುಂಡಿ-ಮಾಸ್ತಿಕುಂಡು ಎಂದು ಹೆಸರು ಬದಲಾವಣೆ ಆಗಿರುವುದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com