ಅನುದಾನ ಹಂಚಿಕೆಯಲ್ಲಿ ತಾರತಮ್ಯ; ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಆದ್ಯತೆ;  ವಿರೋಧ ಪಕ್ಷಗಳ ಆರೋಪ

ಬಜೆಟ್ ಅಧಿವೇಶನ ಆರಂಭವಾಗಲು ಇನ್ನೂ ಕೆಲವೇ  ದಿನಗಳು ಬಾಕಿಯಿದೆ, ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಲು ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Published: 01st March 2021 11:11 AM  |   Last Updated: 01st March 2021 11:11 AM   |  A+A-


Former minister Bandeppa Kashempur

ಬಂಡೆಪ್ಪ ಕಾಶೆಂಪೂರ್

Posted By : Shilpa D
Source : The New Indian Express

ಬೆಂಗಳೂರು: ಬಜೆಟ್ ಅಧಿವೇಶನ ಆರಂಭವಾಗಲು ಇನ್ನೂ ಕೆಲವೇ  ದಿನಗಳು ಬಾಕಿಯಿದೆ, ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಲು ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ವಿಧಾನಸಭೆ  ಉಪನಾಯಕ ಬಂಡೆಪ್ಪ ಕಾಶೆಂಪೂರ್, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ತೀರಾ ಹಾಳಾಗಿದೆ ಎಂದು ಬಿಜೆಪಿ ಶಾಸಕರು ಪ್ರತಿನಿಧಿಸುವ  ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ಬಿಜೆಪಿ ಶಾಸಕರ ಕ್ಷೇತ್ರಗಳ ಪ್ರಾಜೆಕ್ಟ್ ಗೆ ಒತ್ತು ನೀಡಲಾಗುತ್ತಿಗೆ ಎಂದು ಆಪಾದಿಸಿದ್ದಾರೆ.

ಸಹಜವಾಗಿ ಕ್ಷೇತ್ರಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಾರೆ, ನಮ್ಮ ಮೇಲೆ ಹಲ್ಲೆ ನಡೆಸುತ್ತಾರೆ, ಇದರಿಂದ ನಾವು ಭ್ರಮುನಿರಶನಗೊಂಡಿದ್ದಾರೆ. ಶಾಸಕರಿಗೆ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ,  ಆದರೆ ಇಲ್ಲಿ ನಾವೇ  ಸಮಸ್ಯೆಗಳನ್ನು  ಹೇಳಿಕೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಕಳೆದ ಒಂದು ವರ್ಷದಲ್ಲಿ, ನಮ್ಮ ಯಾವುದೇ ಯೋಜನೆಗಳಿಗೆ ಅನುಮೋದನೆ ದೊರೆತಿಲ್ಲ. ಪಕ್ಷದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಯೋಜನೆಗಳಿಗೆ ಅನುಮೋದನೆ ಸಿಗುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಕೂಡ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ 28 ಕ್ಷೇತ್ರಗಳಿವೆ, ಅವುಗಳಲ್ಲಿ ಹೆಚ್ಚು ಬಿಜೆಪಿ ಶಾಸಕರೇ ಇದ್ದಾರೆ.  ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಬಿಜೆಪಿ ಶಾಸಕರಿಗೆ ಹೆಚ್ಚು ಅನುದಾನ ಸಿಗುತ್ತಿದೆ ಎಂದು ಶಾಸಕ ಹ್ಯಾರಿಸ್ ಆರೋಪಿಸಿದ್ದಾರೆ. ಇದನ್ನು ಬಿಬಿಎಂಪಿ ದಾಖಲೆಗಳಲ್ಲಿ ನೋಡಬಹುದು. ಪರಿಸ್ಥಿತಿ ನಿರಾಶಾದಾಯಕವಾಗಿದೆ. ಉದಾಹರಣೆಗೆ, ಲೋಕೋಪಯೋಗಿ ಇಲಾಖೆ ಬಿಜೆಪಿ ಶಾಸಕರಿಂದ 23.5 ಕೋಟಿ ರೂ. ಮೌಲ್ಯದ ಪ್ರಸ್ತಾಪಗಳನ್ನು ಸ್ವೀಕರಿಸಿದೆ, ಆದರೆ ಕಾಂಗ್ರೆಸ್ ಮತ್ತು ಜೆಡಿ ಶಾಸಕರು ಕೇವಲ 10 ಕೋಟಿ ರೂ. ಪ್ರಸ್ತಾವನೆ ಸ್ವೀಕರಿಸಿದೆ ಎಂದು ಆರೋಪಿಸಿದ್ದಾರೆ.

ನನ್ನ ಕ್ಷೇತ್ರಕ್ಕೆ  ಸರಿಯಾಗಿ ಅನುದಾನ ನೀಡುತ್ತಿಲ್ಲ, ನಾನು ನನ್ನ ಕ್ಷೇತ್ರದ ಯಾವುದೇ  ಕೆಲಸಗಳನ್ನು ವೀಕ್ಷಿಸಲು ಹೋದಾಗ ಜನ ನನ್ನನ್ನು ಪ್ರಶ್ನಿಸುತ್ತಾರೆ, ಯಾವಾಗ ಕೆಲಸ ಪೂರ್ಣಗೊಳಿಸುತ್ತೀರಾ ಎಂದು ಕೇಳುತ್ತಾರೆ ನಾವು ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಪೋನ್ ಮಾಡಿದರೇ, ಅವರು ಹಣ ಇಲ್ಲ ಎಂದು ಹೇಳುತ್ತಾರೆ,  ಆದರೆ ಜನರು ನಮ್ಮನ್ನು ಕ್ಷಮಿಸಲು ಮನಸ್ಸು ಮಾಡುತ್ತಿಲ್ಲ ಎಂದು ದೂರಿದ್ದಾರೆ,

ಮಸೂದೆಗಳನ್ನು ತೆರವುಗೊಳಿಸದ ಕಾರಣ, ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕೆ ಎಂದು ನನ್ನನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಇಬ್ಬರೂ ಮುಂಬರುವ ಬಜೆಟ್‌ನಲ್ಲಿ ನ್ಯಾಯ ಒದಗಿಸಲಾಗುವುದು ಎಂದು ಆಶಿಸಿದ್ದಾರೆ. 

Stay up to date on all the latest ರಾಜಕೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp