ತವರು ಜಿಲ್ಲೆಯಲ್ಲಿ ಸಿದ್ದುಗೆ ಮುಖಭಂಗ: ಮೈಸೂರು ಪ್ರವಾಸ ರದ್ಧುಗೊಳಿಸಿದ ಮಾಜಿ ಸಿಎಂ

ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಿರುವುದರಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೈಸೂರು ಪ್ರವಾಸ ರದ್ಧು ಮಾಡಿದ್ದಾರೆ.

Published: 01st March 2021 09:20 AM  |   Last Updated: 01st March 2021 09:20 AM   |  A+A-


Siddaramaiah

ಸಿದ್ದರಾಮಯ್ಯ

Posted By : Shilpa D
Source : The New Indian Express

ಮೈಸೂರು: ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಿರುವುದರಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೈಸೂರು ಪ್ರವಾಸ ರದ್ಧು ಮಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕಾಂಗ್ರೆಸ್-ಜೆಡಿಎಸ್ ಒಂದಾಗಿ ಮೈಸೂರು ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಂಡವು, ಹೀಗಾಗಿ  ಮೈಸೂರು ಮೇಯರ್ ಹುದ್ದೆ ಜೆಡಿಎಸ್ ಪಾಲಾಗಿದೆ.  ಕಾಂಗ್ರೆಸ್ ಗೆ ಉಪ ಮೇಯರ್ ಸ್ಥಾನ ಸಿಕ್ಕಿರುವುದು ಸಿದ್ದರಾಮಯ್ಯ ಅವರಿಗೆ ತೀವ್ರ ಮುಜುಗರ ಉಂಟುಮಾಡಿದೆ.

ಸೋಮವಾರ ಮೈಸೂರಿಗೆ ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಆದರೆ ಡಿಕೆ ಶಿವಕುಮಾರ್ ಮತ್ತು ತನ್ವೀರ್ ಸೇಠ್ ನಡೆಯಿಂದ ಬೇಸತ್ತಿರುವ ಸಿದ್ದರಾಮಯ್ಯ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ದೆಹಲಿಯಲ್ಲಿ  ನಡೆದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲಾ ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಸಿದ್ದರಾಮಯ್ಯ ಇಅವರನ್ನು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಸಮಾಧಾನ ಪಡಿಸಿದ್ದಾರೆ, ಹೀಗಾಗಿ ಮೌಮೌನವಾಗಿರಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಪಕ್ಷದ ಚುನಾವಣಾ ಸ್ಕ್ರೀನಿಂಗ್ ಸಮಿತಿಯ ಅನುಮತಿಯಿಲ್ಲದೆ ಮುಂಬರುವ ಉಪಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಘೋಷಿಸದಂತೆ ಪಕ್ಷದ ಮುಖಂಡರಿಂದ ಸಿದ್ದರಾಮಯ್ಯ ಅವರಿಗೆ ಸೂಚಿಸಲಾಗಿದೆ.

ತಮ್ಮ ಗಮನಕ್ಕೆ ತರದೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈಜೋಡಿಸಿರುವುದಕ್ಕೆ ತನ್ವೀರ್ ಸೇಠ್ ವಿರುದ್ಧ ಕ್ರಮ ಜರುಗಿಸುವಂತೆ ಸಿದ್ದರಾಮಯ್ಯ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದ. ಹೀಗಿರುವಾಗ  ಜೆಡಿಎಸ್ ಶಾಸಕ ಸಾ.ರಾ ಮಹೇಶ್ ತನ್ವೀರ್ ಸೇಠ್ ಅವರನ್ನು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

2018 ರಲ್ಲಿ ನಿಗಮ ಚುನಾವಣೆಯ ನಂತರ ಹಿಂದಿನ ಒಪ್ಪಂದದ ಪ್ರಕಾರ ಕಾಂಗ್ರೆಸ್ ಜೊತೆಗಿನ ಒಡನಾಟವನ್ನು ಮುಂದುವರಿಸಲು ಮತ್ತು ಅವರಿಗೆ ಮೇಯರ್ ಸ್ಥಾನವನ್ನು ನೀಡಲು ಜೆಡಿಎಸ್ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಕೊನೇ ಕ್ಷಣದಲ್ಲಿ ಮೈತ್ರಿಯಾಗಲು ಜಿ.ಟಿ.ದೇವೇಗೌಡ ಮತ್ತು ಸಂದೇಶ್ ನಾಗರಾಜ್ ಕಾರಣ. ಅವರು ಚುನಾವಣೆಗೆ ಬಂದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಮೈತ್ರಿ ಗೊಂದಲಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ ಸಾ.ರಾ.ಮಹೇಶ್ ಮೈಸೂರು ಜಿಲ್ಲೆಯಿಂದಲೇ ಜನತಾದಳದ ಶಕ್ತಿಯನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿದ್ದೇವೆ. ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ ಎಂದರು.

Stay up to date on all the latest ರಾಜಕೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp