ರಾಮ ಮಂದಿರಕ್ಕೆ 1 ರೂಪಾಯಿ ಕೊಡದವರು ಲೆಕ್ಕ ಕೇಳ್ತಾರೆ: ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವುದಕ್ಕೆ ಗೋವಿನ ಶಾಪ ಮುಖ್ಯ ಕಾರಣ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.
Published: 02nd March 2021 03:20 PM | Last Updated: 02nd March 2021 03:58 PM | A+A A-

ಈಶ್ವರಪ್ಪ
ಕುಷ್ಟಗಿ: ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವುದಕ್ಕೆ ಗೋವಿನ ಶಾಪ ಮುಖ್ಯ ಕಾರಣ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಗೋಹತ್ಯೆ ನಡೆಸುವವರ ಪರವಾಗಿ ಅಧಿಕಾರ ನಡೆಸಿದ್ದರಿಂದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಇಬ್ಬರು ಅಧಿಕಾರ ಕಳೆದುಕೊಂಡರು.
ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ರಾಜ್ಯದ ಮಹಾ ಸುಳ್ಳುಗಾರರು, ಇಬ್ಬರೂ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ. ಮೊದಲು ಇವರು ಚುನಾವಣೆಯಲ್ಲಿ ಗೆದ್ದು ಬರಲಿ ನಂತರ ಮುಂದಿನ ಮಾತು, ಆಸೆ ಎಂದು ವ್ಯಂಗವಾಡಿದರು .
ಇನ್ನು ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಲೆಕ್ಕಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ದೇಣಿಗೆ ನೀಡಿದ ಬಡ ರೈತ ಕೇಳಲಿ ಲೆಕ್ಕ ಕೊಡುತ್ತೇವೆ ಆದರೆ ಒಂದು ರೂಪಾಯಿ ಕೊಡದಿರುವ ಸಿದ್ದರಾಮಯ್ಯ ಲೆಕ್ಕ ಕೇಳಲು ಯಾರು? ಎಂದು ಸಚಿವರು ಸಿಡಿಮಿಡಿಕೊಂಡರು.