ಬಜೆಟ್ ಅಧಿವೇಶನ: ಬೆಲೆ ಏರಿಕೆ, ಸೆಕ್ಸ್ ಸಿಡಿ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಸಜ್ಜು

ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟ, ಎಲ್ಲಾ ಸಮುದಾಯಗಳನ್ನು ಸಂತೃಪ್ತಿಪಡಿಸುವ ಸವಾಲುಗಳ ನಡುವೆ ಗುರುವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದೆ.

Published: 03rd March 2021 07:48 PM  |   Last Updated: 05th March 2021 07:04 PM   |  A+A-


Assembly session

ವಿಧಾನಸಭೆ

Posted By : Lingaraj Badiger
Source : UNI

ಬೆಂಗಳೂರು: ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟ, ಎಲ್ಲಾ ಸಮುದಾಯಗಳನ್ನು ಸಂತೃಪ್ತಿಪಡಿಸುವ ಸವಾಲುಗಳ ನಡುವೆ ಗುರುವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದೆ.
 
ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಇದೀಗ ಸದನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿಗೆ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. 
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಸ್ವಲ್ಪ ಮಟ್ಟಿಗೆ ಅನುಕಂಪ ಹೊಂದಿರುವ ಜೆಡಿಎಸ್, ಈ ಬಾರಿ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದೆ. ಹೀಗಾಗಿ ಸದನದಲ್ಲಿ ಯಾರು ಯಾರ ಪರ, ಯಾರು ಯಾರ ವಿರುದ್ಧ ಎನ್ನುವ ಗೊಂದಲ ನಿರ್ಮಾಣವಾಗುವ ಸಾಧ್ಯತೆಗಳು ಸಹ ನಿರ್ಮಾಣವಾಗಲಿದೆ. 
 
ರಮೇಶ್ ಜಾರಕಿ ಹೊಳಿ ರಾಸಲೀಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ. ಈಗಾಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಸದನದಲ್ಲಿ ಈ ವಿಚಾರ ಅಲ್ಲಲ್ಲಿ ಪ್ರಸ್ತಾಪವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳು ಹೆಚ್ಚಾಗಿವೆ. 
 
ಮೀಸಲಾತಿಗಾಗಿ ವಿವಿಧ ಸಮುದಾಯಗಳು ನಡೆಸಿರುವ ಹೋರಾಟ ಸರ್ಕಾರಕ್ಕೆ ಇರುಸು – ಮುರುಸು ಉಂಟುಮಾಡಲಿದೆ. ಶಾಸಕರು ತಮ್ಮ ಸಮುದಾಯಗಳ ಪರ ಸದನದಲ್ಲಿ ಧ್ವನಿ ಎತ್ತಿ ತಮ್ಮ ಜಾತಿ, ಜನಾಂಗಗಳಿಗೆ ಮೀಸಲಾತಿ, ನಿಗಮ ಮಂಡಳಿಗಳ ರಚನೆ, ಹಣಕಾಸು ನೆರವಿಗಾಗಿ ಒತ್ತಡ ಹೇರಲಿವೆ. 
 
ಬೆಲೆ ಏರಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಇಡೀ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ರಾಜ್ಯದಲ್ಲಿ ಅತಿ ಹೆಚ್ಚು ಇದ್ದು, ತೆರಿಗೆ ದರ ಕಡಿಮೆ ಮಾಡುವಂತೆ ವಿಪಕ್ಷಗಳು ಆಗ್ರಹಿಸಲಿವೆ. ಗಗನಕ್ಕೇರಿರುವ ಪೆಟ್ರೋಲ್-ಡೀಸೆಲ್, ಅಡುಗೆ ಅನಿಲದ ಬೆಲೆಯಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ವಾಗ್ಬಾಣ ಬಿಡಲು ಸಜ್ಜಾಗಿವೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಸ್ಥಳೀಯ ತೆರಿಗೆಗಳನ್ನು ಕಡಿತ ಮಾಡಲು ಪ್ರತಿಪಕ್ಷಗಳು ಸದನದಲ್ಲಿ ಪಟ್ಟು ಹಿಡಿಯುವ ಸಾಧ್ಯತಗಳಿವೆ.
 
ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದು, ಇದು ಪ್ರತಿಪಕ್ಷಗಳಲ್ಲಿ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಗೆ ಹೆಚ್ಚು ವರದಾನವಾಗಲಿದೆ. ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಅಸಮಾಧಾನ ಅತೃಪ್ತಿಗಳನ್ನು ಬಂಡವಾಳ ಮಾಡಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ.
 
ಕನಕಗುರು ಪೀಠದ ನಿರಂಜನನಂದಾಪುರಿ ಸ್ವಾಮೀಜಿ ಪಾದಯಾತ್ರೆ ನಡೆಸಿ ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವಂತೆ ಹಕ್ಕೋತ್ತಾಯ ಮಂಡಿಸಿರುವುದು, ಇದರ ಬೆನ್ನಲ್ಲೇ ಲಿಂಗಾಯತ ಪಂಚಮಸಾಲಿ ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲ ಸಂಗಮದಿಂದ ಪಾದಯಾತ್ರೆ ಕೈಗೊಂಡು ಪಂಚಮಸಾಲಿಗಳನ್ನು ೨ಎ ಪ್ರವರ್ಗಕ್ಕೆ ಸೇರಿಸಬೇಕೆಂಬ ವಿಚಾರ ವಾದ-ಪ್ರತಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ವಿವಿಧ ಮಠಾಧೀಶರು ತಮ್ಮ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಿರುವ ವಿಚಾರ ಸದನದಲ್ಲಿ ಪ್ರಸ್ತಾಪವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
 
ಬಜೆಟ್ ಅಧಿವೇಶನದ ಮೊದಲು ಎರಡು ದಿನಗಳಲ್ಲಿ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಬಜೆಟ್ ಅಧಿವೇಶನ ಈ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಮಾ. ೮ ರಂದು ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಈ ಅಧಿವೇಶನದಲ್ಲಿ ಹಲವು ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ. ಉಳಿದಂತೆ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಗಮನ ಸೆಳೆಯುವ ಕಲಾಪಗಳು, ನಿಯಮ ೬೯ರ ಅಡಿ ಚರ್ಚೆ ಕಲಾಪಗಳು ನಿಗದಿಯಾಗಿವೆ. ಆದರೆ ಮಂತ್ರಕ್ಕಿಂತ ಉಗುಳು ಜಾಸ್ತಿ ಎಂಬಂತೆ ವಿಷಯಗಳಿಗಿಂತ ಅನಗತ್ಯ ವಿಷಯಗಳೇ ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.


Stay up to date on all the latest ರಾಜಕೀಯ news
Poll
Omicron

ಮಾಲ್‌ಗಳು/ಥಿಯೇಟರ್‌ಗಳಿಗೆ ಭೇಟಿ ನೀಡಲು ಎರಡು ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದು ಸರಿಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp