66 ವರ್ಷ ವಯಸ್ಸಾಗಿದೆ, ನನ್ನ ಕೊನೆಯ ಚುನಾವಣೆಗೆ ಟಿಕೆಟ್ ನೀಡಿ: ಪ್ರಮೋದ್ ಮುತಾಲಿಕ್
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ. ಟಿಕೆಟ್ಗಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
Published: 07th March 2021 11:27 AM | Last Updated: 08th March 2021 01:58 PM | A+A A-

ಪ್ರಮೋದ್ ಮುತಾಲಿಕ್
ಬಾಗಲಕೋಟೆ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ. ಟಿಕೆಟ್ಗಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಟಿಕೆಟ್ ಸಿಗುವ ಭರವಸೆ ಇದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಈಗಾಗಲೇ ನನಗೆ 66 ವರ್ಷ ವಯಸ್ಸಾಗಿದೆ, ಇದೇ ನನ್ನ ಕೊನೆ ಚುನಾವಣೆ, ಹೀಗಾಗಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ, ಟಿಕೆಟ್ ವಿಚಾರವಾಗಿ ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಟಿಕೆಟ್ ಸಿಗುವ ಭರವಸೆ ಇದೆ. ಇನ್ನೂ ಮೂರು ವರ್ಷ ಅವಧಿ ಇದ್ದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅಭಿವೃದ್ಧಿ,ಹಿಂದುತ್ವದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಒಂದು ವೇಳೆ ಟಿಕೆಟ್ ಸಿಗದೆ ಸುರೇಶ್ ಅಂಗಡಿಯವರ ಕುಟುಂಬಕ್ಕೋ, ಜಗದೀಶ್ ಶೆಟ್ಟರ್ ಕುಟುಂಬಕ್ಕೋ ಕೊಟ್ಟರೆ ಅವರು ನನ್ನನ್ನು ಪ್ರಚಾರಕ್ಕೆ ಕರೆದರೆ ಅವರ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.