ಗ್ರಾಫಿಕ್ಸ್ ಗೆ ಬಲಿಪಶು ಆಗುವ ಭಯದಿಂದ ಕೋರ್ಟ್ ಮೊರೆ: ಸಚಿವ ಯೋಗೇಶ್ವರ್ ಸಮರ್ಥನೆ

ಇದು ಗ್ರಾಫಿಕ್ ಯುಗ, ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ. ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ.

Published: 08th March 2021 08:33 AM  |   Last Updated: 08th March 2021 01:58 PM   |  A+A-


CP yogeshwar

ಯೋಗೇಶ್ವರ್

Posted By : Shilpa D
Source : The New Indian Express

ಮೈಸೂರು: ಇದು ಗ್ರಾಫಿಕ್ ಯುಗ, ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ. ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ. ಆದ್ದರಿಂದ ಕೋರ್ಟ್‌ ಮೊರೆ ಹೋಗಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.  

ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಸಿನಿಮಾ ಕ್ಷೇತ್ರದಿಂದ ಬಂದವನು, ಹಾಗಾಗಿ ನನಗೆ ಅದೆಲ್ಲಾ ಗೊತ್ತಿದೆ. ಸಿನಿಮಾದಲ್ಲಿ ಕೈ ಕಾಲು ಕಟ್‌ ಮಾಡಿಕೊಂಡು ನಿಮ್ಮ ಮುಂದೆ ಬಂದು ನಿಲ್ಲೋಕಾಗುತ್ತಾ. ಈ ಕಾಲದಲ್ಲಿ ಗ್ರಾಫಿಕ್ಸ್ ನಲ್ಲಿ ಏನೂ ಬೇಕಾದ್ರು ಮಾಡಬಹುದು. ಈ ಗ್ರಾಫಿಕ್ಸ್ ಕುತಂತ್ರದಿಂದ ಮಾನ ಮರ್ಯಾದೆ, ಗೌರವದ ಕಾರಣಕ್ಕಾಗಿ ಹಲವು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸುಳ್ಳು ಬೇಗ ಹರಡುತ್ತದೆ, ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕಾಗುತ್ತದೆ. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಜನರು ಅದನ್ನು ನಂಬುತ್ತಾರೆ. ಅದು ಸುಳ್ಳಾ ಅಥವ ಸತ್ಯವಾ ಎಂದು ಹೊರಬರುವುದು ಪೊಲೀಸ್ ತನಿಖೆಯಿಂದ ಅಥವ ನ್ಯಾಯಾಲಯದ ಆದೇಶದ ಮೂಲಕ. ಆದರೆ ಅದಕ್ಕಿಂತ ಮುಂಚೆ ಮಾಧ್ಯಮದಲ್ಲಿ ಬಂದರೆ ಆ ಘಟನೆಯಲ್ಲಿ ಸಿಲುಕಿಕೊಂಡವರಿಗೆ ಘಾಸಿ ಜಾಸ್ತಿ ಆಗುತ್ತದೆ ಎಂದು ಹೇಳಿದ್ದಾರೆ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp