ನಕಲಿ ಸಿಡಿ ಹಿಂದೆ ದೊಡ್ಡ ದೊಡ್ಡ ಕೈಗಳೇ ಇವೆ, ಸೂಕ್ತ ತನಿಖೆ ನಡೆಯಬೇಕು- ವಿಜಯೇಂದ್ರ ಸೇರಿ ಹಲವು ಮುಖಂಡರ ಒತ್ತಾಯ 

ರಮೇಶ್ ಜಾರಕಿಹೊಳಿ ವಿರುದ್ಧ  ಹನಿಟ್ರ್ಯಾಪ್ ಮೂಲಕ ನಕಲಿ ಸಿಡಿ ಕಾರ್ಯಾಚರಣೆ ನಡೆಸಿದ್ದವರು ಸಾಮಾನ್ಯರೂ ಅಲ್ಲ ಸಣ್ಣವರೂ ಅಲ್ಲ. ಈ ಷಡ್ಯಂತ್ರದ ಹಿಂದೆ ದೊಡ್ಡದೊಡ್ಡ ಕೈಗಳೇ ಇರುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಬಿಜೆಪಿ ಉಪಾಧ್ಯಕ್ಷ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Published: 09th March 2021 03:45 PM  |   Last Updated: 09th March 2021 05:33 PM   |  A+A-


BY Vijayendra

ಬಿ.ವೈ. ವಿಜಯೇಂದ್ರ

Posted By : Nagaraja AB
Source : UNI

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ  ಹನಿಟ್ರ್ಯಾಪ್ ಮೂಲಕ ನಕಲಿ ಸಿಡಿ ಕಾರ್ಯಾಚರಣೆ ನಡೆಸಿದ್ದವರು ಸಾಮಾನ್ಯರೂ ಅಲ್ಲ ಸಣ್ಣವರೂ ಅಲ್ಲ. ಈ ಷಡ್ಯಂತ್ರದ ಹಿಂದೆ ದೊಡ್ಡದೊಡ್ಡ ಕೈಗಳೇ ಇರುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಬಿಜೆಪಿ ಉಪಾಧ್ಯಕ್ಷ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈ ಪ್ರಕರಣ ಕುರಿತು ಜಾರಕಿಹೊಳಿ‌ ಸಹೋದರರು ಮತ್ತೊಮ್ಮೆ ಸಿಎಂ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ. ನಕಲಿ ಸಿಡಿ ಪ್ರಕರಣ ಬಗ್ಗೆ ರಮೇಶ್ ಜಾರಕಿಹೊಳಿ ಸಹೋದರರ ಅಪೇಕ್ಷೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನಿಖೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಈ ನಡುವೆ ಸಿಡಿ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, ಈ  ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ. ಇದು ಸುಳ್ಳು ದಾಖಲೆ ರೀತಿಯಲ್ಲಿದೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ ವಿರುದ್ದ ನಕಲಿ ಸಿಡಿ ಬಿಡುಗಡೆ ಮಾಡುವ ಮೂಲಕ ರಾಜಕೀಯ ಷಡ್ಯಂತ್ರ ನಡೆಸಲಾಗಿದ್ದು ಈ ಬಗ್ಗೆ ತನಿಖೆ ನಡೆಸಲು ಆದೇಶಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ತನಿಖೆಗೆ ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ನಿವಾಸಕ್ಕೆ ರಾಜೂಗೌಡ ಜೊತೆ ಆಗಮಿಸಿ ನೈತಿಕ ಬೆಂಬಲ ನೀಡಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿನ ತೇಜೋವಧೆ ಮಾಡುತ್ತಿದ್ದಾರೆ. ಇಂತಹ ಬ್ಲಾಕ್‌ ಮೇಲ್ ಮಾಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಆರೋಪ ಬರುತ್ತಿದ್ದಂತೆ ನೈತಿಕ ಹೊಣೆ ಹೊತ್ತು, ಸರ್ಕಾರ  ಮತ್ತು ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ನೋಡಿದರೆ ದೂರದಾರರೇ ದೂರು ವಾಪಸ್ ಪಡೆದಿದ್ದಾರೆ ಹಾಗಾಗಿ ರಾಜಕೀಯಕ್ಕೆ ಮತ್ತೆ ರಮೇಶ್ ಜಾರಕಿಹೊಳಿ ವಾಪಸ್ ಬರಬೇಕು ಎಂದರು.
  
ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಾರಕಿಹೊಳಿ ಕುಟುಂಬದ ಆಪ್ತ, ಮಾಜಿ ಶಾಸಕ ನಾಗರಾಜ್, ನಕಲಿ ಸಿಡಿ ಬಲೆ ಹೆಣೆದಿರುವ ಮಾಹಿತಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಾಗಿತ್ತು ಈ ಬಗ್ಗೆ ರಮೇಶ್ ಜಾರಕಿಹೊಳಿ ಅವರ ಗಮನಕ್ಕೂ ತರಲಾಗಿತ್ತು ಎಂದು ತಿಳಿಸಿದರು.

ನನಗೆ ಬಾಲಚಂದ್ರ ಜಾರಕಿಹೊಳಿ ನಾಲ್ಕು ತಿಂಗಳ ಹಿಂದೆ ಹೇಳಿದ್ದರು.  ರಮೇಶ್ ಅಣ್ಣ ನ ಬಳಿ ಹೋಗಿ ಈ ವಿಚಾರ ತಿಳಿಸು ಎಂದಿದ್ದರು. ಆಗ ರಮೇಶ್ ಜಾರಕಿಹೊಳಿ ಅವರು ನನ್ನ ಸಿಡಿ ಇರಲು ಸಾಧ್ಯವಿಲ್ಲ. ಸಿಡಿ ಎಲ್ಲಿರುತ್ತೆ ಎಲ್ಲಾ ಸುಳ್ಳು ಎಂದಿದ್ದರು. ನಾನು ಆ ರೀತಿಯಲ್ಲಿ ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಒಟ್ಟಾರೆ ಜಾರಕಿಹೊಳಿ ಅವರ ಮನೆತನದ ಗೌರವ ಉಳಿಯಬೇಕು ಅಷ್ಟೇ ಎಂದರು.

Stay up to date on all the latest ರಾಜಕೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp