ನಿಮಗೆ ಉತ್ತರಿಸುವ ನೈತಿಕತೆಯಿಲ್ಲ: ಪರಿಷತ್ ನಲ್ಲಿ ಭೈರತಿ ಬಸವರಾಜ್ ಗೆ ಮುಖಭಂಗ
ತಮ್ಮ ವಿರುದ್ಧ ಸಿಡಿ ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿರುವ ಸಚಿವ ಭೈರತಿ ಬಸವರಾಜ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
Published: 10th March 2021 11:40 AM | Last Updated: 10th March 2021 12:18 PM | A+A A-

ಭೈರತಿ ಬಸವರಾಜ್
ಬೆಂಗಳೂರು: ತಮ್ಮ ವಿರುದ್ಧ ಸಿಡಿ ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿರುವ ಸಚಿವ ಭೈರತಿ ಬಸವರಾಜ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸುವ ನೈತಿಕ ಹಕ್ಕು ಬೈರತಿ ಬಸವರಾಜ್ ಅವರಿಗಿಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು. ಸರ್ಕಾರಕ್ಕೆ ಈ ಬಗ್ಗೆ ಅರಿವಿದೆಯೋ ಇಲ್ಲವೋ ಎಂದು ಪ್ರಶ್ನಿಸಿದರು. ಆದರೆ ಇದಕ್ಕೆ ಸರ್ಕಾರ ನಕಾರಾತ್ಮಕ ಉತ್ತರ ನೀಡಿದಾಗ, ಸರ್ಕಾರದ ವಿರುದ್ಧ ಹಕ್ಕು ಚ್ಯುತಿ ಮಂಡಿಸುವುದಾಗಿ ಇಬ್ರಾಹಿಂ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸದಸ್ಯರಾದ ಆರ್. ಪ್ರಸನ್ನಕುಮಾರ್ ಅವರು ನಗರ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಬಸವರಾಜ್ ಪಾಟೀಲ್ ಇಟಗಿ ಅವರು ರಾಯಚೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಪ್ರಶ್ನೆ ಕೇಳಬೇಕಿತ್ತು. ಇಬ್ಬರೂ ಪ್ರಶ್ನೆ ಕೇಳುವುದನ್ನು ಬಹಿಷ್ಕರಿಸಿರುವುದಾಗಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ಕೊಡುವಾಗ ನಿರಾಕರಿಸಿ, ಸಚಿವರನ್ನು
ಮುಜುಗರಕ್ಕೆ ದೂಡುವುದು ಕಾಂಗ್ರೆಸ್ ತಂತ್ರದ ಭಾಗ. ‘ಇಲಾಖೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಬುಧವಾರ ಈ ಸಚಿವರ ಪೈಕಿ ಬಹುತೇಕರು ಉತ್ತರ ನೀಡಲಿದ್ದು, ಆ ವೇಳೆ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು ಕಾಂಗ್ರೆಸ್ ಉದ್ದೇಶವಾಗಿತ್ತು,