ಬಜೆಟ್ ಚರ್ಚೆ: ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಜಟಾಪಟಿ

2021-2022ನೇ ಸಾಲಿನ ರಾಜ್ಯ ಬಜೆಟ್ ಕುರಿತ ಚರ್ಚೆ ವೇಳೆ ವಿಧಾನಸಭೆ ವಿರೋಧ ಪಕ್ಷದನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ಜಟಾಪಟಿ ನಡೆಯಿತು.

Published: 16th March 2021 08:08 AM  |   Last Updated: 16th March 2021 12:33 PM   |  A+A-


Yeddyurappa

ಸಿಎಂ ಯಡಿಯೂರಪ್ಪ

Posted By : Manjula VN
Source : The New Indian Express

ಬೆಂಗಳೂರು: 2021-2022ನೇ ಸಾಲಿನ ರಾಜ್ಯ ಬಜೆಟ್ ಕುರಿತ ಚರ್ಚೆ ವೇಳೆ ವಿಧಾನಸಭೆ ವಿರೋಧ ಪಕ್ಷದನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ಜಟಾಪಟಿ ನಡೆಯಿತು.

ಚರ್ಚೆ ವೇಳೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದರು.

ಈ ವೇಳೆ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮಹಿಳೆಯರಿಗಾಗಿ ಮೀಸಲಿಟ್ಟಿರುವ 4,507 ಕೋಟಿ ರೂ ಬಜೆಟ್‌ನ ಒಟ್ಟಾರೆ ಶೇಕಡವಾರುಗಳಲ್ಲಿ ಕೇವಲ 1.83% ಮಾತ್ರವೇ ಆಗಿದೆ, ಎಸ್‌ಸಿಎಸ್‌ಪಿ / ಟಿಎಸ್‌ಪಿ ಅನುದಾನವನ್ನು ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಕಡಿಮೆ ಮಾಡಲಾಗಿದೆ, ವಿತ್ತೀಯ ಹೊಣೆಗಾರಿಕೆ ನೀತಿಯ ಅನ್ವಯ ವಿತ್ತೀಯ ಕೊರತೆ ಶೇ.3ಕ್ಕಿಂತ ಕಡಿಮೆ ಇರಬೇಕು, ರಾಜಸ್ವ ಉಳಿಕೆ ಇರಬೇಕು ಹಾಗೂ ರಾಜ್ಯದ ಸಾಲ ಜೆ.ಎಸ್.ಡಿ.ಪಿ ಯ ಶೇ. 25 ಗಿಂತ ಕಡಿಮೆ ಇರಬೇಕು. ನನ್ನ 5 ವರ್ಷಗಳ ಆಡಳಿತದಲ್ಲಿ ಯಾವತ್ತೂ ಕೂಡ ಈ ನಿಯಮ ಉಲ್ಲಂಘನೆಯಾಗಿಲ್ಲ. 2019-20 ರಲ್ಲಿ ಕರ್ನಾಟಕ ರೂ.1185 ಕೋಟಿ ರಾಜಸ್ವ ಉಳಿಕೆ ಹೊಂದಿತ್ತು. 2020-21 ನೇ ಸಾಲಿನಲ್ಲಿ ರೂ.143 ಕೋಟಿ ರಾಜಸ್ವ ಉಳಿಕೆ ಆಗಬಹುದೆಂಬ ಅಂದಾಜು ಮಾಡಲಾಗಿತ್ತು, ಈಗ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜಸ್ವ ಉಳಿಕೆಯ ಬದಲಿಗೆ ರೂ.19,485 ಕೋಟಿ ರಾಜಸ್ವ ಕೊರತೆ ಉಂಟಾಗಿದೆ. ಇಷ್ಟೇ ಅಲ್ಲದೆ 2021-22 ನೇ ಸಾಲಿನಲ್ಲಿ ರೂ.15,133 ಕೋಟಿ ರಾಜಸ್ವ ಕೊರತೆ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.

ಸರ್ಕಾರ ಸಾಲ ಮಾಡಿ ರಾಜಸ್ವ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇಂದು ಎದುರಾಗಿದೆ. ಸರ್ಕಾರ ಈ ವರ್ಷದ ಜನವರಿ ವರೆಗೆ ರೂ.70,000 ಕೋಟಿ ಸಾಲ ಮಾಡಿದೆ. ಇದು ರಾಜ್ಯದ ಜಿ.ಎಸ್.ಡಿ.ಪಿ ಯ 26.90% ಆಗಿದೆ. ಈ ಬಾರಿ ಕೇಂದ್ರ ರಾಜ್ಯಗಳಿಗೆ ಜಿ.ಎಸ್.ಡಿ.ಪಿ ಯ 25% ಮೇಲೆ 2% ಹೆಚ್ಚುವರಿಯಾಗಿ ಸಾಲ ಪಡೆಯಲು ಅನುಮತಿ ನೀಡುತ್ತೇವೆ ಎಂದು ಹೇಳಿದೆ. ಹೀಗೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡುತ್ತಾ ಹೋದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ. ಪ್ರಸಕ್ತ ಬಜೆಟ್‌ ನಲ್ಲಿ ಈ ಸಾಲಿನಲ್ಲಿ ರೂ.71,000 ಕೋಟಿ ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ರಾಜ್ಯದ ಬದ್ಧತಾ ಖರ್ಚು ಈ ವರ್ಷ 92% ತಲುಪಿದೆ, ಇದು ಮುಂದಿನ ಸಾಲಿನಲ್ಲಿ ಶೇ.102ರಷ್ಟು ಆಗಲಿದೆ. ಅಂದರೆ ಸರ್ಕಾರ ಸಾಲ ಮಾಡಿದ ಹಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಹಣ ನೀಡಬೇಕಾಗುತ್ತದೆ. ಇದರಿಂದ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳಲಿವೆ.

ಸರ್ಕಾರ ತನ್ನೆಲ್ಲಾ ಕಷ್ಟ ನಷ್ಟಗಳಿಗೆ, ಲೋಪದೋಷಗಳಿಗೆ ಕೊರೋನಾವನ್ನು ಹೊಣೆ ಮಾಡುತ್ತಿದೆ. ಕೊರೋನಾ ವ್ಯಾಪಕವಾಗಿ ಹರಡಿದ ಪರಿಣಾಮದಿಂದ ಲಾಕ್‌ ಡೌನ್‌ ಘೋಷಣೆ ಮಾಡಲಾಯಿತು. ಇದರಿಂದ ಜನ ಉದ್ಯೋಗವಿಲ್ಲದೆ ಮನೆಯಲ್ಲೇ ಕೂರುವಂತಾಗಿ, ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲವಾಯಿತು. ಈ ವೇಳೆ ಸರ್ಕಾರ ರಾಜ್ಯದ 1 ಕೋಟಿ ಕುಟುಂಬಗಳಿಗೆ ತಲಾ ರೂ.10,000 ಹಣ ನೀಡಿದ್ದರೆ ಜನರಲ್ಲಿ ಕೊಳ್ಳುವ ಶಕ್ತಿಯೂ ಬರುತ್ತಿತ್ತು, ಜೊತೆಗೆ ರಾಜ್ಯದ ವ್ಯಾಪಾರ ವಹಿವಾಟು ಪ್ರಕ್ರಿಯೆಗೂ ಮರುಜೀವ ಬರುತ್ತಿತ್ತು. ಈ ಬಗ್ಗೆ ನಾನು ಹಲವು ಬಾರಿ ಪತ್ರ ಬರೆದರೂ ಸರ್ಕಾರ ನಮ್ಮ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದದ್ದು ದುರದೃಷ್ಟಕರ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ತೀವ್ರವಾಗಿ ಕೆಂಡಾಮಂಡಲಗೊಂಡ ಯಡಿಯೂರಪ್ಪ ಅವರು, ಸರ್ಕಾರ ಬಜೆಟ್'ನ್ನು ಸಮರ್ಥಿಸಿಕೊಂಡರು. ನಾನು ಅತ್ಯಂತ ಉತ್ತಮವಾದ ಬಜೆಟ್ ಮಂಡನೆ ಮಾಡಿದ್ದೇನೆ. ಬಜೆಟ್'ಗೆ ಜನರಿಂದಲೂ ಉತ್ತಮವಾದ ಪ್ರತಿಕ್ರಿಯೆ, ಮೆಚ್ಚುಗೆಗಳು ಬಂದಿವೆ. ನೀವು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದೀರಿ. ಅದು ಖಂಡಿತವಾಗಿಯೂ ಸಾಧ್ಯವಿಲ್ಲ. ಈ ಬಜೆಟ್ ನೊಂದಿಗೇ ಜನರ ಮುಂದೆ ಹೋಗೋಣ. ಉಪ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂದು ನೋಡೋಣ ಎಂದು ಸವಾಲು ಹಾಕಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ನೀವು ಉಪ ಚುನಾವಣೆಗೆ ಬಂದು ಕುಸ್ತಿ ಮಾಡಿ ಎನ್ನಬೇಡಿ. ನಿಮಗೆ ಧೈರ್ಯವಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ ಬನ್ನಿ. ಚುನಾವಣೆಗೆ ಹೋಗೋಣ. ಜನರು ಯಾರಿಗೆ ಮತ ನೀಡುತ್ತಾರೆಂಬುದನ್ನು ನೋಡೇ ಬಿಡೋಣ ಎಂದು ಪ್ರತಿ ಸವಾಲು ಹಾಕಿದರು.

ಉಪ ಚುನಾವಣೆಗಳನ್ನು ನಮ್ಮ ಸರ್ಕಾರ ಇದ್ದಾಗ ನಾವೂ ಗೆದ್ದಿದ್ದೇವೆ. ಹೆಬ್ಬಾಳ ಹೊರತುಪಡಿಸಿ ಉಳಿದೆಲ್ಲಾ ಕಡೆಯೂ ಗೆದ್ದಿದ್ದೆವು. ಹೀಗಾಗಿ ಸರ್ಕಾರ ಇದ್ದಾಗ ಉಪಚುನಾವಣೆ ಗೆಲ್ಲುವುದು ಮುಖ್ಯವಲ್ಲ. ವಿಧಾನಸಭೆ ಚುನಾವಣೆ ಎದುರಿಸಿ ಎಂದು ಹೇಳಿದರು.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp