ತಾಕತ್ತಿದ್ದರೆ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ರದ್ಧುಗೊಳಿಸಿ: ಪ್ರಿಯಾಂಕ್ ಖರ್ಗೆ

ವಿರೋಧ ಪಕ್ಷದ ಶಾಸಕರ ವಾಗ್ದಾಳಿಯಿಂದ ಸೋಮವಾರ ರೂಪಾಲಿ ನಾಯಕ್ ಬಿಜೆಪಿ ಸಚಿವರ ಬೆಂಬಲಕ್ಕೆ ನಿಂತಿದ್ದರು, ಅದೇ ರೀತಿ ಬುಧವಾರ ಕೆಜಿ ಬೋಪಯ್ಯ ಮತ್ತು ಅರಗ ಜ್ಞಾನೇಂದ್ರ ಯಡಿಯೂರಪ್ಪ ಸರ್ಕಾರದ ಪರವಾಗಿ ಮಾತನಾಡಿದರು.

Published: 18th March 2021 10:03 AM  |   Last Updated: 18th March 2021 12:54 PM   |  A+A-


Priyank Kharge,

ಪ್ರಿಯಾಂಕ್ ಖರ್ಗೆ

Posted By : Shilpa D
Source : The New Indian Express

ಬೆಂಗಳೂರು: ವಿರೋಧ ಪಕ್ಷದ ಶಾಸಕರ ವಾಗ್ದಾಳಿಯಿಂದ ಸೋಮವಾರ ರೂಪಾಲಿ ನಾಯಕ್ ಬಿಜೆಪಿ ಸಚಿವರ ಬೆಂಬಲಕ್ಕೆ ನಿಂತಿದ್ದರು, ಅದೇ ರೀತಿ ಬುಧವಾರ ಕೆಜಿ ಬೋಪಯ್ಯ ಮತ್ತು ಅರಗ ಜ್ಞಾನೇಂದ್ರ ಯಡಿಯೂರಪ್ಪ ಸರ್ಕಾರದ ಪರವಾಗಿ ಮಾತನಾಡಿದರು.

ಶಾಸಕ ಯುಟಿ ಖಾದರ್ ಬಜೆಟ್ ಮೇಲಿನ ಚರ್ಚೆ ವೇಳೆ ಸರ್ಕಾರ ಬಿಪಿಎಲ್ ಕಾರ್ಡ್ ವಿತರಣೆ ಸಂಬಂಧ ಹರಿಹಾಯ್ದರು, ಈ ವೇಳೆ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರನ್ನು ಹೊರತುಪಡಿಸಿದರೇ ಯಾವುದೇ ಸಚಿವರು ಉತ್ತರ ನೀಡಲು ಅಲ್ಲಿರಲಿಲ್ಲ.

ಬಿಪಿಎಲ್ ಕಾರ್ಡ್ ಗಳನ್ನು ರದ್ದು ಪಡಿಸಿರುವುದು ಹೆಮ್ಮೆಯ ವಿಷಯವಲ್ಲ,  ಎಷ್ಟು ಮಂದಿಗೆ ಬಿಪಿಎಲ್ ಕಾರ್ಡ್ ನೀಡಿದ್ದೀರಿ ಎಂದು ಹೇಳಿ ನಂತರ ಹೆಮ್ಮೆ ಪಡಿ ಎಂದು ಖಾದರ್ ವಾಗ್ದಾಳಿ ನಡೆಸಿದರು.  ಈ ವೇಳೆ ಉತ್ತರಿಸಿದ ಅರಗ ಜ್ಞಾನೇಂದ್ರ, ಯುಟಿ ಖಾದರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಅನ್ನಭಾಗ್ಯ ಯೋಜನೆಯಡಿ ಸರ್ಕಾರ, ಅಕ್ಕಿ ನೀಡುವುದನ್ನು ಕಡಿಮೆ ಮಾಡುತ್ತಿರುವುದರ ಬಗ್ಗೆ ಖಾದರ್ ಪದೇ ಪದೇ ಪ್ರಶ್ನಿಸುತ್ತಿದ್ದರು, ಈ ವೇಳೆ ಸರ್ಕಾರದ ಪರವಾಗ ಮಾತನಾಡಿದ ಕೆಜಿ ಬೋಪಯ್ಯ, ಕೇಂದ್ರ ಸರ್ಕಾರದ  ಪಡಿತರ ಧಾನ್ಯ ವಿತರಣೆ ಹೆಚ್ಚು ಸದೃಢವಾಗಿದೆ, ವಿರೋಧ ಪಕ್ಷ ಕಾಂಗ್ರೆಸ್ ಶಾಸಕರು ಮಾಡುತ್ತಿರುವ ವಾಗ್ದಾಳಿಗೆ ಸೂಕ್ತವಾಗಿ ಉತ್ತರಿಸುವಂತೆ ಸಚಿವರುಗಳಿಗೆ ಕೆಜಿ ಬೋಪಯ್ಯ ಸೂಚಿಸಿದರು.

ಅನ್ನಭಾಗ್ಯ ಯೋಜನೆ ಬಗ್ಗೆ ಬಿಜೆಪಿ ಶಾಸಕರು ಟೀಕಿಸಿದ್ದರ ಹಿನ್ನೆಲೆಯಲ್ಲಿ ಸಿಡಿದೆದ್ದ ಪ್ರಿಯಾಂಕ್ ಖರ್ಗೆ, ತಾಕತ್ತಿದ್ದರೇ ಸಿದ್ದರಾಮಯ್ಯ ಘೋಷಿಸಿದ್ದ ಎಲ್ಲಾ ಯೋಜನೆಗಳನ್ನು ವಾಪಸ್ ಪಡೆಯಿರಿ ಎಂದು ಸವಾಲು ಹಾಕಿದರು, ಒಂದು ವೇಳೆ ಯೋಜನೆಗಳು ಕೆಟ್ಟದ್ದಾಗಿದ್ದರೇ ಅವುಗಳನ್ನು ಏಕೆ ನಿಲ್ಲಿಸಬಾರದು ಎಂದು ಖರ್ಗೆ ಪ್ರಶ್ನಿಸಿದರು.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp