ಸಿಡಿ ಪ್ರಕರಣದ ಆರೋಪಿ ಆನಂದ್ ಜೊತೆಗೆ ಬಿಎಸ್ ವೈ ಆತ್ಮೀಯತೆಯ ಫೋಟೋ ರಿವೀಲ್! 

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣ ಆರೋಪಿ ಎನಿಸಿಕೊಂಡಿರುವ ಅರುಣ್ 
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ಆತ್ಮಿಯತೆಯಿಂದ ಇರುವ ಫೋಟೋವೊಂದನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ.

Published: 18th March 2021 03:54 PM  |   Last Updated: 18th March 2021 06:17 PM   |  A+A-


Anand_And_Bsy1

ಆರೋಪಿ ಆನಂದ್ ಜೊತೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

Posted By : Nagaraja AB
Source : Online Desk

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣ ಆರೋಪಿ ಎನಿಸಿಕೊಂಡಿರುವ ಅರುಣ್ 
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ಆತ್ಮಿಯತೆಯಿಂದ ಇರುವ ಫೋಟೋವೊಂದನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ.

ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಈ ಫೋಟೋ ಬಿಡುಗಡೆ ಮಾಡಲಾಗಿದ್ದು, ಇವರೇನಾ ಆ ಮಹಾನಾಯಕ ಎಂದು ಪ್ರಶ್ನಿಸಲಾಗಿದೆ. 

ಅರುಣ್ ಮೊಬೈಲ್ ನಲ್ಲಿ ಹಲವು ಅಶ್ಲೀಲ ಚಿತ್ರಗಳಿದ್ದವು ಎಂದು ವರದಿಗಳು ಹೇಳುತ್ತಿವೆ. ತಮಗಾಗದವರ ವಿರುದ್ಧ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದೆ. ಇನ್ನೂ 23 ಸಿಡಿಗಳಿವೆ ಎಂದು ಯತ್ನಾಳ್ ಹೇಳಿದ್ದರು. ರಾಜ್ಯ ಬಿಜೆಪಿಯನ್ನು ಸ್ವಪಕ್ಷದವರೇ ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದು ಹೇಳಿದ್ದರು. ಇವೆಲ್ಲಕ್ಕೂ ಸಿಡಿ ಆರೋಪಿಯೊಂದಿಗೆ ಈ ಚಿತ್ರ ಪುರಾವೆಯಾಗಬಲ್ಲದೇ?ಎಂದು ಪ್ರಶ್ನಿಸಲಾಗಿದೆ. 

 

ಈ ಮಧ್ಯೆ ಬೆಂಗಳೂರಿನ ಹೂವಿನಾಯಕನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ, ರಾಜೀನಾಮೆ ತನಿಖೆ ಎದುರಿಸುತ್ತೀರಾ? ಅಥವಾ ಕಳಂಕಿತ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಅಪವಾದ ತರುತ್ತೀರಾ? ಹಿಂದಿನ ಬಾರಿಯ ನಂಬರ್ 10462, ಈ ಬಾರಿ ಯಾವ ನಂಬರ್ ಸಿಗಬಹುದು ಎಂದು ಪ್ರಶ್ನಿಸಿದೆ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp