ಅಲ್ಪಸಂಖ್ಯಾತರ ಮೇಲೆ ಸಿದ್ದರಾಮಯ್ಯ ವಕ್ರದೃಷ್ಟಿ: ಬಿಜೆಪಿ
ಕಾಂಗ್ರೆಸ್ ನಲ್ಲಿ ವಲಸೆ ನಾಯಕ ಹಾಗೂ ಮಹಾನಾಯಕರ ನಡುವಿನ ಶೀತಲ ಸಮರ ಮುಂದುವರೆದಿದೆ ಎಂದಿರುವ ಬಿಜೆಪಿ, ಅಲ್ಪಸಂಖ್ಯಾತರ ಮೇಲೆ ಸಿದ್ದರಾಮಯ್ಯ ವಕ್ರದೃಷ್ಟಿ ಬಿದ್ದಿರುವುದಾಗಿ ಆರೋಪಿಸಿದೆ.
Published: 20th March 2021 02:21 PM | Last Updated: 20th March 2021 02:43 PM | A+A A-

ಸಿದ್ದರಾಮಯ್ಯ, ತನ್ವೀರ್ ಸೇಠ್
ಬೆಂಗಳೂರು: ಕಾಂಗ್ರೆಸ್ ನಲ್ಲಿ ವಲಸೆ ನಾಯಕ ಹಾಗೂ ಮಹಾನಾಯಕರ ನಡುವಿನ ಶೀತಲ ಸಮರ ಮುಂದುವರೆದಿದೆ ಎಂದಿರುವ ಬಿಜೆಪಿ, ಅಲ್ಪಸಂಖ್ಯಾತರ ಮೇಲೆ ಸಿದ್ದರಾಮಯ್ಯ ವಕ್ರದೃಷ್ಟಿ ಬಿದ್ದಿರುವುದಾಗಿ ಆರೋಪಿಸಿದೆ.
ಮೈಸೂರು ಮೇಯರ್ ಚುನಾವಣೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ನಡುವಿನ ಯುದ್ಧ ಆಗಿತ್ತು.
ಅಲ್ಪಸಂಖ್ಯಾತರ ಮೇಲೆ ಸಿದ್ದರಾಮಯ್ಯ ವಕ್ರದೃಷ್ಟಿ ಬಿದ್ದು, ತನ್ವಿರ್ ಸೇಠ್ ಬೆಂಬಲಿಗರನ್ನು ಅಮಾನತುಗೊಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ವಲಸೆ ನಾಯಕ ಹಾಗೂ ಮಹಾನಾಯಕರ ನಡುವಿನ ಶೀತಲ ಸಮರ ಮುಂದುವರೆದಿದೆ.
— BJP Karnataka (@BJP4Karnataka) March 20, 2021
ಮೈಸೂರು ಮೇಯರ್ ಚುನಾವಣೆ ಕೇವಲ ಚುನಾವಣೆ @DKShivakumar & @siddaramaiah ನಡುವಿನ ಯುದ್ಧ ಎಂದು ನಾವು ಆರಂಭದಲ್ಲೇ ನುಡಿದಿದ್ದೆವು.
ಅಲ್ಪಸಂಖ್ಯಾತರ ಮೇಲೆ ಸಿದ್ದರಾಮಯ್ಯ ವಕ್ರದೃಷ್ಟಿ ಬಿದ್ದಿದ್ದು ತನ್ವಿರ್ ಬೆಂಬಲಿಗರನ್ನು ಅಮಾನತುಗೊಳಿಸಿದ್ದಾರೆ.#DKSvsSiddu pic.twitter.com/NVYN9GmtA4
ಮೈಸೂರು ಮೇಯರ್ ಸ್ಥಾನ ಬಿಟ್ಟ ಕೊಟ್ಟ ನಂತರ ತನ್ವೀರ್ ಸೇಠ್ ಹಾಗೂ ಸಿದ್ದರಾಮಯ್ಯ ನಡುವಣ ಶೀತಲ ಸಮರವೇರ್ಪಟ್ಟಿತ್ತು. ಇದೀಗ ಸಿದ್ದು ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ತನ್ವೀರ್ ಸೇಠ್ ಆಪ್ತರಾದ ಮೂವರನ್ನು ಅಮಾನತು ಮಾಡಲಾಗಿದೆ.
ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಮೈಸೂರು ನಗರ ಡಿಸಿಸಿ ಉಪಾಧ್ಯಕ್ಷ ಅನ್ವರ್ ಪಾಷಾ ಮತ್ತು ಕೆಪಿಸಿಸಿ ಸದಸ್ಯ ಪಿ. ರಾಜು ಅವರನ್ನು ಅಮಾನತು ಮಾಡಲಾಗಿದೆ. ಇದು ತನ್ವೀರ್ ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ನ ಎಲ್ಲಾ 9 ವಾರ್ಡ್ ಅಧ್ಯಕ್ಷರು ಮತ್ತು ಬೂತ್ ಅಧ್ಯಕ್ಷರುಗಳು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.