'ಮೇಟಿ- ಮನು ಸಿಂಘ್ವಿಗೆ ಎಷ್ಟು ಬಟ್ಟೆ ಕೊಟ್ಟಿದ್ದೀರಾ? ಸಿದ್ದರಾಮಯ್ಯ ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಕಾಣಲಿ': ಶ್ರೀರಾಮುಲು ಟಾಂಗ್

ಮಾಜಿ ಸಿಎಂ ಸಿದ್ದರಾಮಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ 2 ಜೊತೆ ಬಟ್ಟೆ ಕೊಡುತ್ತೇನೆ ಎಂದು ನೀಡಿದ್ದ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದ್ದಾರೆ.

Published: 22nd March 2021 08:55 AM  |   Last Updated: 22nd March 2021 12:44 PM   |  A+A-


siddaramaiah

ಸಿದ್ದರಾಮಯ್ಯ

Posted By : Shilpa D
Source : Online Desk

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ 2 ಜೊತೆ ಬಟ್ಟೆ ಕೊಡುತ್ತೇನೆ ಎಂದು ನೀಡಿದ್ದ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ನಮ್ಮ ಪಕ್ಷ ಬಿಡಿ, 90 ಜೊತೆ ಬಟ್ಟೆಗಳಲ್ಲಿ ನಿಮ್ಮ ಪಕ್ಷದ ಹಿರಿಯ ತಲೆಗಳಾದ ಮೇಟಿಗೆ ಮತ್ತು ಅಭಿಷೇಕ್ ಮನು ಸಿಂಘ್ವಿಗೆ ಎಷ್ಟು ಕೊಟ್ಟಿದ್ದೀರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ? ಎಂದು ಪ್ರಶ್ನಿಸಿದ್ದಾರೆ. 

ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿ ಹೋದ ನಾಯಕನಿಗೆ ಜನತೆ, ಸ್ವಂತ ಪಕ್ಷವೇ ಕೈ ಹಿಡಿಯಲಿಲ್ಲ. ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಕಾಣಲೆಂದು ಹಾರೈಸುತ್ತೇನೆ ಎಂದು ಟೀಕಿಸಿದ್ದಾರೆ. 

ಮೊನ್ನೆ ಸದನದಲ್ಲಿ ಅಂಗಿ ಬಿಚ್ಚಿದವರಿಗೂ ಒಂದೆರಡು ಅಂಗಿ ಕೊಟ್ಟುಬಿಡಿ ಸಿದ್ದರಾಮಯ್ಯನವರೇ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.  ಹಾಗೆಯೇ ಕಳೆದ ಬಾರಿ ಸ್ವಕ್ಷೇತ್ರದಲ್ಲಿ ಸೋತ ಹಾಗೆ ಮುಂದಿನ ಬಾರಿ ಬಾದಾಮಿಯಲ್ಲೂ ಸೋತು ಮತ್ತೊಂದು ಜಾಗಕ್ಕೆ ವಲಸೆ ಹೋಗಲು ಬಟ್ಟೆಗಳು ಬೇಕಾದೀತು ಜೋಪಾನ ಮಾಡಿಟ್ಟುಕೊಳ್ಳಿ. ವಲಸೆ ಹೋಗಿ ಸೋತರೆ 90 ಬಟ್ಟೆ ಸುತ್ತಿಕೊಂಡರೂ ಹೋದ ಮಾನ ವಾಪಸ್ ಬರಲ್ಲ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp