ನಾವು ಕಟ್ಟಿದ್ದ ಬಲಿಷ್ಠ ಭಾರತ ಸರ್ವ ನಾಶವಾಗುವುದನ್ನು ಕಣ್ಣಾರೆ ನೋಡುವ ಸ್ಥಿತಿ ಎದುರಾಗಿದೆ: ಎಸ್.ಆರ್. ಪಾಟೀಲ್ 

ನಾವು ಬಲಿಷ್ಠ ಭಾರತ ನಿರ್ಮಿಸಿದ್ದೆವು, ಇಂದು ನಮ್ಮ ಕಣ್ಣೆದುರೇ ಸರ್ವನಾಶ ಆಗುವುದನ್ನು ನೋಡಿದಾಗ ಬೇಸರ ಆಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ವಿಧಾನ ಪರಿಷತ್ ನಲ್ಲಿ ಬೇಸರ ವ್ಯಕ್ತಪಡಿಸಿದರು.

Published: 23rd March 2021 09:53 AM  |   Last Updated: 23rd March 2021 12:22 PM   |  A+A-


SR patil

ಎಸ್ ಆರ್ ಪಾಟೀಲ್

Posted By : Shilpa D
Source : UNI

ಬೆಂಗಳೂರು: ನಾವು ಬಲಿಷ್ಠ ಭಾರತ ನಿರ್ಮಿಸಿದ್ದೆವು, ಇಂದು ನಮ್ಮ ಕಣ್ಣೆದುರೇ ಸರ್ವನಾಶ ಆಗುವುದನ್ನು ನೋಡಿದಾಗ ಬೇಸರ ಆಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ವಿಧಾನ ಪರಿಷತ್ ನಲ್ಲಿ ಬೇಸರ ವ್ಯಕ್ತಪಡಿಸಿದರು.

ಇಂಧನ ಬೆಲೆ ಏರಿಕೆಯಿಂದ ದಿನನಿತ್ಯದ ಜೀವನ ಸಂಕಷ್ಟಕ್ಕೆ ಈಡಾಗಿರುವ ಕುರಿತು ನಿಯಮ 68 ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿ, ಬೆಲೆ ಏರಿಕೆ ವಿಪರೀತವಾಗಿ ಆಗಿದೆ. 171.24 ಮಿಲಿಯನ್ ಟನ್ ಕಚ್ಚಾ ತೈಲ ಯುಪಿಎ ಸರ್ಕಾರ ಆಮದು ಮಾಡಿಕೊಂಡಿತ್ತು. ಆದರೆ ಅದು ಹೆಚ್ಚಾಗಿದೆ ಎಂದರೆ ಕೇಂದ್ರ ಎನ್ ಡಿಎ ಸರ್ಕಾರ ಕಡಿಮೆ ಮಾಡಬಹುದಿತ್ತು. ಆದರೆ‌ 2019-20 ರಲ್ಲಿ ಮಾಡಿಕೊಂಡ ಆಮದು ಹಿಂದಿಗಿಂತ ಹೆಚ್ಚಾಗಿತ್ತು. 

ಕಚ್ಚಾ ಇಂಧನ ಉತ್ಪಾದನೆ ಸಹ ಕಡಿಮೆ ಆಗಿದೆ. ಉತ್ಪಾದನೆ ಕಡಿಮೆ ಆಗಿದೆ, ಆಮದು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊಚ್ಚಿಯಲ್ಲಿ ಮಾತನಾಡಿ, ಇಂಧನ ಉತ್ಪಾದನೆ ಹೆಚ್ಚಿಸುತ್ತೇವೆ ಎಂದಿದ್ದರು. ಆದರೆ ಆಗಿಲ್ಲ. ಹಿಂದುಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಂಪನಿಯನ್ನು ಹರಾಜಿಗಿಡಲು ಸರ್ಕಾರ ಮುಂದಾಗಿದ್ದು ಅಂಬಾನಿ ಕುಟುಂಬ, ದುಬೈನ ಕೆಲ ಶ್ರೀಮಂತ ಉದ್ಯಮಿಗಳು ಮುಂದಾಗಿದ್ದಾರೆ. 

ಇಂತಹ ಇಂಧನ ಕಂಪನಿಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಮಾರಾಟಕ್ಕೆ ಮುಂದಾದರೆ ಹೇಗೆ? ಬಂದರುಗಳಲ್ಲಿ 8 ಬದರನ್ನು ಅದಾನಿಗೆ ಮಾರಾಟ ಮಾಡಲಾಗಿದೆ. ಉಳಿದವು ಮಾರಾಟವಾಗುತ್ತಿವೆ ಎಂದು ಆಪಾದಿಸಿದರು.

ಕೃಷ್ಣಾ, ಗೋದಾವರಿ ನದಿ ತೀರದಲ್ಲಿ ದೊಡ್ಡ ಮಟ್ಟದ ತೈಲ ನಿಕ್ಷೇಪಗಳಿವೆ. ಅದರ ಮೇಲೆ ಅಂಬಾನಿ ಕಣ್ಣು ಬಿದ್ದಿದೆ. ಖಾಸಗಿ ಸಹಭಾಗಿತ್ವದಲ್ಲಿರುವ ಎಲ್ಲಾ ಸಂಸ್ಥೆ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿವೆ. ರೈತರ ಜಮೀನಿನ ಮೇಲೆ ಉಳ್ಳವರ ಕಣ್ಣು ಬೀಳುತ್ತಿದೆ ಎಂದರು.

ಅವಶ್ಯ ವಸ್ತುಗಳ ಸಂಗ್ರಹ ನಿಯಂತ್ರಣಕ್ಕಿದ್ದ ಕಾನೂನು ತಿದ್ದುಪಡಿ ಮಾಡಲಾಗಿದೆ. ಇದರಿಂದ ಸಹಜವಾಗಿ ದೈನಂದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಮಾಧ್ಯಮಗಳಲ್ಲಿ ಸಹ ಬೆಲೆ ಏರಿಕೆಯ ಆತಂಕದ ವಿವರ ಸಿಗುತ್ತದೆ. ಇಂಧನ ಬೆಲೆ ಹೆಚ್ಚಳವನ್ನು ಭರಿಸಲಾಗದೇ 70 ಸಾವಿರ ವಾಹನಗಳು ಓಡಿಸಲಾಗದೇ ನಿಲ್ಲಲಿವೆ, ತೆರಿಗೆ ಇಳಿಕೆ ಮಾಡಿದರೆ ಅನುಕೂಲ ವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಆಟೋ, ಕ್ಯಾಬ್ ಗಳು ಲಕ್ಷಾಂತರ ಸಂಖ್ಯೆಯಲ್ಲಿ ನಿಂತಲ್ಲೇ ನಿಲ್ಲಲಿವೆ. ಜನ ಈಗ ಸುಮ್ಮನಿದ್ದಾರೆ. ಯಾವಾಗ ತಮ್ಮ ಶಕ್ತಿ ತೋರಿಸುವ ಅವಕಾಶ ಸಿಗುವುದೋ ಅಂದು ಬಳಸಿಕೊಳ್ಳುತ್ತಾರೆ. ಏನಾದರೂ ದನಿ ಎತ್ತಿದರೆ ರಾಷ್ಟ್ರದ್ರೋಹದ ಆರೋಪ ಹೊರಿಸುತ್ತಾರೆ ಎಂಬ ಅಂಜಿಕೆ ಪಡುತ್ತಿದ್ದಾರೆ.  ಈ ಆಡಳಿತ ದೇಶಕ್ಕೆ ಮಾರಕವಾದ ಬೆಳವಣಿಗೆ, ದೇಶವನ್ನು ಸರ್ವನಾಶಕ್ಕೆ ಒಯ್ಯಬೇಡಿ ಎಂದು ಸಲಹೆ ನೀಡಿದರು.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp