2023ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ: ಸಿಎಂ ಬಿಎಸ್‌ವೈ

ಮೈಸೂರು ಪ್ರದೇಶದಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ಪ್ರತಿಷ್ಠಿತ ವಿಷಯವಾಗಲಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂಬರುವ 2023 ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

Published: 23rd March 2021 08:28 AM  |   Last Updated: 23rd March 2021 12:19 PM   |  A+A-


ಬಿ.ಎಸ್.ಯಡಿಯೂರಪ್ಪ

Posted By : Raghavendra Adiga
Source : The New Indian Express

ಬೆಂಗಳೂರು: ಮೈಸೂರು ಪ್ರದೇಶದಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ಪ್ರತಿಷ್ಠಿತ ವಿಷಯವಾಗಲಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವಾದರೂ ಮುಂಬರುವ 2023 ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತಿಂದ್ರ ಶಾಸಕರಾಗಿದ್ದಾರೆ.

ವಿಜಯೇಂದ್ರ ಅವರು ವರುಣರಿಂದ ಸ್ಪರ್ಧಿಸುವುದು ಖಚಿತವಾದ್ದರಿಂದ ಮೈಸೂರಿನಲ್ಲಿ ಮನೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಆದರೆ ಬಿಜೆಪಿ ಉಪಾಧ್ಯಕ್ಷ ಈಗಾಗಲೇ ಈ ಪ್ರದೇಶದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅವರು ಮಧ್ಯಪ್ರವೇಶಿಸಿ, ತಾಂಡ್ಯ ಗ್ರಾಮದಲ್ಲಿ ಮಠದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿಗೆ ಸಹಕರಿಸಿದ್ದರು ಅಲ್ಲದೆ ಎಸ್ ಕುಮಾರ್ ಕಂಪನಿಯ ಉದ್ಯೋಗಿಗಳ ಮುಷ್ಕರವನ್ನು ಪರಿಹರಿಸಲು ಸಹಾಯ ಮಾಡಿದರು.

ವಿಜಯೇಂದ್ರ, ಜೆಎಸ್ಎಸ್ ಶಿಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸಹಾಯದಿಂದ ವರುಣಾ ಕ್ಷೇತ್ರದ ಇಮ್ಮಾವುಗೆ ಫಿಲ್ಮ್ ಸಿಟಿ ಪ್ರಾಜೆಕ್ಟ್ ತರುವಲ್ಲಿ ಯಶಸ್ವಿಯಾಗಿದ್ದು ಇದರಿಂದ ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದೆ. ವರುಣಾವನ್ನು ನೂತನ ತಾಲೂಕು ಕೇಂದ್ರವಾಗಿ ಮಾಡಲು  ಅವರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಮತ್ತು ದೇವರಾಜ ಅರಸ್  ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್ ರಘು ಅವರಿಗೆ ನೆರವಾಗುತ್ತಿದ್ದಾರೆ.

ಅವರು ನಿಯಮಿತವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಅವರು ದಲಿತರ ವಸತಿಗಳಿಗೆ ಭೇಟಿ ನೀಡುವುದು ಸ್ಥಳೀಯ ಯುವಕರೊಂದಿಗೆ ಸಂವಹನ ನಡೆಸುವುದು ಮತ್ತು ಅವರ ಮೆಚ್ಚುಗೆ ಪಡೆಯುವುದು ಒಂದು ಮಹತ್ವದ ಸಂಗತಿಯಾಗಿದೆ. ಈ ಕ್ರಮವು ಸ್ಥಳೀಯ ಪಕ್ಷದ ಮುಖಂಡರಲ್ಲು ಉತ್ಸಾಹ ಮೂಡಿಸಿದೆ. ಏತನ್ಮಧ್ಯೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ ಮಾತನಾಡಿ, ವರುಣಾದಿಂದ ವಿಜಯೇಂದ್ರ ಅವರ ಉಮೇದುವಾರಿಕೆಯು ಕ್ಷೇತ್ರದಲ್ಲಿ ಪಕ್ಷದ ನೆಲೆಯನ್ನು ಬಲಪಡಿಸುತ್ತದೆ ಮತ್ತು ನೆರೆಯ ಕ್ಷೇತ್ರಗಳಲ್ಲಿ ಕೂಡ ಇದರ ಪ್ರಭಾವ ಇರಲಿದೆ ಎಂದರು.

ಕೆ.ಆರ್. ಪೇಟೆ, ಶಿರಾ ಕ್ಷೇತ್ರಗಳಲ್ಲಿ ಪಕ್ಷದ ವಿಜಯಕ್ಕೆ ವಿಜಯೇಂದ್ರ ಪ್ರಮುಖ ಪಾತ್ರ ವಹಿಸಿದ್ದರು ಎಂದು ನೆನೆದ ರಾಜೀವ ಮೈಸೂರು ಪ್ರದೇಶವನ್ನು ಕಾಂಗ್ರೆಸ್ ಭದ್ರಕೋಟೆಯಿಂದ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತಿಸಲು ಸಹ ಇದು ಸಹಾಯ ಮಾಡುತ್ತದೆ ಎಂದು ಹೇಳಿದರು. ವಿಜಯೇಂದ್ರ ಅವರ ಸಾಂಸ್ಥಿಕ ಕೌಶಲ್ಯಗಳು ಬದಲಾವಣೆ ತರಲಿದೆ.ಪಕ್ಷದ ಕಾರ್ಯಕರ್ತರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದು ಸ್ಥಳೀಯ ನಾಯಕರಾದ ಗೋಕುಲ್ ಗೋವರ್ಧನ್ ಮತ್ತು ಮಾದೇಶ್ ಹೇಳಿದ್ದಾರೆ.


Stay up to date on all the latest ರಾಜಕೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp