ಬೆಳಗಾವಿ ಲೋಕಸಭೆ ಚುನಾವಣೆ: ದಿವಂಗತ ಸುರೇಶ್ ಅಂಗಡಿ ರೈಲು ಯೋಜನೆಗಳೇ ಮಂಗಳಾ ಅಂಗಡಿಗೆ ಶಕ್ತಿ?

ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರು ಕಣಕ್ಕಿಳಿದಿದ್ದಾರೆ. 

Published: 27th March 2021 08:42 AM  |   Last Updated: 27th March 2021 12:23 PM   |  A+A-


mangala Angadi

ಮಂಗಳಾ ಅಂಗಡಿ

Posted By : Shilpa D
Source : The New Indian Express

ಬೆಳಗಾವಿ: ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರು ಕಣಕ್ಕಿಳಿದಿದ್ದಾರೆ. 

ಅನುಕಂಪದ ಮತಗಳಿಂದ ಗೆಲ್ಲಬಹುದು ಎಂಬ ಪ್ಲಾನ್ ಬಿಜೆಪಿಯದ್ದಾಗಿದೆ,. ಇನ್ನೂ ಕಾಂಗ್ರೆಸ್ ನಿಂದ ಮತ್ತೊಬ್ಬ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಕಣಕ್ಕಿಳಿದ್ದಾರೆ.  ಸುರೇಶ್ ಅಂಗಡಿ ರೈಲ್ವೆ ರಾಜ್ಯ ಸಚಿವರಾಗಿದ್ದ ವೇಳೆ ಮಾಡಿದ ಕೆಲ ರೈಲು ಯೋಜನೆಗಳು ಮಂಗಳಾ ಅವರ ಗೆಲುವಿಗೆ ಸಹಾಯ ಮಾಡಬಹುದು ಎಂದು ಯೋಜಿಸಲಾಗುತ್ತಿದೆ.

ಕಾಂಗ್ರೆಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಸುರೇಶ್ ಅಂಗಡಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಪಾಲಾಯಿತು. ಮಾಜಿ ಪ್ರಧಾನಿ ದಿವಂಗತ  ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯತೆಯಿಂದಾಗಿ 2004 ರಲ್ಲಿ ಸುರೇಶ್ ಅಂಗಡಿ ಗೆಲುವು ಸಾಧಿಸಿದ್ದರು.  ಅದಾದ ನಂತರ ನಾಲ್ಕು ಚುನಾವಣೆಯಲ್ಲಿ ವಿಜಯದ ಪತಾಕೆ ಹಾರಿಸಿದ್ದರು. 

ಬೆಳಗಾವಿ ಕ್ಷೇತ್ರದ ಟಿಕೆಟ್ ಪಡೆಯಲು ಎಂಎಲ್ ಸಿ ಮಹಾಂತೇಶ್ ಕವಟಗಿ ಮಠ್ ಲಾಬಿ ನಡೆಸಿದ್ದರು, ಆದರೆ ಸದ್ಯ ಮಂಗಳಾ ಅಂಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ,  ಸುರೇಶ್ ಅಂಗಡಿ ತಾವು ಸಾಯುವ ಮುನ್ನ  ಎರಡು ವರ್ಷದ ಸಂಸದರ ಅವಧಿ ಮುಗಿಸಿದ್ದರು.  ಉಳಿದ ಅವಧಿಯನ್ನು ಅವರ ಪತ್ನಿ ಮಂಗಳಾ ಅವರು ಪೂರೈಸಲಿ ಎಂದು ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ಮಹಾಂತೇಶ್ ಹೇಳಿದ್ದಾರೆ.

ಈ ಭಾಗದಲ್ಲಿ ಬಿಜೆಪಿಯ ಪ್ರಬಲ ಕಾರ್ಯಕರ್ತರಿದ್ದಾರೆ, ಬಿಜೆಪಿಯ ಎಲ್ಲಾ ತಳಮಟ್ಟದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ಬೈಲಹೊಂಗಲ, ಸೌಂದತ್ತಿ, ರಾಮದುರ್ಗ ಮತ್ತು ಗೋಕಾಕ್ ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಿಂಗಾಯತ ಸಮುದಾಯದವರಿದ್ದು ಬಿಜೆಪಿ ಗೆಲುವಿಗೆ ಸಹಾಯವಾಗಲಿದೆ ಎಂದು  ಹೇಳಿದ್ದಾರೆ. 

ರಮೇಶ್ ಕತ್ತಿ ಅಥವಾ ಮಹಾಂತೇಶ್ ಕವಟಗಿ ಮಠ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ, ಮಂಗಳಾ ಅಂಗಡಿ ಅವರ ಹೆಸರು ಘೋಷಿಸುತ್ತಿದ್ದಂತೆ ಪಕ್ಷದ ಮುಖಂಡರಿಗೆ ಆಘಾತವಾಗಿತ್ತು. 


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp