ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಒಪ್ಪಿ, ಖಂಡಿಸಿದ್ದಕ್ಕೆ ಮಾಧುಸ್ವಾಮಿಗೆ ಅಭಿನಂದನೆಗಳು: ಕಾಂಗ್ರೆಸ್ 

ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಬಹಿರಂಗವಾಗಿ ಒಪ್ಪಿ, ಖಂಡಿಸಿದ್ದಕ್ಕೆ ಮಾಧುಸ್ವಾಮಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Published: 28th March 2021 12:06 PM  |   Last Updated: 29th March 2021 12:45 PM   |  A+A-


Madhuswamy1

ಮಾಧುಸ್ವಾಮಿ

Posted By : Nagaraja AB
Source : Online Desk

ಬೆಂಗಳೂರು: ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಬಹಿರಂಗವಾಗಿ ಒಪ್ಪಿ, ಖಂಡಿಸಿದ್ದಕ್ಕೆ ಸಚಿವ ಮಾಧುಸ್ವಾಮಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸರ್ಕಾರದಲ್ಲಿ  ಸೌರ್ವಭಾಮ, ಸರ್ವಾಧಿಕಾರಿ ಧೋರಣೆ ಆರಂಭವಾಗಿದ್ದು, ಒಕ್ಕೂಟ ವ್ಯವಸ್ಥೆಗೆ ದೊಡ್ಡ ಆತಂಕ ಎಂದು ಮಾಧುಸ್ವಾಮಿ ಹೇಳಿರುವ ಹೇಳಿಕೆಯ ವಿಡಿಯೋ ತುಣುಕನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದೆ.

 

ಕೇಂದ್ರ ಸರ್ಕಾರ ರಾಜ್ಯಗಳ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ರಾಜ್ಯಗಳ ವಿಷಯವಾದ ಕೃಷಿಗೆ ಸಂಬಂಧಿತ ಕಾಯ್ದೆಗಳನ್ನು ಹೇರಿ ರೈತರಿಗೆ ಮರಣ ಶಾಸನ ಬರೆಯುತ್ತಿದೆ  'ಹಿಂದಿ'ತ್ವ ಹೇರಿಕೆ, ಜಿಎಸ್ ಟಿ  ತೆರಿಗೆ ಕಬಳಿಕೆಗಳು ರಾಜ್ಯಕ್ಕೆ ಮಾರಕ ಎಂದು ಕಾಂಗ್ರೆಸ್ ಟೀಕಿಸಿದೆ. 

ಭಾರತ ಭಾಷೆ, ಸಂಸ್ಕೃತಿ, ಆಹಾರ ಹೀಗೆ ಬಹುತ್ವದ ಸಂಕೀರ್ಣತೆಗಳಿಂದ ಕೂಡಿದ ಒಕ್ಕೂಟ ವ್ಯವಸ್ಥೆ. ಇದನ್ನು ಮರೆತು ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ರಾಷ್ಟ್ರವನ್ನಾಗಿಸಲು ಹೊರಟಿದ್ದಾರೆ, ಒನ್ ನೇಷನ್ ಒನ್ ಎಲೆಕ್ಷನ್ ಅದಕ್ಕೊಂದು ತಾಜಾ ಉದಾಹರಣೆ. ಏಕ ಭಾಷೆ, ಏಕ ಸಂಸ್ಕೃತಿ ಹೇರಿ ದೇಶವನ್ನು ಮುಷ್ಠಿಯೊಳಗೆ ಇಟ್ಟುಕೊಳ್ಳುವ ಆರ್ ಎಸ್ ಎಸ್ ನ ಹುನ್ನಾರ ನಡೆಯದು ಎಂದು ಕಾಂಗ್ರೆಸ್ ಹೇಳಿದೆ. 

 

Stay up to date on all the latest ರಾಜಕೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp