ಸಂತ್ರಸ್ತೆ ನ್ಯಾಯಾಧೀಶರೆದುರು ಹೇಳಿಕೆ ಕೊಟ್ರು ಇನ್ನೂ ಕೂಡಾ ಆರೋಪಿಯ ಬಂಧನವಾಗಿಲ್ಲ ಏಕೆ?: ಕಾಂಗ್ರೆಸ್
ಸಂತ್ರಸ್ತೆ ಬಂದು ನ್ಯಾಯಾಧೀಶರೆದರು ಹೇಳಿಕೆ ಕೊಟ್ಟಾಯಿತು. ಇಷ್ಟಾದರೂ ಇನ್ನೂ ಕೂಡಾ ಆರೋಪಿಯ ಬಂಧನವಾಗಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Published: 30th March 2021 07:24 PM | Last Updated: 30th March 2021 07:41 PM | A+A A-

ಸೆಕ್ಸ್ ಸಿಡಿ ಲೇಡಿ, ರಮೇಶ್ ಜಾರಕಿಹೊಳಿ
ಬೆಂಗಳೂರು: ಸಂತ್ರಸ್ತೆ ಬಂದು ನ್ಯಾಯಾಧೀಶರೆದರು ಹೇಳಿಕೆ ಕೊಟ್ಟಾಯಿತು. ಇಷ್ಟಾದರೂ ಇನ್ನೂ ಕೂಡಾ ಆರೋಪಿಯ ಬಂಧನವಾಗಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಂತ್ರಸ್ತೆ ಬಂದು ನ್ಯಾಯಾಧೀಶರೆದುರು ಹೇಳಿಕೆಯನ್ನೂ ಕೊಟ್ಟಾಯಿತು.
— Karnataka Congress (@INCKarnataka) March 30, 2021
ಇಷ್ಟಾದರೂ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಬೀದಿ ಗೂಳಿಯಂತೆ ತಿರುಗಿಕೊಂಡಿದ್ದಾರೆ,
ಇನ್ನೂ ಕೂಡ ಆರೋಪಿಯ ಬಂಧನವಾಗಲಿಲ್ಲ ಏಕೆ #BuildupBommai ಅವರೇ?#ArrestRapistRamesh
ಯುವತಿ ವಿಡಿಯೋ ಹೇಳಿಕೆ ನೀಡಿದಾಗಲೂ ಕೇಸ್ ಹಾಕಲಿಲ್ಲ. ಸಂತ್ರಸ್ತೆ ದೂರು ಸಲ್ಲಿಸಿ, ಎಫ್ ಐಆರ್ ದಾಖಲಾದರೂ ಬಂಧಿಸಲಿಲ್ಲ. ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದರೂ ಬಂಧನವಿಲ್ಲ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ, ಇಷ್ಟಾದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ? ಎಂದು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಕೇಳಲಾಗಿದೆ.
ಯುವತಿ ವಿಡಿಯೋ ಹೇಳಿಕೆ ನೀಡಿದಾಗಲೂ ಕೇಸ್ ಹಾಕಲಿಲ್ಲ
— Karnataka Congress (@INCKarnataka) March 30, 2021
ಸಂತ್ರಸ್ತೆ ದೂರು ಸಲ್ಲಿಸಿ, FIR ದಾಖಲಾದರೂ ಬಂಧಿಸಲಿಲ್ಲ
ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದರೂ ಬಂಧನವಿಲ್ಲ@BSBommai ಅವರೇ ಇಷ್ಟಾದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ?
ಜನತೆಗೆ ಕಾನೂನಿನ ಮೇಲಿದ್ದ ನಂಬಿಕೆಯನ್ನೇಕೆ ನಾಶಗೊಳಿಸುತ್ತಿದ್ದೀರಿ?
ಜನತೆಗೆ ಕಾನೂನಿನ ಮೇಲಿದ್ದ ನಂಬಿಕೆನ್ನೇಕೆ ನಾಶಗೊಳಿಸುತ್ತಿದ್ದೀರಿ? ಅತ್ಯಾಚಾರ ಆರೋಪಿಯ ಬಂಧನ ಯಾವಾಗ? ಎಂಬುದನ್ನು ಹೇಳಿ ಎಂದು ಗೃಹ ಸಚಿವರನ್ನು ಕಾಂಗ್ರೆಸ್ ಕೇಳಿದೆ.
ಇನ್ನೊಂದೆಡೆ ಯುವತಿ ಪರ ವಕೀಲ ಜಗದೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಮತ್ತು ಪೊಲೀಸರು ಈ ಕೂಡಲೇ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು. ಯುವತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ತಾವು ಸಂತ್ರಸ್ತೆಯನ್ನು ಎಸ್ಐಟಿಯ ವಶಕ್ಕೆ ನೀಡಿಲ್ಲ. ಕೇವಲ ಧ್ವನಿ ಪರೀಕ್ಷೆಗಾಗಿ ಕರೆತರಲಾಗಿದೆ. ಮತ್ತೆ ವಿಚಾರಣೆಗೆ ಕರೆದುಕೊಂಡು ಬರಲಾಗುವುದು ಎಂದು ಹೇಳಿದರು.
ಎಸ್ಐಟಿ ಅಧಿಕಾರಿಗಳು ಸೆಕ್ಷನ್ 161 ಪ್ರಕಾರ ಧ್ವನಿ ಪರೀಕ್ಷೆ ಮಾಡಬೇಕು ಎಂದು ತಿಳಿಸಿದಾಗ ನಾವೇ ಕಕ್ಷಿದಾರರನ್ನು ಕರೆ ತಂದಿದ್ದೇವೆ. ಪರೀಕ್ಷೆ ಬಳಿಕ ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ. ನಾವು ನುಡಿದಂತೆ ನ್ಯಾಯಾಲಯದ ಎದುರು ಯುವತಿಯನ್ನು ಹಾಜರುಪಡಿಸಿದ್ದೇವೆ ಎಂದು ವಕೀಲ ಜಗದೀಶ್ ತಿಳಿಸಿದರು.