ಬೆಳಗಾವಿ ಜನ ಬಿಜೆಪಿ ಪರವಾಗಿದ್ದಾರೆ, ಉಪ ಚುನಾವಣೆಯಲ್ಲಿ ನಾವು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ: ಸಿಎಂ ಯಡಿಯೂರಪ್ಪ

ಕೇಂದ್ರದ ದಿವಂಗತ ಮಾಜಿ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಸಂಸದ ಸ್ಥಾನಕ್ಕೆ ಉಪ ಚುನಾವಣೆಗೆ ಬಿಜೆಪಿಯಿಂದ ಅವರ ಪತ್ನಿ ಮಂಗಳಾ ಅಂಗಡಿ ಸ್ಪರ್ಧಿಸುತ್ತಿದ್ದು, ಈ ಬಾರಿ ಕೂಡ ಬಿಜೆಪಿ ಗೆಲುವು ಖಚಿತ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

Published: 31st March 2021 07:28 AM  |   Last Updated: 31st March 2021 12:34 PM   |  A+A-


Yediyurappa, Jagadish Shettar, Nalin Kateel and others accompany Mangala Angadi, BJP candidate for Belagavi bypoll, to file her nomination papers at DC office

ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿರುವ ಬಿಜೆಪಿ ನಾಯಕರು

Posted By : Sumana Upadhyaya
Source : The New Indian Express

ಬೆಳಗಾವಿ: ಕೇಂದ್ರದ ದಿವಂಗತ ಮಾಜಿ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಸಂಸದ ಸ್ಥಾನಕ್ಕೆ ಉಪ ಚುನಾವಣೆಗೆ ಬಿಜೆಪಿಯಿಂದ ಅವರ ಪತ್ನಿ ಮಂಗಳಾ ಅಂಗಡಿ ಸ್ಪರ್ಧಿಸುತ್ತಿದ್ದು, ಈ ಬಾರಿ ಕೂಡ ಬಿಜೆಪಿ ಗೆಲುವು ಖಚಿತ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಿನ್ನೆ ಮಂಗಳಾ ಅಂಗಡಿ ಅವರು ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಿದ್ದು ಬಿ ಎಸ್ ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರು ಹಾಜರಿದ್ದರು.

ಉಪ ಚುನಾವಣೆ ವೇಳೆ ಪ್ರಚಾರ ಮತ್ತು ಇತರ ಕೆಲಸಗಳಿಗೆ ಮಂಗಳಾ ಅಂಗಡಿಯವರಿಗೆ ನಾವು ಬಿಜೆಪಿ ನಾಯಕರಲ್ಲೆರೂ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಬೆಳಗಾವಿಯ ನೇಯ್ಗೆಗಾರರು, ಕುರುಬರು ಮತ್ತು ಮರಾಠ ಸಮಾಜದವರು ಅಂಗಡಿ ಕುಟುಂಬದ ಮೇಲೆ ಅಪಾರ ಗೌರವ ಇರಿಸಿಕೊಂಡಿದ್ದು, ಮಂಗಳಾ ಅಂಗಡಿಯವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ನಾಡಿದ್ದು ಏಪ್ರಿಲ್ 7ರಂದು ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. 


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp