ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿದ್ದದ್ದು ಬಹಳ ಸಂತಸ ತಂದಿದೆ: ಭೈರತಿ ಬಸವರಾಜ್

ಧಾರಾಪುರಂನಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಬಹಳ ಸಂತಸ ತಂದಿದೆ ಎಂದು ಸಚಿವ ಭೈರತಿ ಬಸವರಾಜ್ ಅವರು ಹೇಳಿದ್ದಾರೆ.

Published: 31st March 2021 08:23 AM  |   Last Updated: 31st March 2021 12:30 PM   |  A+A-


Karnataka Urban Development Minister Byrati Basavaraj is all smiles as hestands next to PM Modi during a rally in Dharapuram

ಮೋದಿ ಜೊತೆಗೆ ಸಚಿವ ಭೈರತಿ ಬಸವರಾಜ್

The New Indian Express

ಬೆಂಗಳೂರು: ಧಾರಾಪುರಂನಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಬಹಳ ಸಂತಸ ತಂದಿದೆ ಎಂದು ಸಚಿವ ಭೈರತಿ ಬಸವರಾಜ್ ಅವರು ಹೇಳಿದ್ದಾರೆ.

ಕೆಲ ವರ್ಷಗಳ ಕಾಲ ರಾಜ್ಯದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾಗಿ ಇದೀಗ ಶಾಸಕ ಹಾಗೂ ಸಚಿವರಾಗಿರುವ ಭೈರತಿ ಬಸವರಾಜ್ ಅವರ ಮೇಲೆ ತಮಿಳುನಾಡು ಧಾರಾಪುರಂ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ನೀಡಲಾಗಿದೆ.

ಇದರಂತೆ ನಿನ್ನೆಯಷ್ಟೇ ಧಾರಾಪುರಂನಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ರ್ಯಾಲಿ ನಡೆಸಿದ್ದು, ರ್ಯಾಲಿ ವೇಳೆ ಮೋದಿಯವರೊಂದಿಗೆ ಭೈರತಿ ಬಸವರಾಜ್ ಅವರು ವೇದಿಕೆ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಯವರೊಂದಿಗೆ ನಿಂತುಕೊಂಡಿದ್ದು ಬಹಳ ಸಂತಸ ತಂದಿದೆ. ಈಗಲೂ ಆ ಕ್ಷಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನನ್ನೊಂದಿಗಿದ್ದ ಬಿಜೆಪಿ ಹಿರಿಯ ನಾಯಕರಿಗೂ ಆ ಅವಕಾಶ ಸಿಕ್ಕಿಲ್ಲ. ಕೆಲ ವರ್ಷಗಳ ಹಿಂದಷ್ಟೇ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೆ. ಮೋದಿಯವರೊಂದಿಗೆ ವೇದಿಕೆಯಲ್ಲಿದ್ದ ಕ್ಷಣ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭೈರತಿ ಬಸರಾಜ್ ಅವರಿಗೆ ಧಾರಾಪುರಂ ಅಷ್ಟೇ ಅಲ್ಲದೆ, ಅಣ್ಣಾಮಲೈ ಅವರು ಸ್ಪರ್ಧಿಸುತ್ತಿರುವ ಅರಾವಕುರುಚಿ ಕ್ಷೇತ್ರ ಚುನಾವಣಾ ಜವಾಬ್ದಾರಿಯನ್ನೂ ನೀಡಲಾಗಿದೆ. ಒಂದು ವೇಳೆ ಈ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವಂತೆ ಮಾಡಿದ್ದೇ ಆದರೆ, ಕಮಲ ಪಾಳಯದಲ್ಲಿ ಭೈರತಿ ಬಸವರಾಜ್ ಅವರ ಸ್ಥಾನ ಮತ್ತಷ್ಟು ಮೇಲೇರಲಿದೆ ಎಂದು ಹೇಳಲಾಗುತ್ತಿದೆ.


Stay up to date on all the latest ರಾಜಕೀಯ news
Poll
Swami Prasad Maurya joins Samajwadi Party

ಉತ್ತರ ಪ್ರದೇಶದಲ್ಲಿ ಏಳು ಮಂದಿ ನಾಯಕರು ಪಕ್ಷ ತೊರೆದಿರುವುದು ಬಿಜೆಪಿಗೆ ಸೋಲಿನ ಮೊದಲ ಮುನ್ಸೂಚನೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp