ಪತಿ ಸುರೇಶ್ ಅಂಗಡಿ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತೇನೆ: ಬೆಳಗಾವಿ ನೂತನ ಸಂಸದೆ ಮಂಗಳಾ ಅಂಗಡಿ

ಸುರೇಶ್ ಅಂಗಡಿಯವರ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಮಂಗಳಾ ಅಂಗಡಿ ಹೇಳಿದ್ದಾರೆ.
ಮಂಗಳಾ ಅಂಗಡಿ
ಮಂಗಳಾ ಅಂಗಡಿ

ಬೆಳಗಾವಿ: ಸುರೇಶ್ ಅಂಗಡಿಯವರ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಮಂಗಳಾ ಅಂಗಡಿ ಹೇಳಿದ್ದಾರೆ.

ಇಂದು ಘೋಷಣೆಯಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶದಲ್ಲಿ 5,240 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಗಳಾ ಅಂಗಡಿ ಅವರು, 'ನನ್ನ ಪತಿ ಸುರೇಶ್ ಅಂಗಡಿ  ಅವರ ಯೋಜನೆಗಳನ್ನು ಮುಂದುವರೆಸುತ್ತೇನೆ. ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಅವರಂತೆಯೇ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ತಮ್ಮ ಮೇಲೆ ಭರವಸೆ ಇಟ್ಟ ಪ್ರಧಾನಿ ನರೇಂದ್ರ ಮೋದಿ ಸೇರಿ ಎಲ್ಲಾ ಬಿಜೆಪಿ ನಾಯಕರು, ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ತೀವ್ರ ಜಿದ್ದಾಜಿದಿನಿಂದ ಕೂಡಿದ್ದ ಫಲಿತಾಂಶದ ಕುರಿತು ಮಾತನಾಡಿದ ಮಂಗಳಾ ಅವರು, 'ಒಂದು ಮತದಿಂದ ಗೆದ್ದರೂ ಸಹ ಅದು ಗೆಲುವೇ ಆಗಿತ್ತು. ಕೊವಿಡ್-19 ಇರುವುದರಿಂದ ಮತದಾನ ಕಡಿಮೆಯಾಗಿದೆ. ಹೀಗಾಗಿ ಬಿಜೆಪಿಗೆ ಮತಗಳು ಕಡಿಮೆ ಬಂದಿದೆ. ಗೋಕಾಕ್ ನನಗೆ ತವರು ಮನೆ,  ಅಲ್ಲಿಯ ಮತದಾರರು ಮನೆ‌ಮಗಳನ್ನು ಬಿಟ್ಟುಕೊಡಲಿಲ್ಲ. ಬೆಳಗಾವಿ ದಕ್ಷಿಣ ಕ್ಷೇತ್ರದ ಜನರು ಹೆಚ್ಚು ಮತ ನೀಡಿದ್ದು ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಅವರು ಹೇಳಿದರು.

‘ಇದು ನನ್ನ ಗೆಲುವಲ್ಲ, ಬಿಜೆಪಿ ಕಾರ್ಯಕರ್ತರ ಗೆಲುವು. ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಮತ ನೀಡಿದ್ದಾರೆ. ಬೆಳಗಾವಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ’ ಎಂದು ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ದಿವಂಗತ ಸುರೇಶ್ ಅಂಗಡಿ ಕನಸಿನಂತೆಯೇ  ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಬಳಿಕ ಮಂಗಳಾ ಅಂಗಡಿ ಅವರು, ಚುನಾವಣಾ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಸಂಸದರಾಗಿ ಆಯ್ಕೆಯಾದ ಪ್ರಮಾಣ ಪತ್ರ ಸ್ವೀಕರಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com