ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 'ಕಮಲ' ಕ್ಕೆ ಮುಖಭಂಗ: ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ?

ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದರು

Published: 02nd May 2021 10:21 AM  |   Last Updated: 04th May 2021 05:15 PM   |  A+A-


yediyurappa

ಯಡಿಯೂರಪ್ಪ

Posted By : Shilpa D
Source : The New Indian Express

ಮೈಸೂರು: ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದರು.

ಇದಾದ ನಂತರ ನಡೆದ ಹಲವು ಉಪಚುನಾವಣೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿತ್ತು. ಆದರೆ ಶುಕ್ರವಾರ ಹೊರಬಿದ್ದ  ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.

ಕಳೆದ ಎರಡು ವರ್ಷಗಳಿಂದ ನಡೆದ ಹಲವು ಪ್ರತಿ ಉಪ ಚುನಾವಣೆಯಲ್ಲಿೂ ಬಿಜೆಪಿ ಗೆಲುವು ಸಾಧಿಸಿತ್ತು. ಒಕ್ಕಲಿಗರ ಪ್ರಬಲ ಕ್ಷೇತ್ರವಾದ ಕೆಆರ್ ಪೇಟೆಯಲ್ಲಿಯೂ ಕಮಲ ಅರಳಿತ್ತು.

ಮಡಿಕೇರಿಯಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತು. ಸಿಎಂ ಯಡಿಯೂರಪ್ಪ ತವರು ಜಿಲ್ಲೆಯಾದ ಶಿವಮೊಗ್ಗ ಹಾಗೂ ರೆಡ್ಡಿಗಳ ಭದ್ರಕೋಟೆಯಾದ ಬಳ್ಳಾರಿಯಲ್ಲಿ ಪ್ರಕಟವಾದ ಫಲಿತಾಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸಚಿವರುಗಳಾಗ ಕೆ.ಎಸ್ ಈಶ್ವರಪ್ಪ, ಶ್ರೀರಾಮುಲು ಹಾಗೂ ಸಂಸದ ರಾಘವೇಂದ್ರ ಸೇರಿದಂತೆ ಹಲವರು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು.

ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್ ಪಕ್ಷದ ನೈತಿಕ ಸ್ಥೈರ್ಯ ಹೆಚ್ಚಿಸಿದೆ, ಬಳ್ಳಾರಿ ಹಾಗೂ ಜೆಡಿಎಸ್ ಭದ್ರಕೋಟೆ ರಾಮನಗರದಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ, ಜೆಡಿಎಸ್ ಚನ್ನಪಟ್ಟಣ ಮತ್ತು ವಿಜಯಪುರಗಳಲ್ಲಿ ಗೆಲುವು ಸಾಧಿಸಿದೆ. 

ಕೊರೋನಾ ಸಂದರ್ಭದಲ್ಲಿ ಸರಿಯಾದ ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡದ ಸರ್ಕಾರದ ವೈಫಲ್ಯದಿಂದಾಗಿ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. ಜನ ಬಿಜೆಪಿಯನ್ನು ಬಾವಿಗೆ ತಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ವ್ಯಾಪಕ ವಿರೋಧ ವ್ಯಕ್ತ ವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದ್ದಾರೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನಡೆ ಬಿಜೆಪಿ ಸೋಲು ಎಂದು ಪರಿಗಣಿಸಲಾಗುವುದಿಲ್ಲ, ಇವು ಬಿಜೆಪಿಯ ಸಾಂಪ್ರಾದಾಯಿಕ ಕ್ಷೇತ್ರಗಳಲ್ಲ ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಹೇಳಿದ್ದಾರೆ.

ಬಿಜೆಪಿ ಸೋತಿರುವ ಕ್ಷೇತ್ರಗಳು ಸೋತಿರುವುದು  ಒಕ್ಕಲಿಗ ಮತ್ತು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ. ಕೋವಿಡ್ ಸಮಯದಲ್ಲಿ ಜನರ ನಿರೀಕ್ಷೆ ಹೆಚ್ಚು ಇರುತ್ತದೆ, ಉಚಿತ ಆರೋಗ್ಯ ಸೌಲಭ್ಯ ಮತ್ತು ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. 

ಜಾತಿ ಸಮೀಕರಣ, ಕುಟುಂಬ ಮಂತಾದ ವಿಷಯಗಳು ವಾರ್ಡ್ ಮಟ್ಟದಲ್ಲಿ ಪ್ರಮುಖವಾಗುತ್ತವೆ. ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ ಸಮಯವಿದೆ, ಈ ಸಮಯದಲ್ಲಿ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp