ಅರೆಬರೆಯ ಗೋಲ್ಮಾಲ್ ಲೆಕ್ಕದಲ್ಲಿಯೇ ಇಷ್ಟು, ಲೆಕ್ಕಕ್ಕೆ ಸಿಗದಿರುವುದು ಇನ್ನೆಷ್ಟು? ಸುಧಾಕರ್ ತಲೆದಂಡ ಯಾವಾಗ?

ಕೋವಿಡ್-19 ಸೋಂಕಿಗೆ ತುತ್ತಾಗುತ್ತಿರುವವರ ಅಧಿಕೃತ ಲೆಕ್ಕ ನೀಡುವಂತೆ ಒತ್ತಾಯಿಸಿರುವ ಕಾಂಗ್ರೆಸ್ ಸಚಿವ ಸುಧಾಕರ್ ರಾಜಿನಾಮೆ ನೀಡುವಂತೆ ಒತ್ತಾಯಿಸಿದೆ.
ಸುಧಾಕರ್
ಸುಧಾಕರ್

ಬೆಂಗಳೂರು: ಕೋವಿಡ್-19 ಸೋಂಕಿಗೆ ತುತ್ತಾಗುತ್ತಿರುವವರ ಅಧಿಕೃತ ಲೆಕ್ಕ ನೀಡುವಂತೆ ಒತ್ತಾಯಿಸಿರುವ ಕಾಂಗ್ರೆಸ್ ಸಚಿವ ಸುಧಾಕರ್ ರಾಜಿನಾಮೆ ನೀಡುವಂತೆ ಒತ್ತಾಯಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಬಿಎಂಪಿ ಡೆತ್ ಆಡಿಟ್‌ನಲ್ಲಿ 100ಕ್ಕೂ ಹೆಚ್ಚು ಜನ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಮರಣ ಹೊಂದಿದ್ದಾರೆ ಎಂದು ಒಪ್ಪಿಕೊಂಡಿದೆ. ಬೆಂಗಳೂರಿನಲ್ಲಿಯೇ ಇಷ್ಟು, ರಾಜ್ಯಾದ್ಯಂತ ಇನ್ನೆಷ್ಟು? ಇದಕ್ಕೆ ಹೊಣೆಯಾದ ಆರೋಗ್ಯ ಸಚಿವ ಸುಧಾಕರ್ ಅವರ ತಲೆದಂಡ ಯಾವಾಗ ಎಂದು ಪ್ರಶ್ನಿಸಿದೆ. 

ಸಾವಿನಲ್ಲಿ ಸಂಭ್ರಮಿಸುವ ಬಿಜೆಪಿ ಕೊಲೆಗಡುಕರೆ... ಗೆಲ್ಲುವುದು, ಸೋಲುವುದು ಇವೆಲ್ಲವೂ ಸಹಜ ಪ್ರಕ್ರಿಯೆ. ಕೇರಳದಲ್ಲಿ  ಸೊನ್ನೆ ಪಡೆದ ನಿಮ್ಮದೇನು ಪ್ರಲಾಪ?!

ಆಕ್ಸಿಜನ್ ಇಲ್ಲದೆ ನಿತ್ಯ ಜನ ಸಾಯುತ್ತಿದ್ದಾರೆ ಇದರ ಬಗ್ಗೆ ಮಾತನಾಡುವ ನೈತಿಕತೆ ತೋರಿ. ನಿಮ್ಮಿಂದ ಕಾಂಗ್ರೆಸ್ ಮುಕ್ತ ಮಾಡಲಾಗದು, ಆದರೆ ಮನುಷ್ಯರನ್ನೇ ಮುಕ್ತ ಮಾಡುತ್ತಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಆಮ್ಲಜನಕ ಕೊಡುತ್ತಿದೆ ಎಂದು ಡಂಗುರ ಸಾರಿದ್ದರು. ಅಸಲಿಗೆ ಅದು ಸುಳ್ಳು, ಕೇಂದ್ರ ಸರ್ಕಾರ ಆಮ್ಲಜನಕ ನೀಡುವುದಿರಲಿ ರಾಜ್ಯದ ಉತ್ಪಾದನೆಯನ್ನು ರಾಜ್ಯದಲ್ಲೇ ಬಳಸಲು ಮಿತಿ ಹೇರಿದೆ, ಇಲ್ಲಿ ಉತ್ಪಾದಿಸುವ ಆಮ್ಲಜನಕವನ್ನು ಪರರಾಜ್ಯಗಳಿಗೆ ಸದ್ದಿಲ್ಲದೆ ಕಳಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com