ಪಿಎಂ, ಸಿಎಂ, ರಾಷ್ಟ್ರಪತಿ ಮನೆಯಲ್ಲಿ ಇಲ್ಲದ ಸ್ವಿಮ್ಮಿಂಗ್ ಪೂಲ್ ನಿಮಗೆ ಬೇಕೆ: ನೊಂದವರ ನಿಟ್ಟುಸಿರು ತಟ್ಟದೆ ಬಿಡುವುದಿಲ್ಲ!

ದೇಶದ ಏಕೈಕ ಸರ್ಕಾರಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್‌ಪೂಲ್ ಇದೆ ಅದು ರೋಹಿಣಿ ಸಿಂಧೂರಿ ನಿವಾಸದಲ್ಲಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ

ಮೈಸೂರು: ಪ್ರಧಾನಮಂತ್ರಿ ಮನೆಯಲ್ಲೇ ಸ್ವಿಮ್ಮಿಂಗ್‌ ಪೂಲ್ ಇಲ್ಲ, ರಾಷ್ಟ್ರಪತಿಗಳ ಮನೆಯಲ್ಲು ಸ್ವಿಮ್ಮಿಂಗ್‌ಪೂಲ್​ ಇಲ್ಲ, ಆದ್ರೆ ದೇಶದ ಏಕೈಕ ಸರ್ಕಾರಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್‌ಪೂಲ್ ಇದೆ ಅದು ರೋಹಿಣಿ ಸಿಂಧೂರಿ ನಿವಾಸದಲ್ಲಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ.ಮಹೇಶ್, ಕೊರೋನಾ ಸಂದರ್ಭದಲ್ಲಿ ಇನ್ ಡೋರ್ ಜಿಮ್, ಇನ್ ಡೋರ್ ಸ್ವಿಮ್ಮಿಂಗ್ ಪುಲ್ ಏಕೆ  ಬೇಕಿತ್ತು. ನೀವೇನು ಮೈಸೂರಿಗೆ ಬಂದು ಮೂರ್ನಾಲ್ಕು ವರ್ಷ ಆಗಿದೆಯಾ? ಅದು ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು? ಇದಕ್ಕೆ ಹಣ ಎಲ್ಲಿಂದ ಬಂತು? ಅದು ಕಟ್ಟಿರೋದು ಸುಳ್ಳಾ? ಅಂತ ಪ್ರಶ್ನೆಗಳ ಸುರಿಮಳೆಗೈದರು. 

ಇಷ್ಟೇ ಅಲ್ಲದೆ ರಾಜ್ಯದ ಸಿಎಂ ರಾಷ್ಟ್ರದ ಪಿಎಂ ಮನೆಯಲ್ಲಿ ಈಜುಕೊಳ ಇದೆಯಾ?, ರಾಜ್ಯ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಇದೆಯಾ, ನಾವು ನೀವು ಜನರಿಗೆ ಮಾದರಿಯಾಗಿರಬೇಕು. ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ? ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳಾ? ಈಜುಕೊಳದ 50 ಲಕ್ಷ  ಕೊರೊನಾಗೆ ಬಳಸಬೇಕಿತ್ತು. ಅದನ್ನ ನಿರ್ಮಿಸಿರುವ ನಿಮ್ಮನ್ನು ಯಾರು ಕೇಳಬೇಕು? ಉತ್ತರ ಕೊಡಿ ರೊಹಿಣಿ ಸಿಂಧೂರಿಯವರೇ ಅಂತ ಸಾ.ರಾ.ಮಹೇಶ್ ಪ್ರಶ್ನೆ ಹಾಕಿದ್ದಾರೆ.

ಇಷ್ಟೆ ಅಲ್ಲದೆ ನನ್ನ ಮೇಲೆ ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂಬ ಡಿಸಿ ರೋಹಿಣಿ ಸಿಂಧೂರಿ ಹೇಳಿಕೆ ವಿಚಾರಕ್ಕೂ ತಿರುಗೇಟು ಕೊಟ್ಟ ಸಾ.ರಾ.ಮಹೇಶ್, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದೀರಿ, ನಿಮ್ಮ ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು, ಆದ್ರ ಅದೆ ರೀತಿಯ ಪ್ರಕರಣದಲ್ಲಿ ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದೀರಿ ಇದೆಲ್ಲಾ ಸುಳ್ಳಾ? ವಾಲ್ಮಿಕಿ ಜಯಂತಿ ಆಚರಣೆಗೆ ಬರದೆ ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com