ಪ್ರತಿಪಕ್ಷಗಳ ಒತ್ತಡದ ನಂತರ ಸರ್ಕಾರ ಪ್ಯಾಕೇಜ್ ಘೋಷಣೆ: ಸತೀಶ್ ಜಾರಕಿಹೋಳಿ

ಸರ್ಕಾರ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ ಹೊರತು ತೊಂದರೆಯಲ್ಲಿರುವ ಜನರಿಗೆ ನಿಜವಾಗಿ ಸಹಾಯ ಮಾಡುವ ಮನೋಭಾವ ಸರ್ಕಾರಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೋಳಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಸತೀಶ್ ಜಾರಕಿಹೋಳಿ
ಸತೀಶ್ ಜಾರಕಿಹೋಳಿ

ಬೆಳಗಾವಿ: ಸರ್ಕಾರ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ ಹೊರತತು ತೊಂದರೆಯಲ್ಲಿರುವ ಜನರಿಗೆ ನಿಜವಾಗಿ ಸಹಾಯ ಮಾಡುವ ಮನೋಭಾವ ಸರ್ಕಾರಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೋಳಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಸಧ್ಯ ಜಾರಿಯಲ್ಲಿರುವ ಕಠಿಣ ಪರಿಸ್ಥಿತಿಯಲ್ಲಿ ಸಮಯವನ್ನು ನಿಭಾಯಿಸಲು ಜನರಿಗೆ ಸಹಾಯ ಮಾಡುವ ಯಾವುದೇ ಕಲ್ಯಾಣ ಕ್ರಮಗಳನ್ನು ವಿವರಿಸದೆ, ಸರ್ಕಾರವು ಯಾವುದೇ ಉದ್ದೇಶವಿಲ್ಲದೆ ಪ್ಯಾಕೇಜ್ ಘೋಷಿಸಿತು" ಎಂದು ಜಾರಕಿಹೋಳಿ ಆರೋಪಿಸಿದರು.

ಸಂಕಟದಲ್ಲಿರುವವರಿಗೆ ತಮಿಳುನಾಡಿನ ಸರ್ಕಾರವು ತಲಾ 4,000 ರೂ.ಗಳ ಆರ್ಥಿಕ ನೆರವು ಘೋಷಿಸಿದರೆ, ಆಂಧ್ರ ಪ್ರದೇಶ ಸರ್ಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದೆ ಎಂದು ಜಾರಕಿಹೋಳಿ ಹೇಳಿದರು, ಅಂತಹ ಯಾವುದೇ ಕೆಲಸ ಮಾಡದ ಕಾರಣ ರಾಜ್ಯ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ರಾಜ್ಯದ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಲಭ್ಯವಿದ್ದರೂ, ಆಮ್ಲಜನಕದ ಕೊರತೆ ಮತ್ತು ಸಹಾಯಕ ಸಿಬ್ಬಂದಿ ಕೊರತೆ ಇದ್ದಾರೆ ಎಂದು  ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com