ಉಪಚುನಾವಣೆ ಗೆಲುವು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ: ಸಚಿವ ವಿ.ಸೋಮಣ್ಣ

ಉಪಚುನಾವಣೆಯ ಗೆಲುವು ಪಕ್ಷದ ಕಾರ್ಯಕರ್ತ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಭಾನುವಾರ ಹೇಳಿದ್ದಾರೆ.
ವಿ.ಸೋಮಣ್ಣ
ವಿ.ಸೋಮಣ್ಣ

ದಾವಣಗೆರೆ: ಉಪಚುನಾವಣೆಯ ಗೆಲುವು ಪಕ್ಷದ ಕಾರ್ಯಕರ್ತ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಭಾನುವಾರ ಹೇಳಿದ್ದಾರೆ.

ದಾವಣಗೆರೆಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಭಾರೀ ಮತಗಳ ಅಂತರದಿಂದಲೇ ಪಕ್ಷ ಗೆಲುವು ಸಾಧಿಸಲಿದೆ. 2023 ವಿಧಾನಸಭಾ ಚುನಾವಣೆಗೆ ನಾವು ಸಿದ್ಧತೆ ನಡೆಸಿದ್ದೇವೆ. ಉಪಚುನಾವಣೆಯ ಗೆಲುವು ಪಕ್ಷದ ಕಾರ್ಯಕರ್ತರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಹಾನಗಲ್ ನಲ್ಲಿ ಶೇ. 83 ಹಾಗೂ ಸಿಂಧಗಿಯಲ್ಲಿ ಶೇಕಡಾ 69ರಷ್ಟು ಮತದಾನವಾಗಿದೆ. ಸಿಂಧಗಿಯಲ್ಲಿ 18ರಿಂದ 20 ಸಾವಿರ ಅಂತರದಿಂದ ಗೆಲ್ತೀವಿ. ಹಾನಗಲ್ ಕೂಡ ನಾವೇ ಜಯಭೇರಿ ಬಾರಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಚಿವ ಆರ್. ಅಶೋಕ್ ಹಾಗೂ ನನ್ನ ನಡುವೆ ಯಾವುದೇ ಫೈಟ್ ಇಲ್ಲ. ಯಾರನ್ನು ನೇಮಿಸಬೇಕೆಂಬುದು ಸಿಎಂ ಬೊಮ್ಮಾಯಿ ಅವರ ಪರಮಾಧಿಕಾರ. ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ಕೊಟ್ಟರೇನು ಬಿಡಪ್ಪ. ಅದು ಮುಗಿದ ಅಧ್ಯಾಯ. ನಾನು ಒಂದೇ ಸಾರಿ ಹೇಳೋದು, ಎರಡನೇ ಸಾರಿ ಹೇಳಿದ್ರೆ ಮಜಾ ಸಿಗಲ್ಲ.‌ ಹಾಗಾಗಿ ಒಂದು ಬಾರಿ ಹೇಳಿದ್ದೀನಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲದೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ. ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾಡ್ತೀವಿ ಅಂದ್ರೆ ಏನು ಅರ್ಥ. ಅಂದರೆ ಮುಂದಿನ ಸಿಎಂ ಅವರೇ ಎಂದರ್ಥ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com