ಹಾನಗಲ್-ಸಿಂದಗಿ ಉಪ ಚುನಾವಣೆ: ಮತ ಎಣಿಕೆ ಆರಂಭ, ಮಧ್ಯಾಹ್ನ ವೇಳೆಗೆ ಫಲಿತಾಂಶ ಪ್ರಕಟ 

ರಾಜ್ಯದ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಮಧ್ಯಾಹ್ನ ಹೊತ್ತಿಗೆ ಹೊರಬೀಳಲಿದೆ.  ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. 
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ತಮ್ಮ ಪತ್ನಿಯೊಂದಿಗೆ ಮತ ಹಾಕಿದ್ದ ಸಂದರ್ಭ
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ತಮ್ಮ ಪತ್ನಿಯೊಂದಿಗೆ ಮತ ಹಾಕಿದ್ದ ಸಂದರ್ಭ

ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮಂಗಳವಾರ ಮಧ್ಯಾಹ್ನ ಹೊತ್ತಿಗೆ ಹೊರಬೀಳಲಿದೆ.  ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. 

ಸಿಂದಗಿ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ವಿಜಯಪುರದ ಸೈನಿಕ ಶಾಲೆಯಲ್ಲಿ, ಹಾನಗಲ್ ಕ್ಷೇತ್ರದ ಮತ ಎಣಿಕೆ ಕಾರ್ಯ ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ 1,62,852 ಮತ ಚಲಾವಣೆಯಾಗಿದ್ದು, 22 ಸುತ್ತಿನ ಮತ ಎಣಿಕೆ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ. ಇನ್ನು ಹಾನಗಲ್ ನಲ್ಲಿ 1,71, 264  ಮತ ಚಲಾವಣೆಯಾಗಿದ್ದು 19 ಸುತ್ತಿನ ಮತ ಎಣಿಕೆ ನಂತರ ಫಲಿತಾಂಶ ಹೊರಬೀಳಲಿದೆ.

ಮೊನ್ನೆ 30ರಂದು ಆ ಎರಡು ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಸಿಂದಗಿ ಕ್ಷೇತ್ರದಲ್ಲಿ ಶೇಕಡಾ 69.41ರಷ್ಟು ಮತ್ತು ಹಾನಗಲ್ ನಲ್ಲಿ ಶೇಕಡಾ 83.72ರಷ್ಟು ಮತದಾನವಾಗಿದೆ. 

2023ರ ವಿಧಾನಸಭೆ ಚುನಾವಣೆಗೆ ಮುನ್ನ ಇದು ಮಿನಿ ಸಮರವಾಗಿದ್ದು ರಾಜ್ಯದ ರಾಜಕೀಯ ದಿಕ್ಸೂಚಿಯನ್ನು ಸೂಚಿಸಲಿದೆ ಎಂದು ಹೇಳಲಾಗುತ್ತದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಹಾನಗಲ್ ನಿಂದ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್ ನಿಂದ ಸಿಂದಗಿ ಕ್ಷೇತ್ರದಲ್ಲಿ ಅಶೋಕ್ ಮನಗೂಳಿ, ಹಾನಗಲ್ ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್ ನಿಂದ ಸಿಂದಗಿಯಲ್ಲಿ ನಾಜಿಯಾ ಶಕಿಲಾ ಅಂಗಡಿ, ಹಾನಗಲ್ ನಿಂದ ನಿಯಾಜ್ ಖಾನ್ ಸ್ಪರ್ಧಿಸಲಿದ್ದಾರೆ. 

ಮತ ಎಣಿಕೆ ಕೇಂದ್ರಗಳಲ್ಲಿ ತೀವ್ರ ಭದ್ರತೆ: ಮತ ಎಣಿಕೆ ನಡೆಯುವಾಗ ಮತ್ತು ಫಲಿತಾಂಶ ಹೊರಬಿದ್ದ ಮೇಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ಸಹ ನಿಯೋಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com