ಹಾನಗಲ್ ಉಪ ಚುನಾವಣೆ: ಬಿಜೆಪಿ 'ಪವರ್' ಕಸಿಯಿತೇ 'ಅಪ್ಪು' ಸಾವು?
ಸಿಎಂ ತವರು ಜಿಲ್ಲೆ ಹಾನಗಲ್ ನಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂಬ ಬಗ್ಗೆ ವಿಮರ್ಶೆ ನಡೆಯುತ್ತಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.
Published: 03rd November 2021 01:21 PM | Last Updated: 03rd November 2021 01:28 PM | A+A A-

ಅಪ್ಪು ಅಂತ್ಯಸಂಸ್ಕಾರದಲ್ಲಿ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಸಿಎಂ ತವರು ಜಿಲ್ಲೆ ಹಾನಗಲ್ ನಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂಬ ಬಗ್ಗೆ ವಿಮರ್ಶೆ ನಡೆಯುತ್ತಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.
ನಟ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಅಚ್ಚು ಕಟ್ಟಾಗಿ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಜನತೆಯ ಹೃದಯ ಗೆದ್ದಿದ್ದಾರೆ. ಕುಟುಂಬ ಸದಸ್ಯನಂತೆ ನಿಂತ ಸಿಎಂ ಎಲ್ಲಾ ಕಾರ್ಯ ವಿಧಾನಗಳನ್ನು ಸಂಪೂರ್ಣಗೊಳಿಸಿದರು. ಆದರೆ ಮತ್ತೊಂದೆಡೆ ತಮ್ಮ ತವರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಲ್ಲಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಕ್ಟೋಬರ್ 30 ರಂದು ಹಾನಗಲ್ ವಿಧಾನಸಭೆ ಉಪ ಚುನಾವಣೆಗೆ ಮತದಾನ ನಡೆದಿತ್ತು, ಆದರೆ ಅಕ್ಟೋಬರ್ 30 ರಂದು ನಟ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ್ದರು, ಹೀಗಾಗಿ ಟಿವಿ ಮುಂದೆ ಪುನೀತ್ ಅಂತಿಮ ಕಾರ್ಯ ವಿಧಾನಗಳ ಬಗ್ಗೆ ನೋಡುತ್ತಾ ಕುಳಿತ ಯುವಕರ ಮತದಾನ ಮಾಡಲು ಆಸಕ್ತಿ ತೋರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಈಗಲೂ ಪುನೀತ್ ನಿಧನದ ಸುದ್ದಿ ನಂಬಲಾಗುತ್ತಿಲ್ಲ: ರಾಮ್ ಚರಣ್
ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರು ಗ್ರಾಮಸ್ಥರ ಮನೆ ಬಳಿಗೆ ವಾಹನ ತೆಗೆದುಕೊಂಡು ಹೋಗಿ ಮತದಾನ ಮಾಡುವಂತೆ ಹೇಳಿದ್ದಾರೆ. ನಮ್ಮ ನೆಚ್ಚಿನ ನಾಯಕ ಸಾವನ್ನಪ್ಪಿದ್ದಾನೆ ನಮಗೆ ಮತದಾನ ಮಾಡಲು ಮೂಡ್ ಇಲ್ಲ ಎಂದು ಗ್ರಾಮಸ್ಥರು ಹೇಳಿ ಕಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಜನರನ್ನು ಕರೆದುಕೊಂಡು ಬಂದು ಮತದಾನ ಮಾಡಿಸುವುದು ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿತ್ತು, ವಿಶೇಷವಾಗಿ ಯುವಕರು ಮತ್ತು ಹಿರಿಯರು, ಇದರ ಜೊತೆಗೆ ಹಲವು ಹಿರಿಯ ಮಹಿಳೆಯರು ಕೂಡ ಮತದಾನ ಮಾಡಲು ನಿರಾಕರಿಸಿದರು.
ಪುನೀತ್ ರಾಜಕುಮಾರ್ ನಿಧನದ ನಂತರ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳನ್ನು ನೋಡುತ್ತಾ ಜನರು ಕುಳಿತಿದ್ದರು, ಇದರ ಪರಿಣಾಮ ಮೂರು ದಿನಗಳ ಕಾಲ ಟಿವಿಯ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಎಲ್ಲರೂ ಬಂದು ಮತದಾನ ಮಾಡಿದ್ದರೇ ಬಿಜೆಪಿ ಗೆಲುವು ಸಾಧಿಸುತ್ತಿತ್ತು ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.