ಜಮ್ಮು ಕಾಶ್ಮೀರಕ್ಕೆ ತೆರೆದ ಜೀಪಿನಲ್ಲಿ ಪ್ರಯಾಣಿಸಿದ್ದ ದೇವೇಗೌಡರು! ಅವರು ಹೆಚ್ಚು ಕಾಲ ಅಧಿಕಾರದಲ್ಲಿದ್ದಿದ್ದರೆ ಕಣಿವೆ ಪರಿಸ್ಥಿತಿ ಬದಲಾಗುತ್ತಿತ್ತು!

ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ದೇವೇಗೌಡರ ಆತ್ಮಚರಿತ್ರೆಯಲ್ಲಿ, ಭಾರತ-ಪಾಕಿಸ್ತಾನದ ಸಮಸ್ಯೆಗಳನ್ನು ಪರಿಹರಿಸುವ ಗೌಡರ ಬಯಕೆ ಮತ್ತು ಉದ್ದೇಶವನ್ನು ವಿವರಿಸಲಾಗಿದೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ದೇವೇಗೌಡರ ಆತ್ಮಚರಿತ್ರೆಯಲ್ಲಿ, ಭಾರತ-ಪಾಕಿಸ್ತಾನದ ಸಮಸ್ಯೆಗಳನ್ನು ಪರಿಹರಿಸುವ ಗೌಡರ ಬಯಕೆ ಮತ್ತು ಉದ್ದೇಶವನ್ನು ವಿವರಿಸಲಾಗಿದೆ.

ದೇವೇ ಗೌಡರಿಗೆ ಚಿಕಿತ್ಸೆ ನೀಡಿದ್ದ ಮತ್ತ ಪಾಕ್ ಪ್ರಧಾನಿ ನವಾಜ್ ಷರೀಫ್  ತಂದೆ ಅವರ ಸ್ನೇಹಿತರಾಗಿದ್ದ ಮುಂಬೈನ ಇಎನ್‌ಟಿ ಸರ್ಜನ್ ಡಾ. ಹಿರಾನಂದನಿ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು.

ಎರಡನೇ ಬಾರಿಗೆ ಅಂದರೆ  1996 ಆಗಸ್ಟ್ 5 ರಂದು ದೇವೇಗೌಡರು ಜಮ್ಮು ಕಾಶ್ಮೀರಕ್ಕೆ ರಜೌರಿ ವಿಮಾನ ನಿಲ್ದಾಣದಿಂದ ತೆರೆದ ಜೀಪಿನಲ್ಲಿ ಪ್ರಯಾಣಿಸಲು ಬಯಸಿದ್ದರು, ಆದರೆ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧಿಲ್ಲನ್ ಇದಕ್ಕೆ ವಿರೋಧಿಸಿದ್ದರು. ನೀವು ಹೇಳಿದ್ದನ್ನು ನಾನು ಮಾಡಿದರೇ ದೇಶ ನನ್ನನ್ನು ನೇಣಿಗೆ ಹಾಕುತ್ತದೆ ಎಂದು ಗೌಡರಿಗೆ ಹೇಳಿದ್ದರು.  ಅದಕ್ಕೆ ದೇವೇಗೌಡರು ನೀಡಿದ ಉತ್ತರ ಹೀಗಿತ್ತು, ಏನು ಆಗುವುದಿಲ್ಲ, ಆತಂಕ ಬೇಡ, ನೀವು ಗಾಡಿ ಓಡಿಸಿ ನಾನು ನಿಮ್ಮ ಪಕ್ಕ ಕೂರುತ್ತೇನೆ, ಒಂದು ಯಾರಾದರೂ ನಮ್ಮ ಮೇಲೆ ಗ್ರೇನೇಡ್ ಎಸೆದರೂ ಎಂದು ಕಲ್ಪಿಸಿಕೊಳ್ಳಿ , ಆಗ ಇಬ್ಬರು ಸಾಯುತ್ತೇವೆ, ನಿಮ್ಮನ್ನು ಗಲ್ಲಿಗೇರಿಸುವ ಪ್ರಶ್ನೆ ಎಲ್ಲಿ ಬರುತ್ತದೆ ಎಂದಿದ್ದರು.

ಆತ್ಮ ಚರಿತ್ರೆ ಬರೆಯುವುದಾಗಿ 2019 ರ ಡಿಸೆಂಬರ್ 4ರಂದು ಲೇಖಕರು ಲೆಫ್ಟಿನೆಂಟ್ ಜನರಲ್ ಧಿಲ್ಲನ್ ಅವರ ಸಂದರ್ಶನ ನಡೆಸಿದ್ದರು. ದೇವೇಗೌಡರ ತೆರೆದ ಜೀಪ್ ಪ್ರಯಾಣ ನನಗೆ ಅಚ್ಚರಿ ಮೂಡಿಸಿತ್ತು ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿಗಳಾದವರು ಇದನ್ನು ಮಾಡುವುದಿಲ್ಲ, ಎಲ್ಲಾ ಸಮಯದಲ್ಲೂ ಅವರನ್ನು ರಕ್ಷಿಸಬೇಕಂದು ಬಯಸುತ್ತಾರೆ, ಅವರಿಗಾಗಿ ವಾಹನಗಳನ್ನು ಕಾದಿರಿಸಬೇಕಾಗುತ್ತದೆ, ಆದರೆ ಗೌಡ ಸಾಬ್ ಯಾವಾಗಲೂ ಕನಿಷ್ಟ ರಕ್ಷಣೆಯೊಂದಿಗೆ ಪ್ರಯಾಣಿಸುತ್ತಿದ್ದರು.  ಕೆಚ್ಚೆದೆಯ ಪ್ರಧಾನಿಯಾಗಿದ್ದರು. ಅವರು ಹೆಚ್ಚಿನ ಕಾಲ ಅಧಿಕಾರದಲ್ಲಿದ್ದರೇ ಕಣೆವೆ ಪರಿಸ್ಥಿತಿ ಬದಲಾಗುತ್ತಿತ್ತು.

ವಿತ್ತ ಸಚಿವ ಪಿ ಚಿದಂಬರಂ ಅವರು ಮಂಡಿಸಿದ ಬಜೆಟ್‌ನಲ್ಲಿ ಅವರು ಹೇಗೆ ಮಧ್ಯಪ್ರವೇಶಿಸಿದರು, 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಾಜಪೇಯಿ ಅವರಿಗೆ ಬರೆದ ಪತ್ರಗಳು ಮುಂತಾದವುಗಳ ಬಗ್ಗೆ ಪುಸ್ತಕದಲ್ಲಿ ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com