ಪಿಎಂ ಹುದ್ದೆ ಬೇಡವೆಂದು ಕಾಲು ಮುಟ್ಟಿ ಬೇಡಿಕೊಂಡಿದ್ದ ಗೌಡರು! ವಾಜಪೇಯಿಗೆ ಪರ್ಯಾಯ ಜಾತ್ಯತೀತ ನಾಯಕರಿಲ್ಲ ಎಂದು ಹೇಳಬೇಕೇ?

ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡರಿಗೆ ಪ್ರಧಾನ ಪಟ್ಟದ ಆಸೆ ಇರದಿದ್ದರೂ ಜ್ಯೋತಿ ಬಸು ಅವರ ಒತ್ತಾಯದ ಮೇರೆಗೆ ಒಪ್ಪಿಕೊಂಡಿದ್ದರು, ಆದರೆ ನಿರೀಕ್ಷಿಸಿದ್ದಂತೆ 11 ತಿಂಗಳ ಬಳಿಕ ಕಾಂಗ್ರೆಸ್ ತನ್ನ ಬೆಂಬಲ ವಾಪಸ್ ಪಡೆಯಿತು.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡರಿಗೆ ಪ್ರಧಾನ ಪಟ್ಟದ ಆಸೆ ಇರದಿದ್ದರೂ ಜ್ಯೋತಿ ಬಸು ಅವರ ಒತ್ತಾಯದ ಮೇರೆಗೆ ಒಪ್ಪಿಕೊಂಡಿದ್ದರು, ಆದರೆ ನಿರೀಕ್ಷಿಸಿದ್ದಂತೆ 11 ತಿಂಗಳ ಬಳಿಕ ಕಾಂಗ್ರೆಸ್ ತನ್ನ ಬೆಂಬಲ ವಾಪಸ್ ಪಡೆಯಿತು.

ಪ್ರಧಾನಿಯಾಗುವ ಮುನ್ನ ದೇವೇಗೌಡರಿಗೆ ಬಂದಿದ್ದ ಆಲೋಚನೆಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಚರಣ್ ಸಿಂಗ್, ವಿಪಿ ಸಿಂಗ್ ಮತ್ತು ಚಂದ್ರಶೇಖರ್ ಅವರಿಗೆ ಕಾಂಗ್ರೆಸ್ ಏನು ಮಾಡಿದೆ ಎಂಬುದು ನಮಗೆಲ್ಲಾ ತಿಳಿದಿಲ್ಲವೇ, ಇನ್ನೂ ಅವರು ನನ್ನನ್ನು ಬಿಡುತ್ತಾರೆಯೇ? ದಯವಿಟ್ಟು ನಿಮ್ಮ ಮನಸ್ಸನ್ನು ಬದಲಾಯಿಸಿ, ನನಗೆ ಹಿಂದಿ ಭಾಷೆಯಲ್ಲಿ ಪರಿಣಿತಿಯಿಲ್ಲ, ಜೊತೆಗೆ ಈ ದೇಶದ ಉದ್ದಗಲಕ್ಕೆ ನಾನು ಸಂಚರಿಸಿಲ್ಲ, ನೀವು ನಮ್ಮ ಹಿರಿಯ ನಾಯಕರು, ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ನನಗೆ ಈ ಹುದ್ದೆ ಬೇಡ ಎಂದು ದೇವೇಗೌಡರು ಜ್ಯೋತಿ ಬಸು ಅವರಿಗೆ ಮನವಿ ಮಾಡಿದ್ದರೆಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಅವರು ನನ್ನ ಮಾತು ಕೇಳುವುದಿಲ್ಲವೆಂದು ಅರಿವಿಗೆ ಬಂದಾಗ ನಾನು ಅವರ ಕಾಲು ಮುಟ್ಟಿ ಮನವಿ ಮಾಡಿಕೊಂಡು, ನನ್ನ ವಾದವನ್ನು  ಒಪ್ಪಿಕೊಳ್ಳುವಂತೆ ಕೇಳಿಕೊಂಡಿದ್ದೆ ಎಂದು ದೇವೇಗೌಡರು  ಹೇಳಿಕೊಂಡಿದ್ದಾರೆ.

ಆದರೆ ಜ್ಯೋತಿ ಬಸು ಎಷ್ಟರಮಟ್ಟಿಗೆ ನನಗೆ ಹೇಳಿದರೆಂದರೇ, “ಮಿಸ್ಟರ್ ಗೌಡ, ವಾಜಪೇಯಿಯವರಿಗೆ ಪರ್ಯಾಯ ಜಾತ್ಯತೀತ ನಾಯಕರು ನಮ್ಮಲ್ಲಿಲ್ಲ ಎಂದು ನಾನು ಹೋಗಿ ಭಾರತದ ಜನರಿಗೆ ನಾನು ಹೇಳಬೇಕೆ? ಜಾತ್ಯತೀತ ಪ್ರಧಾನಿಗಾಗಿ ನಾವು ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕೆ ಎಂದು ಪ್ರಶ್ನಿಸಿದ್ದರು.

ದೇವೇಗೌಡರು ಪ್ರಧಾನಿಯಾಗಿದ್ದರ ಬಗ್ಗೆ ಪುಸ್ತಕದಲ್ಲಿ ಸ್ವಾರಸ್ಯಕರವಾಗಿ ಬರೆದಿರುವ ಲೇಖಕ ಸುಗತ ಶ್ರೀನಿವಾಸ ರಾಜು ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹಲವು ಮಾಹಿತಿ ನೀಡಿದ್ದಾರೆ.

ದೇವೇಗೌಡರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಲು ಜ್ಯೋತಿ ಬಸು ಮತ್ತು ಅಂದಿನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಹರ್ಕಿಶನ್ ಸಿಂಗ್ ಸುರ್ಜಿತ್ ಅವರ ಪ್ರಜ್ಞಾಪೂರ್ವಕ ನಿರ್ಧಾರ ಮಾಡಿದ್ದರು.ಇದು ದೇವೇಗೌಡರ ಆಡಳಿತ ಸಾಮರ್ಥ್ಕ್ಯಕ್ಕೆ ಸಾಕ್ಷಿಯಾಗಿತ್ತು  ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com