ಭಾರತದಲ್ಲಿ ನಡೆದಿರುವ ಯಾವುದೇ ಹಗರಣ ತಾರ್ಕಿಕ ಅಂತ್ಯ ಕಂಡಿಲ್ಲ: ಕುಮಾರಸ್ವಾಮಿ ಬೇಸರ

ಭಾರತದಲ್ಲಿ ಇದುವರೆಗೂ ನಡೆದಿರುವ ಯಾವುದೇ ಹಗರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ, ಜೊತೆಗೆ ತಪ್ಪಿಗೆ ಶಿಕ್ಷೆ ದೊರೆತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಭಾರತದಲ್ಲಿ ಇದುವರೆಗೂ ನಡೆದಿರುವ ಯಾವುದೇ ಹಗರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ, ಜೊತೆಗೆ ತಪ್ಪಿಗೆ ಶಿಕ್ಷೆ ದೊರೆತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಜನ್ ಧನ್ ಖಾತೆಯಿಂದ 6,000 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಬೇಕು ಎಂಬ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಸಲಹೆಗೆ ಅವರು ಪ್ರತಿಕ್ರಿಯಿಸಿದರು.

“ನಾನು ಈ ವಿಷಯವನ್ನು ಎತ್ತಿದ್ದರಿಂದ ಅದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸತ್ಯಾಸತ್ಯತೆ ಹೊರತರಲು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ' ಎಂದು ಜೆಡಿಎಸ್ ಕಾರ್ಯಾಗಾರ ‘ಜನತಾ ಸಂಗಮ’ದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಎಲ್ಲಾ ದೊಡ್ಡ ಹಗರಣಗಳ ಭವಿಷ್ಯವು ಒಂದೇ ಆಗಿರುತ್ತದೆ, ಸಣ್ಣ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ ಮತ್ತು ದೊಡ್ಡ ವ್ಯಕ್ತಿಗಳು ತಪ್ಪಿಸಿಕೊಳ್ಳುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಗಣಿಗಾರಿಕೆ ಲಂಚ ವಿಚಾರದಲ್ಲಿ 150 ಕೋಟಿ ರೂ.ಗಳ ಆಧಾರ ರಹಿತ ಆರೋಪ ಮಾಡಿದರು, ಆಗರೆ  ಅಂತಹ ಯಾವುದೇ ಹಗರಣಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com