ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆ: ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಸ್ಪರ್ಧೆ ಸಾಧ್ಯತೆ

ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಚುನಾವಣೆಗಿನ್ನೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಈ ನಡುವೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಎಲ್ಲಾ 25 ಪರಿಷತ್ ಸ್ಥಾನಗಳಿಗೆ ಅಥವಾ 20 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದೆಯೇ ಎಂಬ ಕುರಿತು ಎಲ್ಲರಲ್ಲಿಯೂ ಕುತೂಹಲ ಮೂಡತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ/ವಿಜಯಪುರ: ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಚುನಾವಣೆಗಿನ್ನೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಈ ನಡುವೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಎಲ್ಲಾ 25 ಪರಿಷತ್ ಸ್ಥಾನಗಳಿಗೆ ಅಥವಾ 20 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದೆಯೇ ಎಂಬ ಕುರಿತು ಎಲ್ಲರಲ್ಲಿಯೂ ಕುತೂಹಲ ಮೂಡತೊಡಗಿದೆ.

ಕುತೂಹಲಗಣ ನಡುವೆಯೇ ವಿಜಯಪುರ-ಬಾಗಲಕೋಟೆ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಸ್ಥಳೀಯ ಮುಖಂಡರು ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಪಕ್ಷ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆಂದು ತಿಳಿದುಬಂದಿದೆ.

ಎದುರಾಗುವ ಭಿನ್ನಾಭಿಪ್ರಾಯಗಳನ್ನು ದೂರಾಗಿಸಲು ಹಾಲಿ ಎಂಎಲ್‌ಸಿಗಳಾದ ಎಸ್‌ಆರ್‌ ಪಾಟೀಲ್‌ ಮತ್ತು ಸುನೀಲಗೌಡ ಇಬ್ಬರಿಗೂ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ವಿಜಯಪುರ-ಬಾಗಲಕೋಟೆಯ ಒಂದು ಸ್ಥಾನದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದೆ.

ಎರಡು ಬಾರಿ ಶಾಸಕರಾಗಿದ್ದ ಪಿ.ಎಚ್.ಪೂಜಾರ್ ಅವರಿಗೆ ಪಕ್ಷ ಟಿಕೆಟ್ ನೀಡಿದ್ದು, ಈಗಾಗಲೇ ಪೂಜಾರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷವು ಸುನೀಲಗೌಡ ಪಾಟೀಲ್‌ಗೆ ಬೆಂಬಲ ನೀಡುತ್ತಿದ್ದು ಎಸ್‌ಆರ್ ಪಾಟೀಲ್ ತಮಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದರೂ ಬಿಟ್ಟುಕೊಡಲು ಪಾಟೀಲ್ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ.

ಹೀಗಾಗಿ ಭಿನ್ನಾಭಿಪ್ರಾಯ ತಪ್ಪಿಸಲು ಪಕ್ಷವು ಇಬ್ಬರು ಹಾಲಿ ಎಂಎಲ್‌ಸಿಗಳಿಗೂ ಟಿಕೆಟ್‌ ನೀಡಲು ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈ ನಡುವೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುನೀಲಗೌಡ ಪಾಟೀಲ ಅವರು, ನನ್ನ ಬಳಿ ಅಂತಹ ಯಾವುದೇ ಚಿಂತನೆಗಲಿಲ್ಲ ಎಂದು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com