ಕೆಪಿಸಿಸಿ ಕಚೇರಿಯ 'ಪಿಸುಮಾತು' ಪ್ರಕರಣದ ರೂವಾರಿ ಉಗ್ರಪ್ಪ ವಿರುದ್ಧ ಶಿಸ್ತು ಕ್ರಮವಿಲ್ಲವೇಕೆ, ಡಿಕೆಶಿ ಅಸಹಾಯಕ?
ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಕೆಸರೆರಚಾಟ ಮುಂದುವರಿಸಿವೆ.
Published: 25th November 2021 01:17 PM | Last Updated: 25th November 2021 02:03 PM | A+A A-

ಡಿಕೆ ಶಿವಕುಮಾರ್
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಕೆಸರೆರಚಾಟ ಮುಂದುವರಿಸಿವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪರಿಷತ್ ಚುನಾವಣೆಯಲ್ಲಿ ಯಾರಾದರೂ ಬಂಡಾಯವಾಗಿ ಸ್ಪರ್ಧಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ. ಆದರೆ ಡಿಕೆಶಿ ತಕ್ಕಡಿ ಎದ್ದೇಳುತ್ತಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲೇ ವ್ಯಂಗ್ಯವಾಡಿದ್ದ ಉಗ್ರಪ್ಪ ವಿರುದ್ಧ ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ? ಭಯವೋ, ಬೆದರಿಕೆಯೋ? ಅಸಹಾಯಕ ಡಿಕೆಶಿ ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಕಚೇರಿಯಲ್ಲೇ ನಡೆದ "ಪಿಸುಮಾತು" ಪ್ರಕರಣ ನಡೆದು ಅದೆಷ್ಟೋ ದಿನಗಳಾದರೂ ಪ್ರಕರಣದ ರೂವಾರಿ ಉಗ್ರಪ್ಪ ವಿರುದ್ಧ ಶಿವಕುಮಾರ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವೇಕೆ? ಉಗ್ರಪ್ಪ ಅವರು ಸಿದ್ದರಾಮಯ್ಯ ಬಣದವರೆಂಬ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯದ ಸಲೀಂ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲಾಯ್ತೇ? ಎಂದು ಲೇವಡಿ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲೇ ನಡೆದ "ಪಿಸುಮಾತು" ಪ್ರಕರಣ ನಡೆದು ಅದೆಷ್ಟೋ ದಿನಗಳಾದರೂ ಪ್ರಕರಣದ ರೂವಾರಿ ಉಗ್ರಪ್ಪ ವಿರುದ್ಧ @DKShivakumar ಅವರಿಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವೇಕೆ?
— BJP Karnataka (@BJP4Karnataka) November 25, 2021
ಉಗ್ರಪ್ಪ ಅವರು ಸಿದ್ದರಾಮಯ್ಯ ಬಣದವರೆಂಬ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯದ ಸಲೀಂ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲಾಯ್ತೇ?#ಅಸಹಾಯಕಡಿಕೆಶಿ