ಕೋಲಾರ: ಬೆಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿ, ಮನೆಗಳು ಉರುಳಿದ್ದು, ಬುಧವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋಲಾರದಲ್ಲಿ ಸಿದ್ದರಾಮಯ್ಯ
ಕೋಲಾರದಲ್ಲಿ ಸಿದ್ದರಾಮಯ್ಯ

ಕೋಲಾರ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿ, ಮನೆಗಳು ಉರುಳಿದ್ದು, ಬುಧವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶ ಸಮೀಪದಲ್ಲಿ ರೈತ ಮುನಿಯಪ್ಪ ಎಂಬುವರಿಗೆ ಸೇರಿದ ಆಲೂಗಡ್ಡೆ ಬೆಳೆ 1 ಎಕರೆ ಪ್ರದೇಶದಲ್ಲಿ ನಾಶವಾಗಿರುವುದನ್ನು ವೀಕ್ಷಿಸಿದರು. ಬಳಿಕ ಖಾಜಿಕಲ್ಲಹಳ್ಳಿಯ ಮುನಿರಾಜು ಎಂಬುವರ ಜಮೀನು ನೀರಿನಿಂದ ಹಾಳಾಗಿರುವುದನ್ನು ಪರಿಶೀಲಿಸಿದರು. ನಾಗಾಲಾಪುರದಲ್ಲಿ ಮುದ್ದುರಾಜ್ ಎಂಬುವರ 4 ಎಕರೆ ರಾಗಿ ಹೊಲ, ನಾರಾಯಣಸ್ವಾಮಿ ಎಂಬುವರ ಹೂಗಳಿ ತೋಟ ಮತ್ತು ನಾಗರಾಜ್ ಎಂಬುವವರ 1 ಎಕರೆ ಟೊಮೆಟೋ ತೋಟ ವೀಕ್ಷಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಪರಿಹಾರದ ಹಣವನ್ನು ಸರ್ಕಾರ ನೀಡಬೇಕು. ಸರ್ಕಾರ ಕೂಡಲೇ ಪರಿಹಾರ ನೀಡದೇ ಹೋದಲ್ಲಿ, ಮುಂಬರುವ ಅಭಿವೇಶವನದಲ್ಲಿ ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ. ಮಳೆಯಿಂದ ಆಗಿರುವ ಹಾನಿಗೆ ಎನ್'ಡಿಆರ್'ಎಫ್ ಪ್ರಕಾರವೇ ಪರಿಹಾರ ನೀಡಬೇಕಿಲ್ಲ. ಸರ್ಕಾರ ತನ್ನ ಖಜಾನೆಯಿಂದಲೂ ಹಣ ನೀಡುವ ಕೆಲಸ ಮಾಡಬೇಕು. ಬೆಳೆ ನಷ್ಟವಾಗಿರುವುದನ್ನು ಕೇಂದ್ರದ ಮುಂದೆ ಪ್ರತಿಪಾದನೆ ಮಾಡಿ ಕೇಂದ್ರ ಸರ್ಕಾರದಿಂದ ಹೆಚ್ಚು ಪರಿಹಾರ ಹಣ ಪಡೆದುಕೊಳ್ಳಲಿ. ಹಾಗೆಂದು ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಕೊಡಬಾರದು ಎಂದೇನೂ ಇಲ್ಲ. ಈ ಬಗ್ಗೆ ಪತ್ರ ಬರೆಯಲಾಗುವುದು. ಅಲ್ಲದೆ, ಡಿ.13ರ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ನೀಡಿದರೆ. ಸಂತೋಷ ಇಲ್ಲವಾದರೆ, ತೀವ್ರವಾಗಿ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಪ್ರವಾಹ ಬಂದ ತಕ್ಷಣ ರೈತರಿಗೆ ಮೊದಲ ಹಂತದ ಪರಿಹಾರ ಬಿಡುಗಡೆ ಮಾಡಿತ್ತು, ಆದರೆ, ಬಿಜೆಪಿ ಸರ್ಕಾರ ಇನ್ನೂ ಸಮೀಕ್ಷೆಯನ್ನೇ ಆರಂಭಿಸಿಲ್ಲ. ಒಂದು ರೂಪಾಯಿ ಪರಿಹಾರ ನೀಡಿಲ್ಲ. ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಜಿಲ್ಲಾ ಮಂತ್ರಿಗಳು ಎಲ್ಲೂ ಹೋಗುತ್ತಿಲ್ಲ ಎಂದು ನಾವೆಲ್ಲ ಹೇಳಿದ ಮೇಲೆ ಮುಖ್ಯಮಮಂತ್ರಿಗಳು 2-3 ಕಡೆ ಕಾಟಾಚಾರಕ್ಕೆ ಹೋಗಿದ್ದಾರೆಂದು ಲೇವಡಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com