ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ‌ ಸಂಘ: ಆರ್ ಎಸ್ ಎಸ್ ಬಗ್ಗೆ ಜಗ್ಗೇಶ್ ಗುಣಗಾನ!

ನಾನು ಕಂಡ ಆರ್‌ಎಸ್‌ಎಸ್‌ ಜಾತಿ ಧರ್ಮ ಮೀರಿದ ಮಾತೃ ಹೃದಯಿ ಸಂಘಟನೆ. ಕೊರೊನಾ ಸಂದರ್ಭವಾಗಲಿ, ನೆರೆ ಬಂದ ಸಂದರ್ಭವಾಗಲಿ, ರಾಷ್ಟ್ರಕ್ಕೆ ಸಂಕಷ್ಟ ಬಂದಾಗಲೂ ಆಗಲಿ, ವಿದ್ಯಾದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ. ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥ ಸೇವೆ ಮಾಡುವ ಮಾತೃ ಹೃದಯಿ ಸಂಸ್ಥೆ .
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಸಂಘದ ಬಗ್ಗೆ ಮಾತನಾಡುವ ಮುನ್ನ ಅದರ ನಿಸ್ವಾರ್ಥ ಗುಣ ಅರಿಯಿರಿ‘ ಎಂದು ನಟ ಜಗ್ಗೇಶ್ ಟ್ವಿಟರ್‌ನಲ್ಲಿ ಆರ್‌ಎಸ್‌ಎಸ್‌ ಗುಣಗಾನ ಮಾಡಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಕೆಲ ರಾಜಕೀಯ ನಾಯಕರು ಆರ್‌ಎಸ್‌ಎಸ್ ಬಗ್ಗೆ ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ ಜಗ್ಗೇಶ್ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಕಂಡ ಆರ್‌ಎಸ್‌ಎಸ್‌ ಜಾತಿ ಧರ್ಮ ಮೀರಿದ ಮಾತೃ ಹೃದಯಿ ಸಂಘಟನೆ. ಕೊರೊನಾ ಸಂದರ್ಭವಾಗಲಿ, ನೆರೆ ಬಂದ ಸಂದರ್ಭವಾಗಲಿ, ರಾಷ್ಟ್ರಕ್ಕೆ ಸಂಕಷ್ಟ ಬಂದಾಗಲೂ ಆಗಲಿ, ವಿದ್ಯಾದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ. ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥ ಸೇವೆ ಮಾಡುವ ಮಾತೃ ಹೃದಯಿ ಸಂಸ್ಥೆ ಎಂದರೆ ಅದು ಆರ್‌ಎಸ್‌ಎಸ್‌ ಒಂದೆ‘ ಎಂದು ಜಗ್ಗೇಶ್ ಹೇಳಿದ್ದಾರೆ.

‘ಆ ಸಂಸ್ಥೆಯ ಸಂಪರ್ಕ ದೊರಕಿದರೆ ಅಂಥವರು ತಮಗರಿಯದೆ ಸಾತ್ವಿಕನಾಗಿ ಸ್ವಾರ್ಥಬಿಟ್ಟು ಸಮಾಜಕ್ಕೆ ಹೆಗಲುಕೊಡುವ ಕರ್ಮಯೋಗಿ ಆಗುತ್ತಾನೆ. ದೂರನಿಂತು ಬೆಟ್ಟ ನೋಡುವರಿಗೂ, ಆ ಬೆಟ್ಟ ಏರಿದವರಿಗೂ ವಿವರಣೆಗೆ ವ್ಯತಾಸವುಂಟು. ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು ಕಾರಣ ಅದರ ಮಾತೃರೂಪ ಹಾಗು ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ‌ ಸಂಘವಿದು‘ ಎಂದು ಹೇಳಿದ್ದಾರೆ.

‘ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿಧ್ಯಾವಂತರು ರಾಷ್ಟ್ರಪ್ರೇಮಿಗಳು, ಆತ್ಮ ಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು. ಅವರಿಗೆ ದೇಶವೇ ಮನೆ, ದೇಶವಾಸಿಗಳೇ ಬಂಧುಗಳು. ಅವರ ನಿಸ್ವಾರ್ಥ ಸಮಾಜಸೇವೆಯೇ ದೇವರ ಪೂಜೆ. ಆ ಸಂಘದ ಬಗ್ಗೆ ಮಾತಾಡುವ ಮುನ್ನ ಅದರ ನಿಸ್ವಾರ್ಥಗುಣ ಅರಿಯಿರಿ‘ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com